ಇಂದು ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಬಿಡುಗಡೆ! ಗೊಂದಲದಲ್ಲಿ ಸ್ಪರ್ಧಾತ್ಮಕ ಕಂಪನಿಗಳು!

ಭಾರತದ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕೈಗೆಟುಕುವ ಬೆಲೆ ಹಾಗೂ ಉತ್ತಮ ಪರ್ಫಾಮೆನ್ಸ್ ನೀಡುವ ಬೈಕ್ ಆಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದರ ನವೀಕೃತ ಮಾದರಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಕೂಡ ಬಿಡುಗಡೆಗೆ ಸಜ್ಜಾಗಿದ್ದು, ಭಾರತೀಯ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳಿವೆ.

ಸದ್ಯ ಈ ಬೈಕ್ ಬುಕ್ಕಿಂಗ್ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಇದೀಗ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬಿಡುಗಡೆ ಕುರಿತು ಮಾಹಿತಿ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಇಂದು (ನವೆಂಬರ್ 24) ರಾತ್ರಿ 8 ಗಂಟೆ ಸುಮಾರಿಗೆ ಬಿಡುಗಡೆಯಾಗಲಿದೆ. ಹಾಗೆಯೇ ಬೈಕ್ ಬೆಲೆ ಕುರಿತ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

royal-enfield-himalayan-450-launch-details

ಪರ್ಫಾಮೆನ್ಸ್‌ಗೆ ಸಂಬಂಧಿಸಿದಂತೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹೊಸ 450 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಗರಿಷ್ಠ 40 bhp ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

ಹೊಸ ಹಿಮಾಲಯನ್ 450 ನವೀಕೃತ ವಿಶೇಷತೆಗಳನ್ನು ನೋಡುವುದಾದರೆ, ಸ್ಲಿಪ್ಪರ್ ಕ್ಲಚ್ ಮತ್ತು ಅಸಿಸ್ಟ್ ಕ್ಲಚ್ ಸಹ ಸ್ಟ್ಯಾಂಡರ್ಡ್ ಆಗಿ ಬರಲಿದೆ. ಅದೇ ಸಮಯದಲ್ಲಿ ಈ ಬೈಕಿನ ತೂಕವು 196 ಕೆ.ಜಿ ಇರಲಿದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ಗೆ ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸಲಾಗುವುದು.

royal-enfield-himalayan-450-launch-details

ಬ್ರೇಕಿಂಗ್ ವಿಚಾರಕ್ಕೆ ಬಂದರೆ ಈ ಬಾರಿ ಹಿಮಾಲಯನ್ 450 ಸುಧಾರಣೆಯನ್ನು ಕಂಡಿದೆ, ಬೈಕ್ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಬೈಕ್‌ನ ಮುಂಭಾಗದಲ್ಲಿ 21 ಇಂಚಿನ ವೀಲ್‌ಗಳು ಮತ್ತು ಹಿಂಭಾಗದಲ್ಲಿ 17 ಇಂಚಿನ ವೀಲ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 17 ಲೀಟರ್ ಎಂದು ತಿಳಿದುಬಂದಿದೆ.

ಗಮನಾರ್ಹ ಫೀಚರ್‌ಗಳ ವಿಷಯಕ್ಕೆ ಬಂದರೆ ಫುಲ್ LED ಲೈಟಿಂಗ್, ರೈಡ್ ಬೈ ವೈರ್, ಸ್ವಿಚ್ ಮಾಡಬಹುದಾದ ABS, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ದೊಡ್ಡ ಮತ್ತು ವೃತ್ತಾಕಾರದ TFT ಸ್ಕ್ರೀನ್ ಅನ್ನು ಒಳಗೊಂಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಭಾರತೀಯ ಮಾರುಕಟ್ಟೆಯಲ್ಲಿ KTM 390 ಅಡ್ವೆಂಚರ್‌ನೊಂದಿಗೆ ಸ್ಪರ್ಧಿಸಲಿದೆ.

royal-enfield-himalayan-450-launch-details

ಇದು ಒಂದೇ ಅಲ್ಲದೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450, ಯೆಜ್ಡಿ ಅಡ್ವೆಂಚರ್ (Yezdi Adventure), ಬಿಎಂಡಬ್ಲ್ಯು ಜಿ 310 ಜಿಎಸ್ (BMW G 310 GS), ಮತ್ತು ಟ್ರಯಂಫ್ ಸ್ಕ್ರಾಂಬ್ಲರ್ 400 ಎಕ್ಸ್ (Triumph Scrambler 400 X) ಗಳಿಗೆ ಪೈಪೋಟಿ ನೀಡಲಿದೆ. ಇವೆಲ್ಲವು ಸದ್ಯ ಅಡ್ವೆಂಚರ್ ವಿಭಾಗದಲ್ಲಿ ಬೇಡಿಕೆಯಿರುವ ಮೋಟಾರ್‌ಸೈಕಲ್‌ಗಳಾಗಿವೆ.

ವರದಿಗಳ ಪ್ರಕಾರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ನ ಆರಂಭಿಕ ಬೆಲೆ ಸುಮಾರು ರೂ. 2.50 ಲಕ್ಷ ಅಥವಾ ರೂ. 2.60 ಲಕ್ಷ ಇರಬಹುದು. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್ ಒಟ್ಟು 3 ವೆರಿಯಂಟ್‌ಗಳಲ್ಲಿ ಲಭ್ಯವಿರುವುದು ಇಲ್ಲಿ ಗಮನಾರ್ಹ. ಇನ್ನೂ ಪ್ರಮುಖ ಮಾಹಿತಿಯನ್ನು ಕಂಪನಿ ಇಂದು ಬಹಿರಂಗಪಡಿಸಲಿದೆ.ಈ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 17 ಲೀಟರ್ ಎಂದು ತಿಳಿದುಬಂದಿದೆ.

royal-enfield-himalayan-450-launch-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 24, 2023, 16:05 [IST]
English summary
Royal enfield himalayan 450 launch details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+