ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ರಾಯಲ್‌ ಎನ್‌ಫೀಲ್ಡ್‌ನ ವಿಭಿನ್ನವಾದ ಬೈಕ್‌!

ರಾಯಲ್‌ ಎನ್‌ಫೀಲ್ಡ್‌ (Royal Enfield) ಬೈಕ್‌ಗಳಿಗೆ ಭಾರತದಲ್ಲಿ ಇರುವಷ್ಟು ಅಭಿಮಾನಿಗಳು ಪ್ರಪಂಚದ ಇತರ ಯಾವ ದೇಶದಲ್ಲಿಯೂ ಇರಲಾರರು. ರಾಯಲ್‌ ಎನ್‌ಫೀಲ್ಡ್‌ ಯಾವುದೇ ಹೊಸ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದರೂ ಭಾರತೀಯರು ಅದನ್ನು ಎರಡೂ ಕೈಯಿಂದ ಸ್ವೀಕರಿಸುತ್ತಾರೆ. ಅದಕ್ಕೆ ಕಳೆದ ವರ್ಷ ರಾಯಲ್‌ ಎನ್‌ಫೀಲ್ಡ್‌ ಮಾರುಕಟ್ಟೆಗೆ ತಂದ ಹಂಟರ್‌ ಸಾಕ್ಷಿ.

ಇದೀಗ ರಾಯಲ್‌ ಎನ್‌ಫೀಲ್ಡ್ ಕಂಪನಿಯು ಹೊಸ ಮೋಟಾರ್‌ಸೈಕಲ್‌ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು ಶೀಘ್ರದಲ್ಲಿಯೇ ಅದು ಮಾರುಕಟ್ಟೆಗೆ ಬರಲಿದೆ ಎಂಬ ಮಾಹಿತಿ ಇದೆ. ಬಾರಿ ಇಷ್ಟು ದಿನ ರಾಯಲ್‌ ಎನ್‌ಫೀಲ್ಡ್ ಭಾರತೀಯರಿಗೆ ಪರಿಚಯಿಸಿದ್ದಕ್ಕಿಂತ ಬೈಕ್‌ ಭಿನ್ನವಾಗಿರಲಿದೆ ಎಂದು ಬೈಕ್ ಪಂಡಿತರು ಹೇಳುತ್ತಿದ್ದಾರೆ.

oyal Enfield Is Planning To Launch Unique Bike

ರಾಯಲ್‌ ಎನ್‌ಫೀಲ್ಡ್ ಬೈಕ್‌ಗಳು ಏನೆಲ್ಲಾ ಮಾಡಬಲ್ಲದು ಎಂಬುದರ ಕುರಿತಾಗಿನ ಹತ್ತು ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ಲಾಂಗ್‌ ಟ್ರಿಪ್‌ ಹೋಗುವವರೆಲ್ಲರೂ ಒತ್ತುಕೊಡುವ ಬೈಕ್‌ಗಳಲ್ಲಿ ರಾಯಲ್‌ ಎನ್‌ಫೀಲ್ಡ್ ಒಂದು ಹೆಜ್ಜೆ ಮುಂದೆ ಎಂದರೆ ತಪ್ಪಾಗಲಾರದು. ಕೆಫೆ ರೇಸರ್ ಸೆಗ್ಮೆಂಟ್‌ನಲ್ಲಿ‌ ಕಾಂಟಿನೆಂಟಲ್‌ ಜಿಟಿ ಮುಂಪಕ್ತಿಯಲ್ಲಿ ನಿಲ್ಲುತ್ತದೆ.

ಇದೀಗ ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ಬೈಕ್‌ನ ಫೇರಿಂಗ್‌ ಆವೃತ್ತಿಯನ್ನು ಅಭಿವೃದ್ದಿಪಡಿಸುತ್ತಿದೆ ಎಂಬ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಕುರಿತಾಗಿನ ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಅದರಲ್ಲಿ ಕಾಂಟಿನೆಂಟಲ್‌ ಜಿಟಿ ಸಂಪೂರ್ಣವಾಗಿ ಫೇರಿಂಗ್‌ ಡಿಸೈನ್‌ನಿಂದ ಕೂಡಿತ್ತು.

ಇನ್ನು ಇದರಲ್ಲಿ ವಿಶೇಷ ರೀತಿಯ ರೇರ್‌ ವ್ಯೂ ಮಿರರ್‌ ಮತ್ತು ಟ್ವಿನ್‌ ಶಾಕ್‌ ಅಬ್ಸರ್ಬರ್‌ಗಳು ಕಂಡು ಬಂದಿದ್ದವು. ಪಂಡಿತರ ಪ್ರಕಾರ ಟ್ವಿನ್‌ ಶಾಕ್‌ ಅಬ್ಸರ್ಬರ್‌ಗಳನ್ನು ಸದ್ಯ ಟೆಸ್ಟಿಂಗ್‌ಗೆ ಬಳಸುತ್ತಿದ್ದು ನಂತರದಲ್ಲಿ ಬೈಕ್‌ಗೆ ಟೆಲಿಸ್ಕೋಪಿಕ್‌ ಸಸ್ಪೆನ್ಷನ್‌ ಅನ್ನು ಇಡಬಹುದು ಎಂದು ಹೇಳಿದ್ದಾರೆ.

ಇನ್ನು ಇಲ್ಲಿಯವರೆಗೆ ರಾಯಲ್‌ ಎನ್‌ಫೀಲ್ಡ್‌ನಲ್ಲಿ ಯಾವುದೇ ರೀತಿಯ ಫುಲ್‌ ಫೇರಿಂಗ್‌ ಬೈಕ್‌ಗಳನ್ನು ಭಾರತದಲ್ಲಿ ಮಾರುಕಟ್ಟೆಗೆ ತಂದಿಲ್ಲ. ಇದರಿಂದಾಗಿಯೇ ಈಗ ಅಭಿವೃದ್ದಿ ಪಡಿಸುತ್ತಿರುವ ಕಾಂಟಿನೆಂಟಲ್‌ ಜಿಟಿಯ ಫುಲ್‌ ಫೇರ್ಡ್‌ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲೂಬಹುದು ಎಂಬ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನು ರಾಯಲ್‌ ಎನ್‌ಫೀಲ್ಡ್‌ನ ಕಾಂಟಿನೆಂಟಲ್‌ ಜಿಟಿ ಬೈಕ್‌ಗೆ ಬಹಳಷ್ಟು ಮಂದಿ ಆಫ್ಟರ್‌ ಮಾರ್ಕೆಟ್‌ ಫೇರಿಂಗ್‌ ಬಾಕ್ಸ್‌ಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಬಹಳ ಬೇಡಿಕೆ ಇರುವುದರಿಂದ ಕಂಪನಿಯು ಬೈಕನ್ನು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಅದನ್ನು ಮಾರುಕಟ್ಟೆಗೆ ಹೊಸ ಬೈಕ್‌ ರೀತಿಯಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವುದು ಒಳ್ಳೆಯ ಕೆಲಸವೇ ಸರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, June 18, 2023, 9:00 [IST]
English summary
Royal enfield is planning to launch unique bike to market
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+