ಬೆಂಗಳೂರಿನ Simple ONE ಇ-ಸ್ಕೂಟರ್ ಉತ್ಪಾದನೆ ಶುರು: ಬಿಡುಗಡೆಗೆ ದಿನಗಣನೆ.. ರೇಂಜ್‌ನಲ್ಲಿ ಬೆಂಕಿ ಗುರು!
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಬ್ಬರಿಸಲು ಶುರು ಮಾಡಿವೆ. ಈಗಾಗಲೇ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿ ಸ್ಕೂಟರ್‌ಗಳು ಭಾರೀ ಜನಪ್ರಿಯತೆಯನ್ನು ಗಳಿಸಿವೆ. ತಾನೇನು ಕಡಿಮೆ ಇಲ್ಲವೆಂಬಂತೆ ಸಿಂಪಲ್ ಎನರ್ಜಿ ತನ್ನ ಬಹುನೀರಿಕ್ಷಿತ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಪ್ರಮುಖ ಮಾಹಿತಿ ನೀಡಿದೆ.
ಬೆಂಗಳೂರು ಮೂಲಕದ ಪ್ರಮುಖ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಅಂತಲೇ ಗುರುತಿಸಿಕೊಂಡಿರುವ 'ಸಿಂಪಲ್ ಎನರ್ಜಿ' ತನ್ನ ಸಿಂಪಲ್ ಒನ್ (Simple ONE) ಸ್ಕೂಟರ್‌ನ್ನು ಮೇ.23ರಂದು ಬಿಡುಗಡೆ ಮಾಡಲಿದೆ. ಅದಕ್ಕೆ ಸಾಕ್ಷಿ ಎಂಬಂತೆ ತಮಿಳುನಾಡಿನಲ್ಲಿರುವ ತನ್ನ ಫ್ಯಾಕ್ಟರಿಯಲ್ಲಿ ಈಗಾಗಲೇ ಸ್ಕೂಟರ್ ತಯಾರಿಕೆಯನ್ನು ಪ್ರಾರಂಭಿಸಿದ್ದು, ಮೊದಲ ಉತ್ಪಾದನಾ ಯುನಿಟ್ ಚಿತ್ರವನ್ನು ಹಂಚಿಕೊಂಡಿದೆ. ಈ ಮೂಲಕ ಎಲೆಕ್ಟ್ರಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತಾನು ಸ್ಪರ್ಧೆಗೆ ಸಿದ್ಧವಾಗಿದೆ.

ಪ್ರತಿಯೊಬ್ಬರು ಗಮನಿಸಬೇಕಾದ ವಿಚಾರವೆಂದರೆ, ಈ ಸಿಂಪಲ್ ಒನ್ ಸ್ಕೂಟರ್‌ನ್ನು 2021ರಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿ ಅನಾವರಣ ಮಾಡಿತ್ತು. ಆದರೆ, ಪೂರೈಕೆ ಸೇರಿದಂತೆ ಹತ್ತು ಹಲವು ಕಾರಣಗಳಿಗೆ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು. ಸದ್ಯ, ಎಲ್ಲ ಸಮಸ್ಯೆಯನ್ನು ಬಗೆಹರಿದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಸಿಂಪಲ್ ಒನ್ ಸ್ಕೂಟರ್ ಭಾರತದ ರಸ್ತೆಗಳಲ್ಲಿ ಸಂಚರಿಸಲಿದೆ.
ಎರಡು ವರ್ಷಗಳ ಹಿಂದಿನಿಂದಲ್ಲೂ ಅಂದರೆ, ಈ ಸಿಂಪಲ್ ಒನ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಅನಾವರಣ ಆದಾಗಿನಿಂದಲೂ ಕಂಪನಿಯು ಇದು ಅತ್ಯಂತ ಸುರಕ್ಷಿತ ಬ್ಯಾಟರಿ ಹೊಂದಿರುವ ಜೊತೆಗೆ ಗರಿಷ್ಠ ರೇಂಜ್‌ನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ ಎಂದು ಹೇಳಿಕೊಂಡು ಬಂದಿದೆ. ಇದರಲ್ಲಿ 4.8 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಸಲಾಗಿದ್ದು, ಫುಲ್ ಚಾರ್ಜಿನಲ್ಲಿ 236 km ರೇಂಜ್, ಬದಲಾಯಿಸಬಹುದಾದ ಬ್ಯಾಟರಿಯನ್ನು ಪಡೆದಿರುವ ಸ್ಕೂಟರ್ 300 Km ರೇಂಜ್ ನೀಡಲಿದೆ ಎಂದು ವರದಿಯಾಗಿದೆ.

ಈ ಸ್ಕೂಟರ್‌ನಲ್ಲಿ 8.5 kW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಇದು 4.5 kWh ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಕೇವಲ 2.77 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು,105 kmph ಟಾಪ್ ಸ್ವೀಡ್ ಹೊಂದಿದೆ.
ಸಿಂಪಲ್ ಒನ್ ಸ್ಕೂಟರ್ ನ ಬಣ್ಣ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ಅಜೂರ್ ಬ್ಲೂ, ಬ್ರೆಜನ್ ಬ್ಲಾಕ್, ಗ್ರೇಸ್ ವೈಟ್, ರೆಡ್ ಬಣ್ಣಗಳ ಆಯ್ಕೆಯನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ LED ಹೆಡ್‌ಲ್ಯಾಂಪ್ಸ್, 7 ಇಂಚಿನ ಟಚ್ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯೂಸಿಕ್, ಫೋನ್ ಕಾಲ್ ಮಾಹಿತಿ ಪಡೆಯಲು ಬ್ಲೂಟೂತ್ ಕನೆಕ್ಟಿವಿಟಿ, ಆನ್‌ಬೋರ್ಡ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಹೊಂದಿದೆ.
ಇನ್ನು, ಬೆಲೆ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಸ್ಪರ್ಧಾತ್ಮಕ ದರದಲ್ಲಿ ಭಾರತದ ಗ್ರಾಹಕರಿಗೆ ದೊರೆಯಲಿದ್ದು, ರೂ.1.09 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರಬಹುದು. ಈ ಬಗ್ಗೆ ಖಚಿತ ಮಾಹಿತಿ ಸ್ಕೂಟರ್ ಬಿಡುಗಡೆಯಾದ ಮೇಲೆಯೇ ಸಿಗಲಿದೆ. ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿ ಸ್ಕೂಟರ್ ಗಳಿಗೆ ಸಿಂಪಲ್ ಒನ್ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








