ಸಿಂಪಲ್‌ ಎನರ್ಜಿಯಿಂದ ಮತ್ತೆರಡು ಕಡಿಮೆ ಬೆಲೆಯ ಸ್ಕೂಟರ್‌: ರಿಲೀಸ್‌ ಯಾವಾಗ?

ಸಿಂಪಲ್‌ ಎನರ್ಜಿ (Simple Energy) ಎಂಬ ಸ್ಕೂಟರ್‌ ಕಳೆದ ಕೆಲವು ವರ್ಷಗಳಿಂದ ಭಾರತೀಯ ಸ್ಕೂಟರ್‌ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಳೆದ ತಿಂಗಳಷ್ಟೇ ಸಿಂಪಲ್‌ ವನ್‌ ಎಂಬ ಸ್ಕೂಟರ್‌ ಅನ್ನು ಬಿಡುಗಡೆಯೂ ಮಾಡಿತ್ತು. 2019 ರಲ್ಲಿ ಘೋಷಿಸಿದ್ದ ಸಿಂಪಲ್‌ ವನ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ವರ್ಷ ಬಿಡುಗಡೆಗೊಳಿಸಿತ್ತು.

ಇದೀಗ ಸಿಂಪಲ್‌ ಎನರ್ಜಿ ಕಂಪನಿಯು ಮತ್ತೊಮ್ಮೆ ಸುದ್ದಿಯಲ್ಲಿದ್ದು ಬಾರಿ ಅದು ಕಡಿಮೆ ಬೆಲೆಗೆ ಎರಡು ಸ್ಕೂಟರ್‌ಗಳನ್ನು ಲಾಂಚ್‌ ಮಾಡುವುದಾಗಿ ಹೇಳಿಕೊಂಡಿದೆ. ಇದೇ ತಿಂಗಳ ಅಂದರೆ ಜೂನ್‌ 6 ರಿಂದ ಕಂಪನಿಯು ಸಿಂಪಲ್‌ ವನ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಡೆಲಿವರಿ ಆರಂಭಿಸಿದ್ದು ಇದೀಗ ಹೊಸ ಎರಡು ಸ್ಕೂಟರ್‌ಗಳನ್ನು ಅಭಿವೃದ್ದಿಪಡಿಸುತ್ತಿರುವಾಗಿ ಘೋಷಿಸಿದೆ.

Simple Energy Developing Two New Electric Scooters

2019 ರಲ್ಲಿ ಸಿಂಪಲ್‌ ವನ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದಾಗಲೇ ಅದರ ಹೈಪ್‌ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಗ್ರಾಹಕರಿಂದ ಭರಪೂರ ಸ್ವಾಗತ ಎದುರಾಗಿ, ಬಹುದೊಡ್ಡ ಸಂಖ್ಯೆಯಲ್ಲಿ ಸಿಂಪಲ್‌ ವನ್ ಸ್ಕೂಟರ್‌ ಬುಕಿಂಗ್‌ ಸಹ ಆಗಿತ್ತು ಎಂದರೆ ನೀವು ನಂಬಲೇ ಬೇಕು.

ಬರೋಬ್ಬರಿ ನಾಲ್ಕು ವರ್ಷ ಗ್ರಾಹಕರನ್ನು ಕಾಯಿಸಿದ ನಂತರ ಇತ್ತೀಚೆಗೆ ಅಂದರೆ ಜೂನ್‌ 6, 2023 ರಿಂದ ಕಂಪನಿಯು ಸಿಂಪಲ್‌ ವನ್‌ ಸ್ಕೂಟರ್‌ ಅನ್ನು ಡೆಲಿವರಿ ನೀಡಿದೆ. ಇನ್ನು ಹೊಸದಾಗಿ ಅಭಿವೃದ್ದಿ ಪಡಿಸುತ್ತಿರುವ ಸಿಂಪಲ್‌ ವನ್‌ನ ಎರಡು ಸ್ಕೂಟರ್‌ಗಳು ಯಾವಾಗ ಹೊರಬರಲಿದೆ ಎಂಬುದರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಿಂಪಲ್‌ ವನ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತದಲ್ಲಿ ಎಕ್ಸ್‌ ಶೋ ರೂಮ್ ಬೆಲೆ 1.45 ಲಕ್ಷದಿಂದ 1.58 ಲಕ್ಷದವರೆಗೆ ಲಾಂಚ್‌ ಮಾಡಿದ್ದಾರೆ. ಸ್ಕೂಟರ್‌ನ ಬ್ರೇಝನ್‌ ಎಕ್ಸ್‌ ಎಡಿಷನ್‌ ಬೆಲೆ 1.58 ಲಕ್ಷ. ಆಕರ್ಷಕ ಡಿಸೈನ್‌ ನಿಂದ ಕೂಡಿದ ಸಿಂಪಲ್‌ ವನ್‌ ಮುಂಭಾಗದಲ್ಲಿ ಡ್ಯುಯಲ್‌ ಎಲ್‌ಇಡಿ ಹೆಡ್‌ ಲ್ಯಾಂಪ್‌ನೊಂದಿಗೆ ಬರುತ್ತಿದೆ.

ಬೈಕ್‌ನ ಪವರ್‌ ಫಿಗರ್ಸ್‌ ಬಗ್ಗೆ ಮಾತನಾಡುವುದಾದರೆ 8.5 kW ಎಲೆಕ್ಟ್ರಿಕ್‌ ಮೋಟಾರ್‌ ಸುಮಾರು 72 nm ಟಾರ್ಕನ್ನು ಉತ್ಪಾದಿಸುತ್ತದೆ. ಬೈಕ್‌ನಲ್ಲಿ 5kWh ಬ್ಯಾಟರಿಯಿದ್ದು ಇದ್ದು ಸುಮಾರು 212 ಕಿಮೀ ರೇಂಜ್‌ ಹೊಂದಿದೆ. 212 ಕಿಲೋ ಮೀಟರ್‌ ರೇಂಜ್‌ ಎಂಬುದು. ಸದ್ಯಕ್ಕೆ ನಮ್ಮಲ್ಲಿರುವ ಎಲೆಕ್ಟ್ರಿಕ್‌ ಬೈಕ್‌ಗಳಲ್ಲೇ ಅಧಿಕ ಎನ್ನಬಹುದು.

105 ಕಿಲೋ ಮೀಟರ್‌ ಟಾಪ್‌ ಸ್ಪೀಡ್ ಹೊಂದಿರುವ ಸ್ಕೂಟರ್‌ 0-80% ಚಾರ್ಜ್‌ ಆಗಲು ಸುಮಾರು 6 ಗಂಟೆಗಳ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಇನ್ನು ಸಿಂಪಲ್‌ ವನ್‌ ಸ್ಕೂಟರ್‌ನಲ್ಲಿ ಬ್ಯಾಟರಿ ಸ್ವಾಪಿಂಗ್‌ ಫೀಚರ್‌ ಸಹ ಲಭ್ಯವಿದ್ದು ಇದರಿಂದ ಸಿಂಪಲ್‌ ವನ್‌ ಸ್ಕೂಟರ್‌ ಸವಾರರಿಗೆ ಉಪಯೋಗವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 15, 2023, 18:55 [IST]
English summary
Simple energy developing two new electric scooters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+