Simple One EV: ಕಡಿಮೆ ಬೆಲೆಯಲ್ಲಿ ಹೊಸ ಸ್ಕೂಟರ್.. ಸಿಂಗಲ್ ಚಾರ್ಜ್‌ನಲ್ಲಿ 160 ಕಿ.ಮೀ.. ವೈಶಿಷ್ಟ್ಯಗಳೇನು?
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿತ್ತಿದ್ದು, ಹೊಸ ಇವಿ ಸ್ಕೂಟರ್‌ಗಳ ಮಾರಾಟವು ಜೋರಾಗಿದೆ. ಬೆಂಗಳೂರು ಮೂಲದ ಓಲಾ (ola), ಎಥರ್ (Ather) ಸೇರಿದಂತೆ ಸಿಂಪಲ್ ಒನ್ (simple one ev) ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮ ಮಾರಾಟವನ್ನು ದಾಖಲಿಸುತ್ತಿದ್ದು, ಇನ್ನೂ ಬೇಡಿಕೆ ಹೆಚ್ಚಿಸಿಕೊಳ್ಳಲು ಹೊಸ ಮಾದರಿಗಳ ತಯಾರಿಯಲ್ಲಿ ತೊಡಗಿದ್ದಾರೆ.
ಸದ್ಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ ಸಿಂಪಲ್ ಎನರ್ಜಿ, Simple One EV ಸ್ಕೂಟರ್ ನಂತರ ತನ್ನ ಎರಡನೇ ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಮಾಹಿತಿಯ ಪ್ರಕಾರ, ಸಿಂಪಲ್ ಎನರ್ಜಿ ಕಂಪನಿಯು ಹೊಸ simple dot one ಇವಿ ಸ್ಕೂಟರ್ ಅನ್ನು ಮುಂದಿನ ತಿಂಗಳು ಡಿಸೆಂಬರ್ 15 ರಂದು ಅಧಿಕೃತವಾಗಿ ಬಿಡುಗಡೆ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಸಿಂಪಲ್ ಎನರ್ಜಿ ಈ ಬಾರಿ ತಮ್ಮ ಕೈಗೆಟುಕುವ ಇವಿ ಸ್ಕೂಟರ್ ಅನ್ನು ಪರಿಚಯಿಸಲು ನೋಡುತ್ತಿದೆ. ಹೊಸ ಸ್ಕೂಟರ್ ಮಾದರಿಯು ಬೃಹತ್ ಬ್ಯಾಟರಿ ಪ್ಯಾಕ್‌ನೊಂದಿಗೆ ಉತ್ತಮ ಮೈಲೇಜ್ ಜೊತೆಗೆ ಕಡಿಮೆ ಬೆಲೆಯಲ್ಲಿ ನೀಡಲಾಗುವುದು ಎಂದು ವರದಿಯಾಗಿದೆ. ಹೊಸ ಡಾಟ್ ಒನ್ ಇವಿ ಸ್ಕೂಟರ್ ಬೆಲೆಯು ರೂ. 1 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಈಗಾಗಲೇ ಎಥರ್ ಹಾಗೂ ಓಲಾ ತಮ್ಮ ಕೈಗೆಟುಕುವ ಬೆಲೆಯ ಇವಿಗಳೊಂದಿಗೆ ಮಾರುಕಟ್ಟೆಯಲ್ಲಿ ತೀರ್ವ ಪೈಪೋಟಿಯಲ್ಲಿವೆ. ಇದೀಗ ಸಿಂಪಲ್ ಎನರ್ಜಿಯ ಕೈಗೆಟುಕುವ ಇವಿಯೊಂದಿಗೆ ಪ್ರಸ್ತುತ ಹೆಚ್ಚಿನ ಬೇಡಿಕೆಯಲ್ಲಿರುವ ಓಲಾ ಮತ್ತು ಎಥರ್ ಇವಿ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ವರದಿ ಹೇಳುತ್ತಿದೆ.

ಮುಂಬರಲಿರುವ ಹೊಸ ಡಾಟ್ ಒನ್ EV ಸ್ಕೂಟರ್‌ನಲ್ಲಿ, ಸಿಂಪಲ್ ಎನರ್ಜಿಯು 3.7 kwh ಬ್ಯಾಟರಿ ಪ್ಯಾಕ್ ಅನ್ನು ನೀಡಲಿದೆ. ಇದು ಪ್ರತಿ ಚಾರ್ಜ್ ಗೆ 160 ಕಿ.ಮೀ ಮೈಲೇಜ್ ನೀಡಲಿದೆಯಂತೆ. ಅಲ್ಲದೆ, ಹೊಸ ಇವಿ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿ ಸಿಂಪಲ್ ಒನ್ ಮಾದರಿಗಿಂತ ಹೆಚ್ಚು ಹಗುರವಾಗಿರಲಿದ್ದು, ಇದು 8.5 ಕೆಡಬ್ಲು ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಲಿದೆ.
30 ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಟಚ್ ಸ್ಕ್ರೀನ್ TFT ಡ್ಯಾಶ್‌ಬೋರ್ಡ್, ಬ್ಲೂಟೂತ್ ಸಂಪರ್ಕ ಕೂಡ ಇರಲಿದೆ. ತಾಂತ್ರಿಕವಾಗಿ, ಸಿಂಪಲ್ ಒನ್ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುವ ಡಾಟ್ ಒನ್ ಮಾದರಿಯು ಬೆಲೆಯನ್ನು ಕಡಿಮೆ ಮಾಡಲು ಕೆಲವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಕೈಬಿಡಲಿದೆ. ಕಡಿಮೆ ಬೆಲೆಯಲ್ಲಿ ಕೆಲವು ಅಗತ್ಯ ವೈಶಿಷ್ಟ್ಯಗಳನ್ನು ಮಾತ್ರ ನೀಡಲಿದೆಯಂತೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಂಪಲ್ ಒನ್ ಮಾದರಿಯು 5 KVH ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 212 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ. 1.53 ಲಕ್ಷವಿದೆ. ಈ ಹಿನ್ನೆಲೆಯಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಹೊಸ ಇವಿ ಸ್ಕೂಟರ್ ಮೂಲಕ ಕಡಿಮೆ ಬೆಲೆಯ ಇವಿ ಸ್ಕೂಟರ್ ಖರೀದಿದಾರರನ್ನು ಸೆಳೆಯಲು ನೋಡುತ್ತಿದೆ. ಇದು ಜನಪ್ರಿಯ EV ಸ್ಕೂಟರ್‌ಗಳಿಗೆ ಉತ್ತಮ ಸ್ಪರ್ಧೆಯನ್ನು ನೀಡಲಿದೆ.
ಡಿಸೆಂಬರ್ 15 ರಂದು ಹೊಸ ಡಾಟ್ ಒನ್ ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿರುವ ಸಿಂಪಲ್ ಎನರ್ಜಿ, ಜನವರಿ 2024 ರ ಅಂತ್ಯದ ವೇಳೆಗೆ ಗ್ರಾಹಕರಿಗೆ ತಲುಪಿಸಲು ಯೋಜಿಸಿದೆ. ಇದರ ಬೆಲೆ ರೂ. 1 ಲಕ್ಷದೊಳಗೆ ಇರಲಿದ್ದು, ಉತ್ತಮ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಮೈಲೇಜ್ ನಿರೀಕ್ಷಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








