Simple ONE: 300 ಕಿ.ಮೀ ರೇಂಜ್‌ನ ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್‌ನಲ್ಲಿ ಬಿಡುಗಡೆ

ಬೆಂಗಳೂರು ಮೂಲದ ಇವಿ ಸ್ಟಾರ್ಟ್-ಅಪ್ ಸಿಂಪಲ್ ಎನರ್ಜಿ (Simple Energy) ತನ್ನ ಬಹುನಿರೀಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಏಪ್ರಿಲ್‌ ಕೊನೆಯಲ್ಲಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ಮೂಲಗಳು ಖಚಿತಪಡಿಸಿವೆ. ಇದು ಗರಿಷ್ಠ ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು 2021ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಾಗಿತ್ತು. ಆದರೆ, ಬಿಡುಗಡೆ ಮಾಡಲು ಕೆಲವೊಂದು ಕಾರಣಗಳಿಂದ ವರ್ಷಗಳೇ ತಡವಾಗಿದೆ. ಬಹುತೇಕ ಈ ಸ್ಕೂಟರ್‌ ಬೆಲೆ ಏರಿಕೆಯೊಂದಿಗೆ ಲಾಂಚ್ ಆಗಬಹುದು. ಇದರ ಸ್ಟ್ಯಾಂಡರ್ಡ್ ಮಾದರಿ ರೂ.1.09 ಲಕ್ಷ ಹಾಗೂ ಬದಲಾಯಿಸಬಹುದಾದ ಬ್ಯಾಟರಿ (swappable battery) ಹೊಂದಿರುವ ಮಾದರಿ ರೂ.1.45 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ದೊರೆಯುವ ಸಾಧ್ಯತೆ ಇದ್ದು, ಕೆಲವೇ ದಿನಗಳಲ್ಲಿ ಕಂಪನಿಯಿಂದ ಅಧಿಕೃತ ಮಾಹಿತಿ ದೊರೆಯಲಿದೆ.

Simple ONE: 300 ಕಿ.ಮೀ ರೇಂಜ್‌ನ ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್‌ನಲ್ಲಿ ಬಿಡುಗಡೆ

ಈ ಎಲೆಕ್ಟ್ರಿಕ್ ಸ್ಕೂಟರ್, ಬ್ಯಾಟರಿ ಹಾಗೂ ರೇಂಜ್ ಬಗ್ಗೆ ಹೇಳುವುದಾದರೆ, ಇದರಲ್ಲಿ 4.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಬಳಕೆ ಮಾಡಲಾಗಿದೆ. ಸಂಪೂರ್ಣ ಚಾರ್ಜ್‌ನಲ್ಲಿ 236 ಕಿ.ಮೀ ರೇಂಜ್ ನೀಡಲಿದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ ಪಡೆದಿರುವ ಸ್ಕೂಟರ್, 300 ಕಿ.ಮೀ.ವರೆಗೆ ರೇಂಜ್ ಕೊಡಲಿದೆ. ಮುಂಬರುವ ದಿನಗಳಲ್ಲಿ 'ಸಿಂಪಲ್ ಒನ್' ಭಾರತದಲ್ಲಿ ಸಿಗುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ರಾಗಿ ಹೊರಹೊಮ್ಮಲಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 8.5 kW ಎಲೆಕ್ಟ್ರಿಕ್ ಮೋಟಾರ್ ಉಪಯೋಗ ಮಾಡಲಾಗಿದ್ದು, ಇದು 11 bhp ಗರಿಷ್ಠ ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೆ, ಈ ಸ್ಕೂಟರ್ ಗ್ರಾಹಕರನ್ನು ಆಕರ್ಷಿಸುವ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಅವುಗಳೆಂದರೆ, ಅಜೂರ್ ಬ್ಲೂ, ಬ್ರೆಜನ್ ಬ್ಲಾಕ್, ಗ್ರೇಸ್ ವೈಟ್ ಮತ್ತು ರೆಡ್.

Simple ONE: 300 ಕಿ.ಮೀ ರೇಂಜ್‌ನ ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಏಪ್ರಿಲ್‌ನಲ್ಲಿ ಬಿಡುಗಡೆ

ಈ ಸ್ಕೂಟರ್, ಬಹುತೇಕ ಎಲೆಕ್ಟ್ರಿಕ್ ವಾಹನ ಖರೀದಿದಾರರು ಇಷ್ಟಪಡುವಂತಹ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. LED ಹೆಡ್‌ಲ್ಯಾಂಪ್ಸ್ 4G ಕನೆಕ್ಷನ್ ನೊಂದಿಗೆ 7 ಇಂಚಿನ ಟಚ್‌ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮ್ಯೂಸಿಕ್ ಮತ್ತು ಕಾಲ್ ಗಳ ಮಾಹಿತಿ ಪಡೆಯಲು ಬ್ಲೂಟೂತ್ ಕನೆಕ್ಟಿವಿಟಿ, ಆನ್‌ಬೋರ್ಡ್ ನ್ಯಾವಿಗೇಷನ್ ಸಿಸ್ಟಮ್ ಜೊತೆಗೆ ಬೇರೆ-ಬೇರೆ ರೈಡಿಂಗ್ ಮೋಡ್‌ಗಳನ್ನು ಪಡೆದುಕೊಳ್ಳುವ ಮೂಲಕ ಆಕರ್ಷಕವಾಗಿದೆ.

ಸಿಂಪಲ್ ಎನರ್ಜಿ ಕಂಪನಿ, ಹೊಸ ಸ್ಕೂಟರ್‌ಗಳನ್ನು ಮೊದಲಿಗೆ ಬೆಂಗಳೂರು ಹಾಗೂ ಇತರೆ ದೊಡ್ಡ ನಗರಗಳಲ್ಲಿ ವಿತರಣೆಯನ್ನು ಮಾಡಲು ಯೋಜಿಸಿದೆ. ಈಗಾಗಲೇ ಈ ಸ್ಕೂಟರ್ ಬುಕಿಂಗ್ ಮಾಡಿದ ಗ್ರಾಹಕರು ಡೆಲಿವರಿ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. ತಮಿಳುನಾಡಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 'ಸಿಂಪಲ್ ವಿಷನ್ 1.0' ಉತ್ಪಾದನಾ ಘಟಕದಲ್ಲಿ ಈ ಸ್ಕೂಟರ್‌ಗಳನ್ನು ತಯಾರಿಸಲಾಗುತ್ತದೆ ಎಂದು ವರದಿಯಾಗಿದೆ.

ಸಿಂಪಲ್ ಎನರ್ಜಿಯ ಈ ಹೊಸ ಉತ್ಪಾದನಾ ಘಟಕದ ಬಗ್ಗೆ ಹೇಳುವುದಾದರೆ, ಇದನ್ನು ಪಕ್ಕದ ತಮಿಳುನಾಡಿನ ಶೂಲಗಿರಿಯಲ್ಲಿ 2 ಲಕ್ಷ ಚದರ ಅಡಿಗಳಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿದೆ. ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡಿತ್ತು. ಈ ತಯಾರಿಕ ಘಟಕ ವಾರ್ಷಿಕ 10 ಲಕ್ಷ ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಕಾರ್ಯಾರಂಭದಿಂದಾಗಿಯೇ ಕಂಪನಿಯು ಮುಂದಿನ ತಿಂಗಳು ಸಿಂಪಲ್ ಒನ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಮುಂಬರಲಿರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಈಗಾಗಲೇ ಖರೀದಿಗೆ ಲಭ್ಯವಿರುವ ಓಲಾ, ಎಥರ್, ಟಿವಿಎಸ್ ಹಾಗೂ ಬಜಾಜ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಬೆಲೆಯು ಕೈಗೆಟುಕುವಂತ್ತಿದ್ದು, ಅದಕ್ಕೆ ತಕ್ಕಂತೆ ಗರಿಷ್ಠ ರೇಂಜ್ ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯು ಅತ್ಯಾಕರ್ಷಕವಾಗಿದ್ದು, ಹೆಚ್ಚಿನ ಯುವ ಖರೀದಿದಾರರಿಗೆ ಇಷ್ಟವಾಗಬಹುದು.

More from DriveSpark

Article Published On: Friday, March 24, 2023, 10:55 [IST]
English summary
Simple one electric scooter launch in april end details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+