ನಮ್ಮ ಬೆಂಗಳೂರಿನ Simple One EV scooter ಬೆಲೆ, ಬುಕಿಂಗ್, ವಾರೆಂಟಿ ವಿಶೇಷತೆಗಳು

ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸಿಂಪಲ್ ಎನರ್ಜಿ ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಸಿಂಪಲ್ ಒನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಸದ್ಯಕ್ಕಿರುವ ಇತರ ಇವಿಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆ ಹಾಗೂ ಫೀಚರ್‌ಗಳನ್ನು ಇದರಲ್ಲಿ ನೀಡಲಾಗಿದೆ.

ಈ ಹೊಸ ಸ್ಕೂಟರ್ ಒಂದೇ ರೂಪಾಂತರ ಹಾಗೂ 6 ಬಣ್ಣಗಳಲ್ಲಿ ಲಭ್ಯವಿದ್ದು, ರೂ.1.45 ಲಕ್ಷದಿಂದ ಇದರ ಬೆಲೆ ಪ್ರಾರಂಭವಾಗುತ್ತದೆ. ಸದ್ಯ ಮಾರುಕಟ್ಟಿಲ್ಲಿನ ಎದುರಾಳಿಗಳಾದ ಎಥರ್, ಓಲಾ, ಟಿವಿಎಸ್ ಬ್ರಾಂಡ್‌ಗಳ ಪ್ರಮುಖ ಇವಿ ಸ್ಕೂಟರ್‌ಗಳೊಂದಿಗೆ ಇದು ಸ್ಪರ್ಧಿಸುತ್ತಿದೆ. ಪ್ರಸ್ತುತ ಸಿಂಪಲ್ ಎನರ್ಜಿ ಹೊಸ ಸ್ಕೂಟರ್‌ನಲ್ಲಿ ನೀಡಿರುವ ಟಾಪ್ ಹೈಲೆಟ್‌ಗಳನ್ನು ಇಲ್ಲಿ ನೋಡೋಣ.

Simple One EV scooter

ಬೆಲೆ, ವಾರೆಂಟಿ, ರೂಪಾಂತರಗಳು: ಹೊಸ ಸಿಂಪಲ್ ಒನ್ ಸಿಂಗಲ್ ವೇರಿಯಂಟ್‌ನಲ್ಲಿ ಲಭ್ಯವಿದ್ದು, ಬೆಲೆ ರೂ.1.45 (ಎಕ್ಸ್‌ ಶೋರೂಂ) ಲಕ್ಷವಿದೆ. ರೆಡ್, ಅಜುರೆ ಬ್ಲೂ, ಬ್ಲಾಕ್, ಬ್ರಾಜೆನ್ ಎಕ್ಸ್, ಗ್ರೇಸ್ ವೈಟ್ ಮತ್ತು ಲೈಟ್ ಎಕ್ಸ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ವಾಹನ, ಮೋಟರ್, ಬ್ಯಾಟರಿ ಮೇಲೆ ಮೂರು ವರ್ಷಗಳ ಅಥವಾ 30,000 ಕಿ.ಮೀ ವಾರಂಟಿಯಿದೆ. ಚಾರ್ಜರ್ ಮೇಲೆ ಒಂದು ವರ್ಷ ಅಥವಾ 10,000 ಕಿ.ಮೀ ವಾರಂಟಿಯಿದೆ.

ಸ್ಪೀಡ್ ಮತ್ತು ಪವರ್: ಹೊಸ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 2 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪುತ್ತದೆ. ಇದರ ಟಾಪ್ ಸ್ಪೀಡ್ ಗಂಟೆಗೆ 105 ಕಿ.ಮೀ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿನ ಎಲೆಕ್ಟ್ರಿಕ್ ಮೋಟಾರ್ 8.5 ಕಿಲೋವ್ಯಾಟ್ ಮತ್ತು 4.5 ಕಿಲೋವ್ಯಾಟ್ ಗರಿಷ್ಠ ಮತ್ತು ನಿರಂತರ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

Simple One EV scooter

ವೈಶಿಷ್ಟ್ಯಗಳು: ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಏಳು ಇಂಚಿನ ಟಿಎಫ್ಟಿ ಟಚ್ಸ್ಕ್ರೀನ್ ಡಿಸ್ಪ್ಲೇ, ಬ್ಲೂಟೂತ್, 4 ಜಿ ಎಲ್ಟಿಇ, ಆನ್ಬೋರ್ಡ್ ಮ್ಯಾಪ್, ಡಾಕ್ಯುಮೆಂಟ್ ಸಂಗ್ರಹಣೆ, ಪೂರ್ಣ-ಎಲ್ಇಡಿ ಲೈಟಿಂಗ್, ಪಾರ್ಕಿಂಗ್ ಅಸಿಸ್ಟ್, ರೈಡ್ ಸ್ಟ್ಯಾಟಿಸ್ಟಿಕ್ಸ್, ಒಟಿಎ ಅಪ್‌ಡೇಟ್ಸ್, ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್ಸ್ ಒಳಗೊಂಡಿದೆ. ಸುರಕ್ಷತಾ ದೃಷ್ಟಿಯಿಂದ ಸಂಯೋಜಿತ ಬ್ರೇಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಬುಕಿಂಗ್ ವಿವರಗಳು: ಕಂಪನಿಯು ಒಂದು ಲಕ್ಷಕ್ಕೂ ಹೆಚ್ಚು ಬುಕಿಂಗ್ ಗಳನ್ನು ಸ್ವೀಕರಿಸಿದೆ. ಸುಮಾರು 18 ತಿಂಗಳ ಹಿಂದೆಯೇ ಈ ಸ್ಕೂಟರ್‌ನ ಬುಕಿಂಗ್ ಪ್ರಾರಂಭಿಸಲಾಗಿತ್ತು. ಕಂಪನಿಯು ಬೆಂಗಳೂರಿನಿಂದ ಪ್ರಾರಂಭಿಸಿ ಹಂತ ಹಂತವಾಗಿ ಗ್ರಾಹಕರಿಗೆ ತಲುಪಿಸಲು ಯೋಜಿಸಿದೆ. ಇದಲ್ಲದೆ, ಸಿಂಪಲ್ ಎನರ್ಜಿ ಮುಂದಿನ 12 ತಿಂಗಳಲ್ಲಿ 40 ರಿಂದ 50 ಡೀಲರ್‌ಗಳ ಮೂಲಕ 160 ರಿಂದ180 ನಗರಗಳಲ್ಲಿ ಕಾರ್ಯಾಚರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಹಾರ್ಡ್ ವೇರ್ ಯಾವುದು: ಸಿಂಪಲ್ ಒನ್ ಅನ್ನು ಟ್ಯೂಬ್ಯುಲರ್ ಚಾಸಿಸ್‌ನಲ್ಲಿ ನಿರ್ಮಿಸಲಾಗಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಒಳಗೊಂಡಿದೆ. ಮುಂಭಾಗ 200 ಎಂಎಂ ಸಿಂಗಲ್ ಡಿಸ್ಕ್, ಹಿಂಭಾಗದಲ್ಲಿ 190 ಎಂಎಂ ಡಿಸ್ಕ್ ಅನ್ನು ಹೊಂದಿದೆ. 796 ಎಂಎಂ ಸೀಟ್ ಎತ್ತರ, 134 ಕೆ.ಜಿ ಕೆರ್ಬ್ ತೂಕ, 30 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Friday, May 26, 2023, 16:32 [IST]
English summary
Simple one ev scooter price booking warranty details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+