Suzuki Access: ಖದರ್ ತೋರಿಸಿದ ಸುಜುಕಿ ಆಕ್ಸೆಸ್ 125 ಸ್ಕೂಟರ್‌: ಚರಿತ್ರೆ ಸೃಷ್ಟಿ!

ಭಾರತದಲ್ಲಿ ಸುಜುಕಿ (Suzuki) ಕಂಪನಿ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗಳಿಸಿವೆ. ಅದರಲ್ಲೂ 'ಆಕ್ಸೆಸ್ 125' ಸ್ಕೂಟರ್‌ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಕಂಪನಿಯು ಅದರ ಉತ್ಪಾದನೆಯಲ್ಲಿ ಐತಿಹಾಸಿಕ ಮೈಲಿಗಲ್ಲು ನಿರ್ಮಿಸುವ ಮೂಲಕ ಹೊಸದೊಂದು ಚರಿತ್ರೆ ಸೃಷ್ಟಿಸಿದೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, 'ಆಕ್ಸೆಸ್ 125' ಸ್ಕೂಟರ್‌ನ 5 ಮಿಲಿಯನ್ (50 ಲಕ್ಷ) ಯುನಿಟ್ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ್ದು, ಹರಿಯಾಣದ ಗುರುಗ್ರಾಮ್‌ನಲ್ಲಿರುವ ಸುಜುಕಿ ತಯಾರಿಕ ಘಟಕದಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಉಮೇಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Suzuki Access: ಖದರ್ ತೋರಿಸಿದ ಸುಜುಕಿ ಆಕ್ಸೆಸ್ 125 ಸ್ಕೂಟರ್‌: ಚರಿತ್ರೆ ಸೃಷ್ಟಿ!

'ಇದು, ಸುಜುಕಿಯ ಪ್ರಮುಖ ಮೈಲಿಗಲ್ಲಾಗಿದ್ದು, ನಮ್ಮ ಬದ್ಧತೆ ಹಾಗೂ ಆಕ್ಸೆಸ್ 125 ಸ್ಕೂಟರ್ ಮೇಲೆ ದೇಶ ಹಾಗೂ ವಿದೇಶಗಳಲ್ಲಿ ಗ್ರಾಹಕರಿಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ' ಎಂದು ಅವರು ಹೇಳಿದ್ದಾರೆ. ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ್ನು 2007ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಈ ಸ್ಕೂಟರ್ ಯಾವುದೇ ಏರಿಳಿತಗಳಿಲ್ಲದೆ ಸ್ಥಿರವಾಗಿ ಮಾರಾಟವಾಗುತ್ತಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್‌ಗೆ ಈ ಮಟ್ಟಿಗೆ ಬೇಡಿಕೆ ಬರಲು ಕಾರಣ, ಅದರ ಪವರ್ ಫುಲ್ '125 ಸಿಸಿ' ಪವರ್‌ಟ್ರೇನ್‌ ಹಾಗೂ ವೈಶಿಷ್ಟ್ಯಗಳು. ಪ್ರಸ್ತುತ ಕಂಪನಿಯು ಈ ಸ್ಕೂಟರ್ ಎಂಜಿನ್ ದೇಶಾದ್ಯಂತ ಜಾರಿಗೆ ಬಂದಿರುವ BS6 ಹಂತ 2 ಎಮಿಷನ್ ಮಾನದಂಡಗಳು ಹಾಗೂ E20 ಫ್ಯುಯೆಲ್ (80% ಪೆಟ್ರೋಲ್ ಹಾಗೂ 20% ಎಥನಾಲ್) ಬೆಂಬಲಿಸುವಂತೆ ಮೇಲ್ದರ್ಜೆಗೇರಿಸಿದೆ.

Suzuki Access: ಖದರ್ ತೋರಿಸಿದ ಸುಜುಕಿ ಆಕ್ಸೆಸ್ 125 ಸ್ಕೂಟರ್‌: ಚರಿತ್ರೆ ಸೃಷ್ಟಿ!

ಸುಜುಕಿ ಆಕ್ಸೆಸ್, 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಅತ್ಯುನ್ನತ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆಕ್ಸೆಸ್ ಸ್ಕೂಟರ್ ವಿವಿಧ ರೂಪಾಂತರಗಳು, 124 ಸಿಸಿ, ಸಿಂಗಲ್ ಸಿಲಿಂಡರ್, 2 ವಾಲ್ವ್, SOHC ಎಂಜಿನ್ ಹೊಂದಿದ್ದು, 6,750 rpmನಲ್ಲಿ 8.58 bhp ಗರಿಷ್ಠ ಪವರ್ ಹಾಗೂ 5,500 rpmನಲ್ಲಿ 10 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿವೆ.

ಭಾರತದ ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸೆಸ್ 125 ಮೂರು ವೇರಿಯೆಂಟ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್ ಮತ್ತು ರೈಡ್ ಕನೆಕ್ಟ್. ಅದರಲ್ಲಿ ಆಕ್ಸೆಸ್ 125 ರೈಡ್ ಕನೆಕ್ಟ್ ರೂಪಾಂತರವು ಬ್ಲೂಟೂತ್ ಕನೆಕ್ಟ್ದ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಜೊತೆಗೆ ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಕಾಲರ್ ಐಡಿ, SMS, ವಾಟ್ಸಾಪ್ ಅಲರ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಸುಜುಕಿ ಆಕ್ಸೆಸ್ 125 ಸ್ಕೂಟರ್ ಬೆಲೆ ವಿಚಾರವಾಗಿ ಮಾತನಾಡುವುದಾದರೆ, ರೈಡ್ ಕನೆಕ್ಟ್ ಆವೃತ್ತಿಯು ಕೊಂಚ ದುಬಾರಿ ಬೆಲೆಯನ್ನು ಹೊಂದಿದೆ. ರೂ.85,500 ದಿಂದ ರೂ.89,500, ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಸ್ಟ್ಯಾಂಡರ್ಡ್ ವೇರಿಯೆಂಟ್ ರೂ.79,400 ಬೆಲೆಯನ್ನು ಪಡೆದಿದೆ. ಸ್ಪೆಷಲ್ ಎಡಿಷನ್ ರೂ.84,800 (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಒಟ್ಟಾರೆ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ 'ಆಕ್ಸೆಸ್ 125' ಉತ್ಪಾದನೆಯಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿದೆ. ಈಗಲೂ ಈ ಸ್ಕೂಟರ್ ಗಳಿಗೆ ಸಖತ್ ಡಿಮ್ಯಾಂಡ್ ಇದ್ದು, ಬಹುತೇಕ ಖರೀದಿದಾರರು ಇಷ್ಟಪಟ್ಟು ಖರೀದಿಸುತ್ತಾರೆ. ಮುಂಬರುವ ದಿನಗಳಲ್ಲಿ ಗ್ರಾಹಕರು ಆಕ್ಸೆಸ್ ಸ್ಲ್ಯೂಟರ್ ಮಾದರಿಗಳಿಗೆ ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

More from DriveSpark

Article Published On: Wednesday, July 12, 2023, 17:27 [IST]
English summary
Suzuki access 5 million production milestone details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+