Suzuki e-Burgma: ಆಕರ್ಷಕವಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಸುಜುಕಿ
ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದೆ. ಇದರಿಂದ ನಿಧಾನವಾಗಿ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಿಕೆ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಪ್ರಾರಂಭಿಸಿದ್ದಾರೆ.
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳು ಹೀರೋ ಮೋಟೋಕಾರ್ಪ್, ಟಿವಿಎಸ್ ಮತ್ತು ಬಜಾಜ್ ಆಗಿದೆ. ಇನ್ನು 2024ರಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೋಂಡಾ ದೃಢಪಡಿಸಿದೆ. ಯಮಹಾ ಸಹ ಭಾರತೀಯ ಮಾರುಕಟ್ಟೆಗೆ ಇ-ಸ್ಕೂಟರ್ ಅನ್ನು ಸಿದ್ಧಪಡಿಸುತ್ತಿದೆ. ಇನ್ನು ಸುಜುಕಿ ಭಾರತೀಯ ರಸ್ತೆಗಳಲ್ಲಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಹ ಪರೀಕ್ಷಿಸುತ್ತಿದೆ.

ಸುಜುಕಿ ಮೋಟಾರ್ ಕಾರ್ಪೊರೇಷನ್ ಮುಂಬರುವ ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್‌ನ ಮೊದಲ ಅಧಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಸುಜುಕಿ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕೆಲವು ವಿವರಗಳನ್ನು ಬಹಿರಂಗಪಡಿಸಿದೆ. ಮುಂಬರುವ ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಕೆಲವು ಬಾರಿ ಪರೀಕ್ಷಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಈಗ ಜಪಾನ್‌ನ ಟೋಕಿಯೊದಲ್ಲಿ ಸುಧಾರಿತ ಪರೀಕ್ಷಾ ಹಂತವನ್ನು ಪ್ರವೇಶಿಸಲಿದೆ.
ಪರೀಕ್ಷೆಯು ಸುಜುಕಿಗೆ ಕಚೇರಿ, ಶಾಲೆ ಮತ್ತು ಶಾಪಿಂಗ್‌ಗೆ ಹೋಗುವಂತಹ ದೈನಂದಿನ ಚಟುವಟಿಕೆಗಳ ಸರಣಿಯನ್ನು ವಿಶ್ಲೇಷಿಸುವ ಮೂಲಕ ಮೌಲ್ಯಯುತವಾದ ಮಾಹಿತಿ ಮತ್ತು ಒಳನೋಟಗಳನ್ನು ಸಂಗ್ರಹಿಸುವುದರಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಈ ಸಂಗ್ರಹಿಸಿದ ಡೇಟಾವು ಮುಂಬರುವ ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸುಧಾರಿಸಲು ಸುಜುಕಿಗೆ ಸಹಾಯ ಮಾಡುತ್ತದೆ. ಸುಜುಕಿ ಇ-ಬರ್ಗ್‌ಮ್ಯಾನ್ ಅನ್ನು ಕ್ಲಾಸ್-2 ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಎಂದು ವರ್ಗೀಕರಿಸಲಾಗಿದೆ.

ಸುಜುಕಿ ಪ್ರಕಾರ, ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ 4kW ಪೀಕ್ ಔಟ್‌ಪುಟ್, 0.98kW ರೇಟ್ ಔಟ್‌ಪುಟ್ ಮತ್ತು 18 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಸಿಂಗಲ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಈ ರೇಂಜ್ ಗಮನಾರ್ಹವಾಗಿ ಕಡಿಮೆ ಕಂಡುಬಂದರೂ, ಅಂತಿಮ ಮಾದರಿಯು ಹೆಚ್ಚಿನ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ.
ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ 44 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 60 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿರುತ್ತದೆ, ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 147 ಕೆಜಿ ತೂಕವನ್ನು ಹೊಂದಿದೆ. ಸುಜುಕಿ ಬರ್ಗ್‌ಮ್ಯಾನ್ ಇ-ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.
ಈ ಬ್ಯಾಟರಿ ಪ್ಯಾಕ್ ಅನ್ನು ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ: ಸ್ವಾಪಿಂಗ್ ಸ್ಟೇಷನ್‌ಗಳಲ್ಲಿ ಬ್ಯಾಟರಿಯನ್ನು ಬದಲಾಯಿಸಬಹುದು ಮತ್ತು ರೀಚಾರ್ಜ್ ಮಾಡಬಹುದು. ಭಾರತಕ್ಕೆ ತನ್ನ ಎರಡನೇ ಎಲೆಕ್ಟ್ರಿಕ್ ವಾಹನವು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಎಂದು ಹೋಂಡಾ ಈಗಾಗಲೇ ಘೋಷಿಸಿದೆ. ಜಪಾನಿನ ದ್ವಿಚಕ್ರ ವಾಹನವು ರಾಷ್ಟ್ರದಾದ್ಯಂತ ಬಹು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುತ್ತದೆ.
ಸುಜುಕಿ ಇ-ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ 1,825 ಎಂಎಂ ಉದ್ದ, 765 ಎಂಎಂ ಅಗಲ ಮತ್ತು 1,140 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಸುಜುಕಿ ಎಲೆಕ್ಟ್ರಿಕ್ ಸ್ಕೂಟರ್‌ನ ಸೀಟ್ ಎತ್ತರವು 780 ಎಂಎಂ ಆಗಿದೆ. ಸುಜುಕಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಬ್ಯಾಟರಿ ಒಕ್ಕೂಟದ ಭಾಗವಾಗಿದೆ ಎಂದು ಸಹ ಉಲ್ಲೇಖಿಸಬೇಕಾದ ಅಂಶವಾಗಿದೆ. ಈ ಒಕ್ಕೂಟವು ಪ್ರಸ್ತುತ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ ಪ್ಯಾಕ್‌ಗಳು ಮತ್ತು ಇವಿಗಳಿಗೆ ಬದಲಿ ವ್ಯವಸ್ಥೆಗಳನ್ನು ಪ್ರಮಾಣೀಕರಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ


Click it and Unblock the Notifications








