Tata: ಬೃಹತ್ ಯೋಜನೆ ರೂಪಿಸಿದ ಟಾಟಾ.. ಮಾರುತಿ ಸುಜುಕಿ, ಮಹೀಂದ್ರಾ ಏನು ಮಾಡುತ್ತವೆ?

ಭಾರತದಲ್ಲಿ ಟಾಟಾ (Tata), ಅತಿ ದೊಡ್ಡ ವಾಹನ ತಯಾರಕ ಕಂಪನಿಯಾಗಿದೆ. ಅದರಲ್ಲೂ ದೇಶೀಯ ಎಲೆಕ್ಟ್ರಿಕ್ ವಾಹನ (ಇವಿ) ಮಾರಾಟದಲ್ಲಿ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದಿವರಿದಿದೆ. ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಿ, ಇವಿ ಸೇಲ್‌ನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಕಂಪನಿಯು ಕೆಲವೊಂದು ಯೋಜನೆಗಳನ್ನು ರೂಪಿಸುತ್ತಿದೆ.

ಟಾಟಾ ಮೋಟಾರ್ಸ್, ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅರ್ಥ ಮಾಡಿಕೊಂಡಿದ್ದು, ಟೈರ್ 2 ಹಾಗೂ ಟೈರ್ 3 ನಗರಗಳಲ್ಲಿ ಮಾರಾಟವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಪ್ರತೇಕ ಶೋರೂಂ ತೆರೆಯಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಯಶಸ್ವಿಯಾಗಿ 19,000 ಯುನಿಟ್ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ.

Tata: ಬೃಹತ್ ಯೋಜನೆ ರೂಪಿಸಿದ ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ ಏನು ಮಾಡುತ್ತವೆ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಪ್ಯಾಸೆಂಜರ್ ವೆಹಿಕಲ್ಸ್ ಎಂಡಿ ಶೈಲೇಶ್ ಚಂದ್ರ ಅವರು, 'ದೇಶದಲ್ಲಿ ಪ್ರಮುಖ 20 ನಗರಗಳನ್ನು ದಾಟಿ, ಇವಿ ಉದ್ಯಮ ದೊಡ್ಡದಾಗಿ ಬೆಳೆಯುತ್ತಿದೆ. ಎರಡನೇ ಹಂತದ ನಗರಗಳಲ್ಲಿಯೂ ಗ್ರಾಹಕರು, ಹೆಚ್ಚಿನ ಆಸಕ್ತಿಯಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿದ್ದಾರೆ. ಶೇಕಡ 49% ಗೂ ಅಧಿಕ ಟಿಯಾಗೊ ಇವಿಗಳನ್ನು ಸಣ್ಣ ನಗರಗಳಲ್ಲಿಯೇ ಖರೀದಿದಾರರು ಕೊಂಡುಕೊಂಡಿರುವುದನ್ನು ಗಮನಿಸಲಾಗಿದೆ' ಎಂದು ಹೇಳಿದ್ದಾರೆ.

ಸದ್ಯ, ಟಾಟಾ ಮೋಟಾರ್ಸ್ ಶಾಪ್-ಇನ್-ಶಾಪ್ (ಇಂಧನ ಚಾಲಿತ ಕಾರು ಶೋರೂಂನಲ್ಲಿ) ಪರಿಕಲ್ಪನೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ಮಾರಾಟ ಪ್ರಮಾಣವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಎಲೆಕ್ಟ್ರಿಕ್ ಕಾರುಗಳಿಗೆ ಪ್ರತೇಕ ಶೋರೂಂ ಹಾಗೂ ಸರ್ವಿಸ್ ಸೆಂಟರ್ ಸ್ಥಾಪಿಸುವುದಕ್ಕೆ ಕಂಪನಿ ಯೋಜನೆ ರೂಪಿಸುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ ಎಲ್ಲವು ಸಾಧ್ಯವಾಗುವ ನೀರಿಕ್ಷೆಯಿದೆ. ಟಾಟಾ ಈ ವರ್ಷ 1 ಲಕ್ಷ ಎಲೆಕ್ಟ್ರಿಕ್ ವಾಹನ ಮಾರಲು ನಿರ್ಧರಿಸಿದೆ.

Tata: ಬೃಹತ್ ಯೋಜನೆ ರೂಪಿಸಿದ ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ ಏನು ಮಾಡುತ್ತವೆ?

ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್, ನೆಕ್ಸಾನ್‌ ಇವಿ, ಟಿಯಾಗೊ ಇವಿ ಹಾಗೂ ಟಿಗೂರ್ ಇವಿಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕಳೆದ ತಿಂಗಳು (ಜುಲೈ) 6,329 ಯುನಿಟ್ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿ, ಹೋದ ವರ್ಷದ ಇದೇ ಅವಧಿಗೆ (4,151 ಯುನಿಟ್‌) ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 53% ಪ್ರಗತಿ ಕಂಡಿದೆ. ಈ ಮೂಲಕ ಇವಿ ಮಾರಾಟದಲ್ಲಿ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಟಾಟಾದ ಜನಪ್ರಿಯ ಎಲೆಕ್ಟ್ರಿಕ್ ಎಸ್‍ಯುವಿ ನೆಕ್ಸಾನ್‌ ಇವಿ ಕುರಿತು ಮಾತನಾಡುವುದಾದರೆ, ಇದು ದೇಶೀಯ ಗ್ರಾಹಕರಿಗೆ ಪ್ರೇಮ್ ಮತ್ತು ಮ್ಯಾಕ್ಸ್ ಎಂಬ ಎರಡು ವೇರಿಯೆಂಟ್ ಆಯ್ಕೆಯಲ್ಲಿ ಸಿಗುತ್ತದೆ. ಪ್ರೇಮ್ ರೂ.14.49 ಲಕ್ಷದಿಂದ ರೂ.17.19 ಲಕ್ಷ ಹಾಗೂ ಮ್ಯಾಕ್ಸ್ ರೂ.16.49 ಲಕ್ಷದಿಂದ ರೂ.19.54 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 312 ಕಿಲೋಮೀಟರ್ ರಿಂದ 453 ಕಿಲೋಮೀಟರ್ ರೇಂಜ್ ನೀಡುತ್ತದೆ.

ಟಾಟಾದ ಅಗ್ಗದ ಬೆಲೆಯ ಟಿಯಾಗೊ ಇವಿ ರೂ.8.69 ಲಕ್ಷದಿಂದ ರೂ.12.04 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ 250 ಕಿಲೋಮೀಟರ್ ರಿಂದ 315 ಕಿಲೋಮೀಟರ್ ರೇಂಜ್ ಕೊಡುತ್ತದೆ. ಟಿಗೂರ್ ಇವಿ ರೂ.12.49 ಲಕ್ಷದಿಂದ ರೂ.13.75 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ವಾಣಿಜ್ಯ ಬಳಕೆಗೆ ಮಾತ್ರ ದೊರೆಯಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 315 km ರೇಂಜ್ ನೀಡುತ್ತದೆ.

ಇನ್ನು, ತನ್ನ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅರಿತುಕೊಂಡಿರುವ ಟಾಟಾ, ಎರಡನೇ ಹಂತದ ನಗರಗಳಲ್ಲಿ ಮಾರಾಟವನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಪಂಚ್, ಹ್ಯಾರಿಯರ್ ಇವಿಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯ, ಮಹೀಂದ್ರಾ ಒಂದೇ ಒಂದು ಎಲೆಕ್ಟ್ರಿಕ್ ಕಾರು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿಯು ಎಲೆಕ್ಟ್ರಿಕ್ ಕಾರನ್ನು ಅಭಿವೃದ್ದಿಪಡಿಸುತ್ತಿದ್ದು, ಟಾಟಾಗೆ ಹೇಗೆ ಫೈಟ್ ನೀಡುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, August 8, 2023, 14:57 [IST]
English summary
Tata motors major plan increase ev sales details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+