World Environment Day: ಅತ್ಯಧಿಕ ರೇಂಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಭಾರತದಲ್ಲಿ ಕಳೆದೆರಡು ವರ್ಷಗಳಲ್ಲಿ ಜನರು ಇಂಧನ ಚಾಲಿತ ದ್ವಿಚಕ್ರ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಆಯ್ಕೆಮಾಡುವಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಈ ವಿಶ್ವ ಪರಿಸರ ದಿನದಂದು, ನಂಬಲಾಗದ ರೇಂಜ್ ನೀಡುವ ಭಾರತದಲ್ಲಿನ ಅಗ್ರ ಐದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡುತ್ತಿದ್ದೇವೆ.

ಅಲ್ಟ್ರಾವೈಲೆಟ್ F77: ಮೊದಲಿಗೆ ನಮ್ಮ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಬೈಕ್ ಆದ ಅಲ್ಟ್ರಾವೈಲೆಟ್ F77 ಬಗ್ಗೆ ಹೇಳಲೇಬೇಕು. ಇದು ದೇಶದ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಬೈಕ್ ಹಾಗೂ ಭಾರತದ ಮೊದಲ ಎಲೆಕ್ಟ್ರಿಕ್ ಸೂಪರ್ ಬೈಕ್ ಎಂದು ಖ್ಯಾತಿ ಪಡೆದಿದೆ. ಇದು ಸಂಪೂರ್ಣ ಪರ್ಫಾಮೆನ್ಸ್-ಆಧಾರಿತ ಬೈಕ್ ಆಗಿದ್ದು, ಸಿಂಗಲ್ ಚಾರ್ಜ್‌ನಲ್ಲಿ 307 ಕಿ.ಮೀ ರೇಂಜ್ ಹೊಂದಿರುವುದಾಗಿ ಕಂಪನಿ ಹೇಳಿಕೊಂಡಿದೆ.

World Environment Day

ಗ್ರಾವ್ಟನ್ ಕ್ವಾಂಟಾ: ಇಲ್ಲಿ ಕೇವಲ ಹೆಚ್ಚಿನ ರೇಂಜ್ ಬಗ್ಗೆ ಮಾತನಾಡುತ್ತಿರುವುದರಿಂದ ಸದ್ಯ ದೇಶದಲ್ಲಿ ಅತ್ಯಂತ ಹೆಚ್ಚಿನ ರೇಂಜ್ ಹೊಂದಿರುವುದು ಗ್ರಾವ್ಟನ್ ಕ್ವಾಂಟಾ ಆಗಿದೆ. ಇದು ಹೈದ್ರಾಬಾದ್ ಮೂಲದ ಸ್ಟಾರ್ಟ್‌ಅಪ್‌ ಆಗಿದ್ದು, ಈ ಇ-ಸ್ಕೂಟರ್ ಕೇವಲ 25 ಕಿ.ಮೀ ವೇಗದಲ್ಲಿ ಮಾತ್ರ ಚಲಿಸಬಲ್ಲದು. ಆದರೆ ಇದು ಸುಮಾರು 320 ಕಿ.ಮೀ ರೇಂಜ್ ಹೊಂದಿದೆ.

iVOOMi S1 240: ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನ ಕಂಪನಿಗಳಿಂದ ಬಹುಶಃ ಈ ಸ್ಕೂಟರ್ ಬಗ್ಗೆ ನೀವು ಕೇಳಿರುವುದಿಲ್ಲ. ಆದ್ರೆ ರೇಂಜ್‌ನಲ್ಲಿ ಈ ಸ್ಕೂಟರ್ ಖ್ಯಾತಿ ಪಡೆದಿದೆ. iVOOMi ತಯಾರಿಸಿದ S1 240 ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 240 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು 2.5kW ಹಬ್ ಮೋಟಾರ್‌ನಿಂದ ಚಾಲಿತವಾಗಿದ್ದು, 4.2kWh ಸಂಯೋಜಿತ ಅವಳಿ ಬ್ಯಾಟರಿ ಪ್ಯಾಕ್‌ ಹೊಂದಿದೆ.

World Environment Day

ಸಿಂಪಲ್ ಒನ್: ಇದು ನಮ್ಮ ಬೆಂಗಳೂರು ಮೂಲದ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿದ್ದು, ಎಲೆಕ್ಟ್ರಿಕ್ ರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಇದ್ದರೂ ಇತ್ತೀಚೆಗೆ ತನ್ನ ಮೊದಲ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಸ್ಕೂಟರ್ 5kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸುಮಾರು 212 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

Ola S1 Pro: ಓಲಾ ಈ ಬ್ರಾಂಡ್ ದೇಶದ ಬಹುತೇಕರಿಗೆ ಗೊತ್ತಿದೆ, ಸಾಕಷ್ಟು ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸದ್ಯ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿದೆ. Ola ತನ್ನ ಮೊದಲ S1 ಮತ್ತು S1 ಪ್ರೊ ಅನ್ನು ಪ್ರದರ್ಶಿಸಿದಾಗಿನಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಈ ಸ್ಕೂಟರ್ ಬ್ರಾಂಡ್ ಹೇಳಿಕೊಂಡಂತೆ ಸುಮಾರು 181 ಕಿ.ಮೀ ರೇಂಜ್ ನೀಡುತ್ತದೆ.

World Environment Day

ಬ್ರಾಂಡ್‌ನ ವೇಗದ ಚಾರ್ಜರ್‌ನಿಂದ ಕೇವಲ 18 ನಿಮಿಷಗಳಲ್ಲಿ S1 ಪ್ರೊನ ಬ್ಯಾಟರಿಯನ್ನು ಶೇ75 ಕಿ.ಮೀ ರೇಂಜ್ ನೀಡುವಷ್ಟು ಚಾರ್ಜ್ ಮಾಡಬಹುದು ಎಂದು ಓಲಾ ಹೇಳಿಕೊಂಡಿದೆ. ಈ ಮೂಲಕವೇ ಗ್ರಾಹಕರಲ್ಲಿ ಓಲಾ ಸಖತ್ ಫೆಮಸ್ ಆಗಿದೆ. ಆದ್ರೂ ನಿಮ್ಮ ಮನೆಯಲ್ಲಿ ಸಾಮಾನ್ಯ ಚಾರ್ಜರ್‌ನಿಂದ, ಪೂರ್ಣ ಚಾರ್ಜ್‌ ಮಾಡಬೇಕೆಂದರೆ 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Monday, June 5, 2023, 11:31 [IST]
English summary
Top 5 electric two wheelers with highest range world environment day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+