ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು: ಕ್ಲಾಸಿಕ್ 350 ಬೈಕಿಗೆ ಸರಿಸಾಟಿ ಇಲ್ಲ
ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಆಧುನಿಕ-ಕ್ಲಾಸಿಕ್ ಮೋಟಾರ್‌ಸೈಕಲ್‌ಗಳ ಅತ್ಯಂತ ಯಶಸ್ವಿ ತಯಾರಕರಲ್ಲಿ ಒಂದಾಗಿದೆ. ಕಳೆದ ತಿಂಗಳ ಮಾರಾಟದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭರ್ಜರಿಯಾಗಿ ಮಾರಾಟವಾಗಿದ್ದು, ಇದರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಯ 22,525 ಯುನಿಟ್‌ಗಳ ಮಾರಾಟದೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ರಾಯಲ್ ಎನ್‌ಫೀಲ್ಡ್ ಎಂಬ ಹೆಗ್ಗಳಿಕೆಯನ್ನು ಮುಂದುವರೆಸಿದೆ. ಪ್ರಾರಂಭದಿಂದಲೂ ಕ್ಲಾಸಿಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ಗೆ ಪ್ರಮುಖ ಮಾದರಿಗಳಲ್ಲಿ ಒಂದಾಗಿದೆ. ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ.

ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಈ ಮಾದರಿಯು ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ. ಈ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದೆ, ಈ ಹೊಸ ಬೈಕಿನಲ್ಲಿ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದೆ.

ಹಂಟರ್ 350: ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಹಂಟರ್ 350 ಬೈಕ್ ಅನ್ನು 2022ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಅಂದಿನಿಂದ ಈ ಬೈಕ್‌ನ ಮಾರಾಟವು ಸ್ಥಿರವಾಗಿ ಏರಿಕೆಯಲ್ಲಿದೆ. ಎಷ್ಟರಮಟ್ಟಿಗೆ ಎಂದರೆ ಮಾರಾಟ ಸಂಖ್ಯೆಗಳಲ್ಲಿ ಬಹುಬೇಡಿಕೆಯ ಕ್ಲಾಸಿಕ್ 350 ಬೈಕಿನ ಹತ್ತಿರಲ್ಲಿದೆ. ಕಳೆದ ತಿಂಗಳು ಹಂಟರ್ 350 ಮಾದರಿಯ 19,000 ಯುನಿಟ್‌ಗಳ ಮಾರಾಟವಾಗಿದೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್ ಮತ್ತು ಉದ್ದವಾದ ಸಿಂಗಲ್-ಪೀಸ್ ಸೀಟ್ ಅನ್ನು ಹೊಂದಿದೆ.
ಇದರೊಂದಿಗೆ ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ. ಈ ಹೊಸ ಹಂಟರ್ 350 ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಅಳವಡಿಸಲಾಗಿದೆ ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350: ಈ ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮಾದರಿಯ 12,364 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇದು ರಾಯಲ್ ಎನ್‌ಫೀಲ್ಡ್‌ನ ಪೋರ್ಟ್‌ಫೋಲಿಯೊದಲ್ಲಿ ದೀರ್ಘಾವಧಿಯ ಮಾದರಿಯಾಗಿದೆ. ಬುಲೆಟ್ 350 ಬೈಕ್ ಅನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯ J ಪ್ಲಾಟ್‌ಫಾರ್ಮ್‌ನೊಂದಿಗೆ ಇನ್ನೂ ನವೀಕರಿಸಲಾಗಿಲ್ಲ. ಇನ್ನು ಇತರ ರಾಯಲ್ ಎನ್‌ಫೀಲ್ಡ್ ಮಾದರಿಗಳಿಗಿಂತ ಭಿನ್ನವಾಗಿ, ರಾಯಲ್ ಎನ್‌ಫೀಲ್ಡ್ ಹೊಸ ಬುಲೆಟ್ ಮೋಟಾರ್‌ಸೈಕಲ್ ತಯಾರಿಕೆಯಲ್ಲಿ ಕೆಲವು ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್‌ನ ಕೆಲವು ಸ್ಪೈ ಚಿತ್ರಗಳ ಪ್ರಕಾರ, ಕಂಪನಿಯು ಮೋಟಾರ್‌ಸೈಕಲ್‌ಗೆ ಬದಲಾವಣೆಗಳನ್ನು ಪರಿಚಯಿಸಿದೆ ಎಂದು ಹೇಳಬಹುದು ಆದರೆ ಬಹಳ ಸೂಕ್ಷ್ಮ ರೀತಿಯ ಬದಲಾವಣೆಯಾಗಿದೆ. ರಾಯಲ್ ಎನ್‌ಫೀಲ್ಡ್‌ನ ವಿನ್ಯಾಸಕರು ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್‌ಸೈಕಲ್‌ನ ಮೂಲ ವಿನ್ಯಾಸದ ಲಕ್ಷಣಗಳಾದ ಸಿಂಗಲ್-ಪೀಸ್ ಸ್ಟೆಪ್ಡ್ ಸೀಟ್, ರೆಟ್ರೊ-ಸ್ಟೈಲ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಉಳಿಸಿಕೊಂಡಿದ್ದಾರೆ. ಇದಲ್ಲದೆ, ಈ ಗುಣಲಕ್ಷಣಗಳನ್ನು ಹೊಸ ಮೋಟಾರ್‌ಸೈಕಲ್‌ಗೆ ಸರಿಹೊಂದುವಂತೆ ನವೀಕರಿಸಲಾಗಿದೆ.


Click it and Unblock the Notifications








