ಬೆಂಗಳೂರು ಮೂಲದ River Indie ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿದೆ. ಇದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಕಂಪನಿಯಾದ River ತನ್ನ Indie ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು.

ಹೊಸದಾಗಿ ಬಿಡುಗಡೆಯಾದ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.25 ಲಕ್ಷವಾಗಿದೆ. ಇದಲ್ಲದೆ, ಈ ಬೆಲೆಯು FAME 2 ಸಬ್ಸಿಡಿ ಮತ್ತು ಹೋಮ್ ಚಾರ್ಜರ್ ಅನ್ನು ಒಳಗೊಂಡಿದೆ. ಈ River Indie ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.1,250 ಪಾವತಿಸಿ ಬುಕ್ ಮಾಡಬಹುದು. ಹೆಚ್ಚಿನ ಸ್ಟೋರೇಜ್ ಸ್ಪೇಸ್, ಪ್ಯಾನಿಯರ್ ಮೌಂಟ್‌ಗಳು, ಮುಂಭಾಗದ ಫುಟ್‌ಪೆಗ್‌ಗಳು ಮತ್ತು ಕ್ರ್ಯಾಶ್ ಗಾರ್ಡ್‌ಗಳಂತಹ ವೈಶಿಷ್ಟ್ಯಗಳೊಂದಿಗೆ Indie ಎಲೆಕ್ಟ್ರಿಕ್ ಸ್ಕೂಟರ್ ಪ್ರಾಯೋಗಿಕತೆಯಲ್ಲಿ ಮುಂಚೂಣಿಯಲ್ಲಿರುತ್ತದೆ.

ಬೆಂಗಳೂರು ಮೂಲದ River Indie ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

ಈ River Indie ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ IP67-ರೇಟೆಡ್ 4kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಅದು 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿಕೊಂಡು 5 ಗಂಟೆಗಳಲ್ಲಿ ಬ್ಯಾಟರಿಯನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಹೊಸ Indie ಎಲೆಕ್ಟ್ರಿಕ್ ಸ್ಕೂಟರ್ 8.98 ಬಿಹೆಚ್‍ಪಿ ಪವರ್ ಮತ್ತು 26 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಈ River Indie ಎಲೆಕ್ಟ್ರಿಕ್ ಸ್ಕೂಟರ್ 3.9 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 90 ಕಿ,.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಬ್ಯಾಟರಿ ಮತ್ತು ಸ್ಕೂಟರ್ ಎರಡಕ್ಕೂ 5 ವರ್ಷ/50,000 ಕಿಮೀ ವಾರಂಟಿಯನ್ನು ಕಂಪನಿಯು ನೀಡಿದ್ದಾರೆ. ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ 770mm ಸೀಟ್ ಎತ್ತರವನ್ನು ಹೊಂದಿದೆ.

ಇನ್ನು ಯಮಹಾ ಏರಾಕ್ಸ್ ಮತ್ತು ಎಪ್ರಿಲಿಯಾ SR160 ಸ್ಕೂಟರ್ ಗಳ ರೀತಿಯಲ್ಲೇ 14-ಇಂಚಿನ ವ್ಹೀಲ್ ಗಳನ್ನು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀಡಲಾಗಿದೆ. ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ಮಾನ್ಸೂನ್ ಬ್ಲೂ, ಸಮ್ಮರ್ ರೆಡ್ ಮತ್ತು ಸ್ಪ್ರಿಂಗ್ ಯೆಲ್ಲೋ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ಕಲರ್ LCD ಡ್ಯಾಶ್ ಅನ್ನು ಹೊಂದಿದೆ.

ಈ ಸ್ಕೂಟರ್ ನಲ್ಲಿ ಇಕೋ, ರೈಡ್ ಮತ್ತು ರಶ್ ಎಂಬ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿವೆ. ಇನ್ನು ಇತರೆ ಪ್ರಮುಖ ಫೀಚರ್ಸ್ ಗಳು, ಡ್ ಸ್ಟ್ಯಾಂಡ್ ಕಟ್-ಆಫ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಮತ್ತು 90-ಡಿಗ್ರಿ ವಾಲ್ವ್ ಸೆಟ್ಮ್ ಅನ್ನು ಒಳಗೊಂಡಿವೆ. ಈ ಸ್ಕೂಟರ್ ಮಾದರಿಯ ವಿಭಾಗದಲ್ಲಿ ಅತಿ ಉದ್ದವಾದ ಮತ್ತು ಅಗಲವಾದ ಸೀಟ್ ಅನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಕ್ರ್ಯಾಶ್ ಗಾರ್ಡ್‌ಗಳು ಮತ್ತು ಫ್ರಂಟ್ ಫುಟ್‌ಪೆಗ್‌ಗಳಂತಹ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕಂಡುಬರದ ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೀಡಲಾಗಿದೆ. ಇದು ಎರಡೂ USB ಚಾರ್ಜಿಂಗ್ ಪೋರ್ಟ್‌ಗಳನ್ನು ಸಹ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಎಲ್ಇಡಿ ಲೈಟಿಂಗ್ ಮತ್ತು 25-ಲೀಟರ್ ಟಾಪ್ ಬಾಕ್ಸ್ ಮತ್ತು ಪ್ಯಾನಿಯರ್ ಸೆಟ್‌ನಂತಹ ಆಡ್-ಆನ್ ಲಗೇಜ್ ಆಯ್ಕೆಗಳನ್ನು ಪಡೆಯುತ್ತದೆ, ಇದು 40 ಲೀಟರ್ ವರೆಗಿನ ಸಾಮರ್ಥ್ಯವಿದೆ.

ಇನ್ನು ಈ ಹೊಸ River ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 240mm ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 200mm ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ 165mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

More from DriveSpark

Article Published On: Saturday, February 25, 2023, 19:52 [IST]
English summary
Top things about the river indie electric scooter details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+