TORK: ಕರ್ನಾಟಕಕ್ಕೆ ಲಗ್ಗೆಯಿಟ್ಟ ಟ್ರೆಂಡ್‌ಸೆಟರ್ ಟಾರ್ಕ್.. ಎಲೆಕ್ಟ್ರಿಕ್ ಬೈಕ್ ವಿಭಾಗದಲ್ಲಿ ಚರಿತ್ರೆ ಸೃಷ್ಟಿ!
ಪುಣೆ ಮೂಲದ ದೇಶದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಟಾರ್ಕ್ (TORK) ಕರ್ನಾಟಕಕ್ಕೆ ಲಗ್ಗೆ ಇಟ್ಟಿದೆ. ಈ ಮೂಲಕ ದಕ್ಷಿಣ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಕ್ರಾಟೋಸ್ ಇ-ಬೈಕ್‌ನೊಂದಿಗೆ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಟಾರ್ಕ್ ಮೋಟಾರ್ಸ್, ಬೆಂಗಳೂರಿನಲ್ಲಿ ತನ್ನ ಮೊದಲ ಎಕ್ಸ್ಪೀರಿಯೆನ್ಸ್ ಜೋನ್ (Experience Zone) ಅನ್ನು ಶುಕ್ರವಾರ ಉದ್ಘಾಟಿಸಿದೆ. ಇನ್ಮುಂದೆ, ಜಯನಗರದ 5ನೇ ಬ್ಲಾಕ್‌ನಲ್ಲಿರುವ ಈ ಕೇಂದ್ರದ ಮೂಲಕ ಟಾರ್ಕ್ ಮೋಟಾರ್ಸ್, ತನ್ನ ಕಾರ್ಯಚರಣೆಯನ್ನು ನಡೆಸಲಿದೆ. ಇಲ್ಲಿ ಕ್ರಾಟೋಸ್ (KRATOS) ಸರಣಿಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾರಾಟ ಹಾಗೂ ಸರ್ವಿಸ್ ಕೂಡ ಲಭ್ಯವಿರಲಿದೆ.

ನೂತನ ಕೇಂದ್ರದಿಂದ ಬೆಂಗಳೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈಗಾಗಲೇ, ಕ್ರಾಟೋಸ್ ಸರಣಿ ಬೈಕ್ ಹೊಂದಿರುವ ಗ್ರಾಹಕರು ಹಾಗೂ ಹೊಸ ಮೋಟಾರ್‌ಸೈಕಲ್ ಖರೀದಿಸುವವರಿಗೆ ಈ ಕೇಂದ್ರದಲ್ಲಿ ಹಲವು ಸೇವೆಗಳು ದೊರೆಯಲಿವೆ. ಅದರಲ್ಲೂ ಇದೇ ಬೈಕ್ ಕೊಂಡುಕೊಳ್ಳಬೇಕು ಅಂದುಕೊಂಡವರಿಗೆ ಟೆಸ್ಟ್ ಡ್ರೈವ್ ಮಾಡುವ ಅವಕಾಶವು ಸಿಗಲಿದೆ.
ಹೊಸ ಎಕ್ಸ್ಪೀರಿಯೆನ್ಸ್ ಜೋನ್ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಟಾರ್ಕ್ ಮೋಟಾರ್ಸ್ ಸಿಇಒ ಕಪಿಲ್ ಶೆಲ್ಕೆ ಅವರು, 'ಬೆಂಗಳೂರಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸುತ್ತಿರುವುದು ಸಂತೋಷ ತಂದಿದೆ. ನಗರವು ತಂತ್ರಜ್ಞಾನದ ರಾಜಧಾನಿಯಾಗಿದ್ದು, ನಮ್ಮ ಕಂಪನಿಗೆ ಮಹತ್ವದ ಮಾರುಕಟ್ಟೆಯಾಗಿದೆ. ಭಾರತೀಯ ಯುವ ಸವಾರರಿಗಾಗಿಯೇ ಕ್ರಾಟೋಸ್ ಆರ್ ಬೈಕ್ ಅನ್ನು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಮಂದಿಗೆ ಇಷ್ಟವಾಗುತ್ತದೆ' ಎಂದು ಹೇಳಿದ್ದಾರೆ.

ಟಾರ್ಕ್ ಕಂಪನಿಯ ಕ್ರಾಟೋಸ್ ಆರ್ ಮೋಟಾರ್‌ಸೈಕಲ್, ಭಾರತದ ರಸ್ತೆಯಲ್ಲಿ ಅದರ ಕಾರ್ಯಕ್ಷಮತೆ ಹಾಗೂ ಆಕರ್ಷಕ ವಿನ್ಯಾಸದಿಂದ ಟ್ರೆಂಡ್‌ಸೆಟರ್ ಆಗಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ನವೀಕರಿಸಿದ ಕ್ರಾಟೋಸ್ ಆರ್ ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್, ರೂ.2,09,999 ಲಕ್ಷ ಎಕ್ಸ್ ಶೋರೂಂ (ಪುಣೆ) ಬೆಲೆಯನ್ನು ಹೊಂದಿದೆ. ರಾಜ್ಯದಿಂದ ರಾಜ್ಯಕ್ಕೆ ಅನುಗುಣವಾಗಿ ಆನ್-ರೋಡ್ ದರಗಳು ಬೇರೆಯಾಗಿರುತ್ತವೆ.
ಈ ಕ್ರಾಟೋಸ್ ಆರ್ ಬೈಕ್ ನಲ್ಲಿ 4.0 kWH (IP 67 ರೇಟೆಡ್) ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. ಜೊತೆಯಲ್ಲಿ 9 kW 'ಆಕ್ಸಿಯಲ್ ಫ್ಲಕ್ಸ್' ಮೋಟಾರ್ ಇದ್ದು, 38 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 180 ಕಿಲೋಮೀಟರ್ (IDC) ರೇಂಜ್ ನೀಡಲು ಶಕ್ತವಾಗಿದೆ. 105 km/h ಟಾಪ್ ಸ್ವೀಡ್ ಹೊಂದಿದೆ.

ಟಾರ್ಕ್ ಕ್ರಾಟೋಸ್ ಆರ್, ಇಕೋ, ಸಿಟಿ, ಸ್ಪೋರ್ಟ್ಸ್ ಹಾಗೂ ರಿವರ್ಸ್ ಎಂಬ ರೈಡಿಂಗ್ ಮೋಡ್ ಆಯ್ಕೆಯೊಂದಿಗೆ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು 4 - 5 ಗಂಟೆ ತೆಗೆದುಕೊಳ್ಳುತ್ತದೆ. 17 ಇಂಚಿನ ಅಲಾಯ್ ವೀಲ್ಸ್ ಹೊಂದಿದ್ದು, ಫ್ರಂಟ್ 90/80-17 ಹಾಗೂ ರೇರ್ 120/80-17 ಅಳತೆಯ ಟ್ಯೂಬ್ ಲೆಸ್ ಟೈಯರ್ಸ್ ಪಡೆದಿದೆ.
ಈ ಕ್ರಾಟೋಸ್ ಆರ್ ಮೋಟಾರ್‌ಸೈಕಲ್ ಫ್ರಂಟ್ ಹೈಡ್ರಾಲಿಕ್ ಟೆಲಿಸ್ಕೋಪಿಕ್, ರೇರ್ ಮೊನೊ ಶಾಕ್ ಹೈಡ್ರಾಲಿಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಫ್ರಂಟ್ ಹಾಗೂ ರೇರ್ ಡಿಸ್ಕ್ ಆಯ್ಕೆಯನ್ನು ಪಡೆದಿದ್ದು, ಡಿಜಿಟಲ್ ಡ್ಯಾಶ್ ಬೋರ್ಡ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟಾರ್ಕ್ ಕಂಪನಿ ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿರುವುದರಿಂದ ಮಾಸಿಕ ರೂ.2,999 ಇಎಂಐ ಪಾವತಿಯೊಂದಿಗೆ ಗ್ರಾಹಕರು, ಈ ಬೈಕ್ ಖರೀದಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








