Ola Electric bikes: 4 ಓಲಾ ಇವಿ ಬೈಕ್‌ಗಳಿಗೆ ಟ್ರೇಡ್‌ಮಾರ್ಕ್ ಕನ್ಫರ್ಮ್: ಕಣ್ಮರೆಯಾಗಲಿವೆ ಸ್ಪ್ಲೆಂಡರ್, ಆಕ್ಟಿವಾ!
ದೇಶದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಓಲಾ ಇಡೀ ಭಾರತವನ್ನು ಕಾರ್ಬನ್ ಮುಕ್ತವಾಗಿಸಲು ಪಣ ತೊಟ್ಟಿದೆ. ಇದಕ್ಕಾಗಿ ಓಲಾ ಎಲೆಕ್ಟ್ರಿಕ್ ಇಂಧನ ಚಾಲಿತ ವಾಹನಗಳಿಲ್ಲದ ಭಾರತ ನಿರ್ಮಾಣಕ್ಕಾಗಿ ತನ್ನ ಕೊಡುಗೆಯಾಗಿ S1, S1 ಏರ್ ಮತ್ತು S1 X ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಪರಿಚಯಿಸಿದೆ.
ಈಗಾಗಲೇ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿರುವ ಓಲಾ ಎಲೆಕ್ಟ್ರಿಕ್ ಈಗ ಎಲೆಕ್ಟ್ರಿಕ್ ಬೈಕ್‌ಗಳ ಮಾರಾಟದ ಮೂಲಕ ದೇಶದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದೆ. ಇದನ್ನು ದೃಢಪಡಿಸುವ ಮಾಹಿತಿ ಇದೀಗ ಲಭ್ಯವಾಗಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ವಿವಿಧ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಓಲಾ ಎಲೆಕ್ಟ್ರಿಕ್ ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ. ಈ ಎಲ್ಲಾ ಬೈಕ್‌ಗಳು ಮಾರುಕಟ್ಟೆಗೆ ಇಳಿದರೆ ಆಟೋ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದ್ರೆ ಬನ್ನಿ ಸದ್ಯ ಟ್ರೇಡ್ ಮಾರ್ಕ್ ಸಲ್ಲಿಸಿರುವ ಬೈಕ್‌ಗಳ ಬಗ್ಗೆ ವಿವರವಾಗಿ ತಿಳಿಯೋಣ.
Ola ತನ್ನ S1 ಸರಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿರುವಂತೆಯೇ M0 ಮತ್ತು M1 ಸರಣಿಯಲ್ಲಿ ತನ್ನ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಎಂದು ತಿಳಿದುಬಂದಿದೆ. ಇದನ್ನು ಖಚಿತಪಡಿಸುವಂತೆ ಓಲಾ ಟ್ರೇಡ್‌ಮಾರ್ಕ್ ಅನ್ನು ಪ್ರಸ್ತುತ M0 ಮತ್ತು M1 ಸರಣಿಗಳಿಗೆ ನೋಂದಾಯಿಸಿದೆ.

Ola M0 ಸರಣಿಯಲ್ಲಿ ಒಂದೇ ಮಾದರಿಯ ಡೈಮಂಡ್ ಹಿಲ್‌ಗೆ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ. ಹಾಗೆಯೇ M1 ಸರಣಿಯ ಅಡಿಯಲ್ಲಿ M1 ಅಡ್ವೆಂಚರರ್, M1 ಸೈಬರ್ ರೇಸರ್, M1 ಕ್ರೂಸರ್, M1 ರೋಡ್‌ಸ್ಟರ್ ಮತ್ತು M1 ಡೈಮಂಡ್ ಹೆಡ್‌ನ ಐದು ಮಾದರಿಗಳನ್ನು ನೋಂದಾಯಿಸಿದೆ. ಈ ಮೋಟಾರ್‌ಸೈಕಲ್‌ಗಳು ಯಾವಾಗ ಮಾರಾಟಕ್ಕೆ ಬರಲಿವೆ ಎಂಬ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ.
ಓಲಾ ಆಗಸ್ಟ್ 15 ರಂದು S1X ಎಲೆಕ್ಟ್ರಿಕ್ ಸ್ಕೂಟರ್‌ನ ಬಿಡುಗಡೆ ಸಮಾರಂಭದಲ್ಲಿ ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಪ್ರದರ್ಶಿಸಿತು. ಕಂಪನಿಯು ಕ್ರೂಸರ್, ರೋಡ್‌ಸ್ಟರ್, ಅಡ್ವೆಂಚರ್ ಮತ್ತು ಡೈಮಂಡ್ ಹೆಡ್ ಎಂಬ 4 ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಅನಾವರಣಗೊಳಿಸಿತ್ತು. ಆದರೆ, ಟ್ರೇಡ್‌ಮಾರ್ಕ್ ನೋಂದಣಿಯನ್ನು ಕಳೆದ ಜುಲೈ 11 ಮತ್ತು 14 ರಂದು ಮಾಡಲಾಗಿದೆ.

ಅಂದಿನಿಂದ ಕಂಪನಿಯು ಭಾರತದಲ್ಲಿ ಕೇವಲ ನಾಲ್ಕು ಇ-ಬೈಕ್ ಮಾದರಿಗಳನ್ನು ಪ್ರದರ್ಶಿಸಿದೆ. ಆದ್ದರಿಂದ ಇದೇ ಅಡ್ವೆಂಚರರ್, ರೋಡ್‌ಸ್ಟರ್, ಕ್ರೂಸರ್ ಮತ್ತು ಡೈಮಂಡ್ ಹೆಡ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಮೊದಲಿಗೆ ಮಾರಾಟವಾಗುವ ನಿರೀಕ್ಷೆಯಿದೆ. ಓಲಾ ಇತ್ತೀಚೆಗೆ ಅವುಗಳನ್ನು ಪ್ರದರ್ಶಿಸಿದಾಗಲೂ, ಅವುಗಳನ್ನು ಪರಿಕಲ್ಪನೆಯ ಮಾದರಿಗಳಾಗಿ ಮಾತ್ರ ಪ್ರದರ್ಶಿಸಲಾಯಿತು.
ಓಲಾದಿಂದ ಆದಷ್ಟು ಬೇಗನೇ ಈ ಎಲೆಕ್ಟ್ರಿಕ್ ಬೈಕ್‌ಗಳು ಭಾರತದಲ್ಲಿ ಖರೀದಿಗೆ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ಹೀರೋನ ಸ್ಪ್ಲೆಂಡರ್ ಬೈಕ್‌ನಿಂದ ಹಿಡಿದು ಅಲ್ಟ್ರಾವೈಲೆಟ್‌ನ ಸೂಪರ್‌ಬೈಕ್ ಮಾದರಿಯಾದ ಎಫ್77 ಎಲೆಕ್ಟ್ರಿಕ್ ಬೈಕ್‌ಗೆ ಓಲಾ ತೀವ್ರ ಪೈಪೋಟಿ ನೀಡಲಿದೆ. ಈ ಕಾರಣಕ್ಕಾಗಿಯೇ ಎಲ್ಲಾ ಕಂಪನಿಗಳು ಓಲಾ ಎಲೆಕ್ಟ್ರಿಕ್ ಬೈಕ್‌ನತ್ತ ನೋಡಲಾರಂಭಿಸಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications