Triumph: ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ರಿವ್ಯೂ ವಿಡಿಯೋ: ಹೇಗಿದೆ ನೋಡಿ
ಭಾರತದಲ್ಲಿ ಕೆಲವೇ ದಿನಗಳ ಹಿಂದೆ, ಟ್ರಯಂಫ್ (Triumph) ಕಂಪನಿ, ಸ್ಕ್ರ್ಯಾಂಬ್ಲರ್ 400 ಎಕ್ಸ್ (Scrambler 400 X) ಬೈಕ್‌ನ್ನು ಬಿಡುಗಡೆಗೊಳಿಸಿತ್ತು. ನಮ್ಮ ತಂಡಕ್ಕೆ ಪುಣೆಯಲ್ಲಿ ಈ ಮೋಟಾರ್‌ಸೈಕಲ್ ಟೆಸ್ಟ್ ಡ್ರೈವ್ ನಡೆಸುವ ಅವಕಾಶ ದೊರೆಯಿತು.
ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಸಂಪೂರ್ಣ ರಿವ್ಯೂ (ವಿಮರ್ಶೆ) ವಿಡಿಯೋ ಇಲ್ಲಿದ್ದು, ಈ ಮೋಟಾರ್‌ಸೈಕಲ್ ಹೇಗಿದೆ ಎಂದು ನೀವು ಸುಲಭವಾಗಿ ತಿಳಿಯಬಹುದು. ಸ್ಕ್ರ್ಯಾಂಬ್ಲರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾವುದಾದರೆ, ಇದು 398 ಸಿಸಿ ಲಿಕ್ವಿಡ್ ಕೂಲ್ಡ್ & ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಒಳಗೊಂಡಿದೆ. 39.5 bhp ಪವರ್, 37.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಜೊತೆಗೆ, ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಮೋಟಾರ್‌ಸೈಕಲ್ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಆಕರ್ಷಕ ಮೂರು ಬಣ್ಣಗಳಲ್ಲಿಯೂ ಸಿಗುತ್ತದೆ. ಅವುಗಳೆಂದರೆ, ಮ್ಯಾಟ್ ಖಾಕಿ ಗ್ರೀನ್ ವಿತ್ ಫ್ಯೂಷನ್ ವೈಟ್, ಫ್ಯಾಂಟಮ್ ಬ್ಲ್ಯಾಕ್ ವಿತ್ ಸಿಲ್ವರ್ ಐಸ್, ಕಾರ್ನಿವಲ್ ರೆಡ್ ವಿತ್ ಫ್ಯಾಂಟಮ್ ಬ್ಲ್ಯಾಕ್.
ಈ ಬೈಕ್, ವಿನ್ಯಾಸ ಹಾಗೂ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ವಿನೂತನ ಹೆಡ್‌ಲೈಟ್ ಗ್ರಿಲ್, ಸಂಪ್ & ರೇಡಿಯೇಟರ್ ಪ್ರೊಟೆಕ್ಟರ್ಸ್, ಹ್ಯಾಂಡಲ್‌ಬಾರ್ ಬ್ರೇಸ್ ಪ್ಯಾಡ್, ಹ್ಯಾಂಡ್‌ಗಾರ್ಡ್ ಹೊಂದಿದೆ. ಎಲ್ಇಡಿ ಲೈಟಿಂಗ್ ಸೆಟಪ್, ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಪ್ರಯಾಣಿಕರು, ಆರಾಮದಾವಾಗಿ ಪ್ರಯಾಣಿಸಲು ಸ್ಪ್ಲಿಟ್ ಸೀಟ್ ವ್ಯವಸ್ಥೆಯು ಇದೆ.

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಮೋಟಾರ್‌ಸೈಕಲ್, ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ 43 ಎಂಎಂ USD ಫ್ರಂಟ್ ಪೋರ್ಕ್ಸ್, ಹಿಂಭಾಗ ಅಡ್ಜಸ್ಟ್ಏಬಲ್ ಮೊನೊಶಾಕ್ ಸೆಟಪ್ ಒಳಗೊಂಡಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಮುಂಭಾಗ 320 ಎಂಎಂ, ಹಿಂಭಾಗ 230 ಎಂಎಂ ಅಳತೆಯ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಈ ಬೈಕ್, 10 - ಸ್ಪೋಕ್ ಅಲ್ಯೂಮಿನಿಯಂ ಅಲಾಯ್ ವೀಲ್ ಸೆಟಪ್, ಮುಂಭಾಗ 100/90-19 ಹಾಗೂ ಹಿಂಭಾಗ 140/80-17 ಅಳತೆಯ ಎಂಆರ್‌ಎಫ್ ಟೈಯರ್ಸ್ ಹೊಂದಿದೆ. ಇದರೊಟ್ಟಿಗೆ ಸೀಟ್ ಹೈಟ್ 835 ಎಂಎಂ ಇದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹಾಗೂ 185 ಕೆಜಿ ತೂಕವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








