ಅಗ್ಗದ ಬೆಲೆಯಲ್ಲಿ ಖರೀದಿಗೆ ಅವಕಾಶ: ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಟ್ರಯಂಫ್ ಸ್ಪೀಡ್ 400 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕನ್ನು ಬಿಡುಗದೆಗೊಳಿಸಿತು. ಟ್ರಯಂಫ್ ಕಂಪನಿಯು ತನ್ನ ಈ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಬೈಕನ್ನು ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.23 ಲಕ್ಷವಾಗಿತ್ತು.

ಈ ಪರಿಚಯಾತ್ಮಕ ಬೆಲೆಯು ಈಗ ಡಿಸೆಂಬರ್ 31, 2023 ರವರೆಗೆ ಲಭ್ಯವಿರುತ್ತದೆ. ನವರಿ 1, 2024 ರಿಂದ, ಸ್ಪೀಡ್ 400 ಗೆ ನವೀಕರಿಸಿದ ಬೆಲೆ ರೂ. 2.33 ಲಕ್ಷವಾಗಿರುತ್ತದೆ. ಈ ಬೆಲೆಯು ಎಕ್ಸ್ ಶೋರೂಂ ಪ್ರಕಾರವಾಗಿದೆ. ಭಾರತದ 40 ನಗರಗಳಲ್ಲಿ 50+ ಟ್ರಯಂಫ್ ವರ್ಲ್ಡ್ ಶೋರೂಮ್‌ಗಳಲ್ಲಿ ಸ್ಪೀಡ್ 400 ಲಭ್ಯವಿದೆ. ಪ್ರಸ್ತುತ, ಹೊಸ ಟ್ರಯಂಫ್ ಸ್ಪೀಡ್ 400 ಬೈಕಿಗೆ ಹೆಚ್ಚಿನ ಬೇಡಿಕೆಯಿದೆ.

Triumph Speed 400

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿಗೆ ತಿಂಗಳಿಗೆ 5,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಬಜಾಜ್ ಹೇಳಿಕೊಂಡಿದೆ. ಬೈಕಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಬಜಾಜ್ ಉತ್ಪಾದನೆಯನ್ನು ಹೆಚ್ಚಿಸಲು ಸಜ್ಜಾಗಿದೆ. ಈ ಟ್ರಯಂಫ್ ಸ್ಪೀಡ್ 400 ಬೈಕ್ ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ.

ಇದರೊಂದಿಗೆ ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಸಾಕಷ್ಟು ಟ್ರಯಂಫ್ ವಿನ್ಯಾಸದ ಅಂಶಗಳೊಂದಿಗೆ ಆಕಷಕವಾಗಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ.

Triumph Speed 400

ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ. ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಸಸ್ಪೆಕ್ಷನ್ ಸಂಬಂಧಿಸಿದಂತೆ,ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಟ್ವಿನ್-ಸೈಡೆಡ್ ಅಲ್ಯೂಮಿನಿಯಂ ಸ್ವಿಂಗರ್ಮ್‌ನೊಂದಿಗೆ ಫ್ರೇಮ್ ಅನ್ನು ಹೊಂದಿದೆ.

ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಿಂದ ಒಳಗೊಂಡಿದೆ. ಇನ್ನು ಟ್ರಯಂಫ್ ಸ್ಪೀಡ್ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.

Triumph Speed 400

ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹಾಯವನ್ನು ಸಹ ಹೊಂದಿದೆ.ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಈ ಬೈಕ್, ಫ್ರಂಟ್ 110/70 ಹಾಗೂ ರೇರ್ 150/60 ಅಳತೆಯ ಮೆಟ್ಜೆಲರ್ Sportec M9RR ಟೈಯರ್ಸ್ ಹೊಂದಿರುವುದು ವಿಶೇಷವಾಗಿದೆ. ಇನ್ನು ಟ್ರಯಂಫ್ ಕಂಪನಿಯೊಂದಿಗೆ ಬಜಾಬ್ ಕಂಪನಿ ಪಾಲುದಾರಿಕೆ ಹೊಂದಿರುವುದು ಗೊತ್ತೇ ಇದೆ.

ಇನ್ನು ಮಹಾರಾಷ್ಟ್ರದ ಚಕನ್ ನಲ್ಲಿ ಬಜಾಬ್ ಆಟೋ ನೂತನವಾಗಿ ನಿರ್ಮಿಸಿರುವ 'ಚೇತಕ್ 2' ಎಂಬ ಹೆಸರಿನ ತಯಾರಿಕಾ ಘಟಕದಲ್ಲಿ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ನ 5000 ಯುನಿಟ್ ಗಳನ್ನು ಉತ್ಪಾದಿಸಲಾಗುತ್ತದೆ. ಈ ಪ್ಲಾಂಟ್ 25,000 ಬೈಕ್ ರೆಡಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಟ್ರಯಂಫ್ ಕಂಪನಿ ಇವೆರೆಡು ಬೈಕ್‌ಗಳಿಗೆ ಎರಡು ವರ್ಷಗಳ ಅನ್-ಲಿಮಿಟೆಡ್ ಮೈಲೇಜ್ ವಾರಂಟಿಯನ್ನು ನೀಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 19, 2023, 11:02 [IST]
English summary
Triumph speed 400 introductory price extended till december 31 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+