'ಬುಕ್ಕಿಂಗ್ ರಾಜ' ಟ್ರಯಂಫ್ ಸ್ಪೀಡ್ 400 ಬೈಕ್ ಕೊಂಡುಕೊಳ್ಳಲು ಯೋಚಿಸಿದ್ದೀರಾ? ಪ್ರಮುಖ ಮಾಹಿತಿ

ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕ 'ಟ್ರಯಂಫ್' ಸ್ಪೀಡ್ 400 ಬೈಕ್ ಗರಿಷ್ಠ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆದುಕೊಂಡಿದೆ. ಈ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದೆ. ನೀವು, ಈ ಮೋಟಾರ್‌ಸೈಕಲ್‌ ಖರೀದಿಸಲು ಯೋಚಿಸಿದ್ದರೆ ಆನ್-ರೋಡ್ ಬೆಲೆ, ಡೌನ್ ಪೇಮೆಂಟ್ ಬಗ್ಗೆ ಇಲ್ಲಿದೆ ಮಾಹಿತಿ.

ಈ ಬೈಕ್ ರೂ.2.73 ಲಕ್ಷ (ದೆಹಲಿ) ಆನ್-ರೋಡ್ ಬೆಲೆಯನ್ನು ಹೊಂದಿದೆ. ಆಸಕ್ತ ಗ್ರಾಹಕರು, ರೂ.54,000 ಡೌನ್ ಪೇಮೆಂಟ್ ಪಾವತಿಸಿ, ಟ್ರಯಂಫ್ ಸ್ಪೀಡ್ 400 ಬೈಕ್ ಖರೀದಿಸಿದರೇ ಮೂರು ವರ್ಷದ ಅವಧಿಗೆ ಶೇಕಡ 10% ಬಡ್ಡಿ ದರದಲ್ಲಿ ಮಾಸಿಕ ರೂ.7,071 ಇಎಂಐ ಕಟ್ಟಬೇಕು. ಟ್ರಯಂಫ್, ಬಜಾಜ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ. ಇದರಿಂದಾಗಿ 'ಸ್ಪೀಡ್ 400 ಬೈಕ್' ಅನ್ನು ಬಜಾಜ್ ಉತ್ಪಾದಿಸಿ, ವಿತರಣೆ ಮಾಡಲಿದೆ.

ಬುಕ್ಕಿಂಗ್ ರಾಜ ಟ್ರಯಂಫ್ ಸ್ಪೀಡ್ 400 ಬೈಕ್ ಕೊಂಡುಕೊಳ್ಳಲು ಯೋಚಿಸಿದ್ದೀರಾ? ಪ್ರಮುಖ ಮಾಹಿತಿ

ಟ್ರಯಂಫ್ ಸ್ಪೀಡ್ 400 ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು, 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 39.5 bhp ಗರಿಷ್ಠ ಪವರ್ ಮತ್ತು 37.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿವೆ.

ಈ ಟ್ರಯಂಫ್ ಸ್ಪೀಡ್ 400 ಬೈಕ್ ವಿಶೇಷತೆ ಕುರಿತು ಹೇಳುವುದಾದರೆ, ಈ ಬೈಕ್ ವೃತ್ತಾಕಾರದ ಹೆಡ್‌ಲ್ಯಾಂಪ್‌, LCD ಡಿಸ್ಪ್ಲೇ, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ನಾನಾ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿಯುವುದಾದರೆ ಫ್ರಂಟ್, 320 ಎಂಎಂ, ರೇರ್ 230 ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಈ ಬೈಕ್ 43 ಎಂಎಂ ಬಿಗ್ ಪಿಸ್ಟನ್ ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್‌, ರೇರ್ ಮೊನೊ ಶಾಕ್ ಸೆಟಪ್ ಹೊಂದಿದೆ. ಮುಖ್ಯವಾಗಿ 17 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 110/70 ಹಾಗೂ ರೇರ್ 150/60 ಅಳತೆಯ ಮೆಟ್ಜೆಲರ್ ಟೈಯರ್ಸ್ ಪಡೆದಿರುವುದು ಗಮನಾರ್ಹ ಅಂಶವಾಗಿದೆ.

ಟ್ರಯಂಫ್ ಕಂಪನಿ ಸ್ಪೀಡ್ 400 ಬೈಕ್ ಜೊತೆ ಸ್ಕ್ರ್ಯಾಂಬ್ಲರ್ 400 X ಮೋಟಾರ್‌ಸೈಕಲ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಅದರ ಬೆಲೆಯನ್ನು ಮುಂಬರುವ ದಿನಗಳಲ್ಲಿ ಘೋಷಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಬೈಕ್ ಅಕ್ಟೋಬರ್‌ ತಿಂಗಳಲ್ಲಿ ವಿತರಣೆಯಾಗಲಿದ್ದು, ಬಹುತೇಕ ಸ್ಪೀಡ್ 400 ಹೊಂದಿರುವ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ.

ಬುಕ್ಕಿಂಗ್ ವಿಚಾರವಾಗಿ ಮಾತನಾಡುವುದಾದರೇ, ಭಾರತದಲ್ಲಿ ಸ್ಪೀಡ್ 400 ಬೈಕ್ ಅನ್ನು ಬಿಡುಗಡೆಗೊಳಿಸಿ, ಸ್ಕ್ರ್ಯಾಂಬ್ಲರ್ 400 X ಅನ್ನು ಪ್ರದರ್ಶಿಸಿದ ಹತ್ತೇ ದಿನಗಳಲ್ಲಿ 10,000ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಟ್ರಯಂಫ್ ಕಂಪನಿ ಪಡೆದುಕೊಂಡಿದೆ. ಈ ಬಗ್ಗೆ ಟ್ರಯಂಫ್ ಪಾಲುದಾರ ಬಜಾಜ್ ಸಂತಸವನ್ನು ವ್ಯಕ್ತಪಡಿಸಿದೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಟ್ರಯಂಫ್ ಕಂಪನಿ ಸ್ಪೀಡ್ 400 ಬೈಕಿಗೆ ಎರಡು ವರ್ಷಗಳ ಅನ್-ಲಿಮಿಟೆಡ್ ಮೈಲೇಜ್ ವಾರಂಟಿಯನ್ನು ನೀಡುತ್ತಿದೆ. ಮಹಾರಾಷ್ಟ್ರದ ಚಕನ್ ನಲ್ಲಿ ಬಜಾಬ್ ಕಂಪನಿ ಹೊಸದಾಗಿ ನಿರ್ಮಿಸಿರುವ 'ಚೇತಕ್ 2' ತಯಾರಿಕಾ ಘಟಕದಲ್ಲಿ ಈ ಟ್ರಯಂಫ್ ಮೋಟಾರ್ ಸೈಕಲ್ ಗಳನ್ನು ತಯಾರಿಸುತ್ತಿದ್ದು, ಈ ಬೈಕ್ ಖರೀದಿ ಮಾಡಬಯಸುವ ಗ್ರಾಹಕರು, ತಿಂಗಳಿಗೆ ಏಳು ಸಾವಿರ ಇಎಂಐ ಕಟ್ಟಿದರೆ, ಅವರ ಮನೆ ಸೇರುತ್ತದೆ.

More from DriveSpark

Article Published On: Monday, July 10, 2023, 19:02 [IST]
English summary
Triumph speed 400 loan emi down payment details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+