ಟ್ರಯಂಫ್ ಸ್ಪೀಡ್ 400 ಆನ್-ರೋಡ್ ಬೆಲೆ ಘೋಷಣೆ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿಯೇ ಜಾಸ್ತಿ

ಭಾರತದಲ್ಲಿ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕ 'ಟ್ರಯಂಫ್' ಸ್ಪೀಡ್ 400 ಬೈಕ್ ಭಾರೀ ಬುಕ್ಕಿಂಗ್ ಪಡೆದು ಹೊಸದೊಂದು ದಾಖಲೆಯನ್ನು ಬರೆದಿದೆ. ಇದೀಗ, ದೇಶದ ವಿವಿಧ ನಗರಗಳ ಆನ್-ರೋಡ್ ಬೆಲೆಯನ್ನು ಕಂಪನಿ ಘೋಷಣೆ ಮಾಡಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಹೆಚ್ಚಿದೆ.

ಬೆಂಗಳೂರಿನಲ್ಲಿ ಟ್ರಯಂಫ್ ಸ್ಪೀಡ್ 400 ಬೈಕ್ ಆನ್-ರೋಡ್ ಬೆಲೆಯನ್ನು ನೋಡುವುದಾದರೆ, ಇದು ರೂ.3,05,869 ದರವನ್ನು ಹೊಂದಿದೆ. ಅದರಲ್ಲಿ ರೂ.2,32,997 ಎಕ್ಸ್ ಶೋರೂಂ ದರ, ರೂ.46,553 ರಸ್ತೆ ತೆರಿಗೆ, ರೂ.1,188 ನೋಂದಣಿ ಶುಲ್ಕ, ರೂ.1,500 ನಿರ್ವಹಣೆ ಶುಲ್ಕ ಹಾಗೂ
ರೂ.23,632 ವಿಮೆ ಸೇರಿದೆ. ದೆಹಲಿ, ಹೈದರಾಬಾದ್, ಗೋವಾ ಹಾಗೂ ಮುಂಬೈ ಆನ್-ರೋಡ್ ದರಕ್ಕಿಂತ ತುಂಬಾ ಹೆಚ್ಚಾಗಿದೆ.

ಟ್ರಯಂಫ್ ಸ್ಪೀಡ್ 400 ಆನ್-ರೋಡ್ ಬೆಲೆ ಘೋಷಣೆ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿಯೇ ಜಾಸ್ತಿ

ಈ ಬೈಕ್ ಆನ್ ರೋಡ್ ಬೆಲೆ ದೆಹಲಿಯಲ್ಲಿ ರೂ.2,67,927, ಹೈದರಾಬಾದ್ ನಲ್ಲಿ ರೂ.2,87,074, ಗೋವಾದಲ್ಲಿ ರೂ. 2,86,669, ಮತ್ತು ಮುಂಬೈನಲ್ಲಿ ರೂ.2,87,247 ಇದೆ. ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಈ ಮಟ್ಟಿಗೆ ಬೆಲೆ ಹೆಚ್ಚಿರಲು ಕಾರಣ, ಬಹುಶಃ ರಸ್ತೆ ತೆರಿಗೆಯೇ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಟ್ರಯಂಫ್ ಹಾಗೂ ಬಜಾಜ್ ಕಂಪನಿ ಪಾಲುದಾರಿಕೆ ಹೊಂದಿವೆ. ಈ ಕಾರಣಕ್ಕೆ ಸ್ಪೀಡ್ 400 ಬೈಕ್ ಅನ್ನು ಬಜಾಜ್ ಉತ್ಪಾದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಟ್ರಯಂಫ್ ಸ್ಪೀಡ್ 400, 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 39.5 bhp ಪವರ್ ಹಾಗೂ 37.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಟ್ರಯಂಫ್ ಸ್ಪೀಡ್ 400 ಆನ್-ರೋಡ್ ಬೆಲೆ ಘೋಷಣೆ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿಯೇ ಜಾಸ್ತಿ

ಟ್ರಯಂಫ್ ಸ್ಪೀಡ್ 400 ಬೈಕ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್, 320 ಎಂಎಂ, ರೇರ್ 230 ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 43 ಎಂಎಂ ಬಿಗ್ ಪಿಸ್ಟನ್ ಅಪ್-ಸೈಡ್ ಡೌನ್ ಫ್ರಂಟ್ ಫೋರ್ಕ್‌, ರೇರ್ ಮೊನೊ ಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ.

ಈ ಬೈಕ್ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, ವೃತ್ತಾಕಾರದ ಹೆಡ್‌ಲ್ಯಾಂಪ್‌, LCD ಡಿಸ್ಪ್ಲೇ, ABS (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಫೀಚರ್ಸ್ ಹೊಂದಿದೆ. 17 ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 110/70 ಮತ್ತು ರೇರ್ 150/60 ಅಳತೆಯ ಟೈಯರ್ಸ್ ಪಡೆದಿದೆ.

ಟ್ರಯಂಫ್ ಕಂಪನಿ, ಸ್ಪೀಡ್ 400 ಮೋಟಾರ್‌ಸೈಕಲ್‌ನೊಂದಿಗೆ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಆದರೆ, ಮುಂದಿನ ಎರಡು ಮೂರು ತಿಂಗಳಲ್ಲಿ ಲಾಂಚ್ ಮಾಡಲಿದೆ. ಇನ್ನು, ಟ್ರಯಂಫ್ ಸ್ಪೀಡ್ 400 ಬೈಕ್ ಆನ್ ರೋಡ್ ದರಗಳ ಬಗ್ಗೆ ಕಂಪನಿ ತಿಳಿಸಿದ್ದು, ಬೆಂಗಳೂರಿನಲ್ಲಿ ಹೆಚ್ಚಿದೆ. ಇದಕ್ಕೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 14, 2023, 18:26 [IST]
English summary
Triumph speed 400 on road price in bangalore details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+