ಬಹುನೀರಿಕ್ಷಿತ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಬಿಡುಗಡೆ: ಭರ್ಜರಿ ವಿಶೇಷತೆಗಳಿವೆ

ಭಾರತದ ಯುವ ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕ 'ಟ್ರಯಂಫ್' ಸ್ಪೀಡ್ 400 ಹಾಗೂ ಸ್ಕ್ರ್ಯಾಂಬ್ಲರ್ 400 X ಬೈಕ್ ಗಳನ್ನು ಬಿಡುಗಡೆಗೊಳಿಸಿದೆ. ಇವೆರೆಡು ಬಜಾಜ್ ಕಂಪನಿ ಪಾಲುದಾರಿಕೆಯಲ್ಲಿ ಬರುತ್ತಿರುವ ಮೊದಲ ಮೋಟಾರ್‌ಸೈಕಲ್‌ಗಳಾಗಿವೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸದ್ಯ, ಟ್ರಯಂಫ್ ಸ್ಪೀಡ್ 400 ಬೆಲೆ ಘೋಷಣೆಯಾಗಿದ್ದು, ರೂ 2.33 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ಸ್ಕ್ರ್ಯಾಂಬ್ಲರ್ 400 X ಬೆಲೆಯನ್ನು ಕಂಪನಿಯಿಂದ ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೋಟಾರ್‌ಸೈಕಲ್‌ ಕೊಂಡುಕೊಳ್ಳುವ ಮೊದಲ 10,000 ಗ್ರಾಹಕರಿಗೆ ರೂ.10 ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತದೆ.

ಬಹುನೀರಿಕ್ಷಿತ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಬಿಡುಗಡೆ: ಭರ್ಜರಿ ವಿಶೇಷತೆಗಳಿವೆ

ಟ್ರಯಂಫ್ ಸ್ಪೀಡ್ 400 ದೇಶೀಯ ಗ್ರಾಹಕರಿಗೆ ಜುಲೈ ದ್ವಿತೀಯಾರ್ಧದಲ್ಲಿ ವಿತರಣೆಯಾಗಲಿದೆ. ಸ್ಕ್ರ್ಯಾಂಬ್ಲರ್ 400 X ಬೈಕ್ ಅಕ್ಟೋಬರ್‌ ತಿಂಗಳಲ್ಲಿ ಖರೀದಿದಾರರಿಗೆ ಸಿಗಲಿದೆ. ಇವೆರೆಡು ಬೈಕ್ ಗಳನ್ನು ಪ್ರಥಮ ಬಾರಿಗೆ ಜೂನ್ 27ರಂದು ಜಾಗತಿಕವಾಗಿ ಅನಾವರಗೊಳಿಸಲಾಗಿತ್ತು. ಈಗಾಗಲೇ, ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಗಳನ್ನು ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿದೆ.

ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಗಳ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇವೆರೆಡು 398 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 39.5 bhp ಪವರ್ ಹಾಗೂ 37.5Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿವೆ. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿವೆ.

ಬಹುನೀರಿಕ್ಷಿತ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಬಿಡುಗಡೆ: ಭರ್ಜರಿ ವಿಶೇಷತೆಗಳಿವೆ

ಟ್ರಯಂಫ್ ಸ್ಪೀಡ್ 400 ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ 300 ಎಂಎಂ, ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಈ ಬೈಕ್, ಫ್ರಂಟ್ 110/70 ಹಾಗೂ ರೇರ್ 150/60 ಅಳತೆಯ ಮೆಟ್ಜೆಲರ್ Sportec M9RR ಟೈಯರ್ಸ್ ಹೊಂದಿರುವುದು ವಿಶೇಷವಾಗಿದೆ.

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 X ಮೋಟಾರ್‌ಸೈಕಲ್‌ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್, 320 ಎಂಎಂ ಹಾಗೂ ರೇರ್ 230 ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಪ್ರಮುಖವಾಗಿ 19 ಇಂಚಿನ ವೀಲ್ಸ್ ಪಡೆದಿದೆ. ಈ ಬೈಕ್, ಫ್ರಂಟ್ 100/90 ಮತ್ತು ರೇರ್ 140/80 ಅಳತೆಯ ಮೆಟ್ಜೆಲರ್ ಟೈಯರ್ಸ್ ಒಳಗೊಂಡಿದೆ.

ಬಹುನೀರಿಕ್ಷಿತ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಬಿಡುಗಡೆ: ಭರ್ಜರಿ ವಿಶೇಷತೆಗಳಿವೆ

ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ಗಳು, 43 ಎಂಎಂ ಬಿಗ್ ಪಿಸ್ಟನ್ ಅಪ್ ಸೈಡ್ ಡೌನ್ ಫ್ರಂಟ್ ಫೋರ್ಕ್‌, ರೇರ್ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿವೆ. ಜೊತೆಗೆ ಇವೆರೆಡು ಬೈಕುಗಳು ವೃತ್ತಾಕಾರದ ಹೆಡ್‌ಲ್ಯಾಂಪ್‌, LCD ಡಿಸ್ಪ್ಲೇ, ಸ್ವಿಚಾಲ್ಬ್ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ.

ಟ್ರಯಂಫ್ ಕಂಪನಿಯೊಂದಿಗೆ ಬಜಾಬ್ ಕಂಪನಿ ಪಾಲುದಾರಿಕೆ ಹೊಂದಿರುವುದು ಗೊತ್ತೇ ಇದ್ದು, ಮಹಾರಾಷ್ಟ್ರದ ಚಕನ್ ನಲ್ಲಿ ಬಜಾಬ್ ಆಟೋ ನೂತನವಾಗಿ ನಿರ್ಮಿಸಿರುವ 'ಚೇತಕ್ 2' ಎಂಬ ಹೆಸರಿನ ತಯಾರಿಕಾ ಘಟಕದಲ್ಲಿ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ನ 5000 ಯುನಿಟ್ ಗಳನ್ನು ಉತ್ಪಾದಿಸಲಾಗುತ್ತದೆ. ಈ ಪ್ಲಾಂಟ್ 25,000 ಬೈಕ್ ರೆಡಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ.

ಟ್ರಯಂಫ್ ಕಂಪನಿ ಇವೆರೆಡು ಬೈಕ್‌ಗಳಿಗೆ ಎರಡು ವರ್ಷಗಳ ಅನ್-ಲಿಮಿಟೆಡ್ ಮೈಲೇಜ್ ವಾರಂಟಿಯನ್ನು ನೀಡುತ್ತಿದೆ. ಇನ್ನು, ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಮೋಟಾರ್‌ಸೈಕಲ್‌ಗಳು, ಮುಂಬರುವ ದಿನಗಳಲ್ಲಿ ಭಾರೀ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವ ಮೂಲಕ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತರಬಹುದು.

More from DriveSpark

Article Published On: Wednesday, July 5, 2023, 15:42 [IST]
English summary
Triumph speed 400 scrambler 400 x launched specs features images
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+