ಎರಡು ಹೊಸ ಬೈಕ್ ಜೊತೆ ಜಿದ್ದಿಗಿಳಿದ ಟ್ರಯಂಫ್: ರಾಯಲ್ ಎನ್‌ಫೀಲ್ಡ್ 650 ಪಾಳಯದಲ್ಲಿ ಆತಂಕ
ಅನೇಕ ಸಮಯಗಳ ಕಾಯುವಿಕೆಯ ನಂತರ ಕೊನೆಗೂ ಭಾರತದಲ್ಲಿ ಹೆಸರಾಂತ ಬೈಕ್ ನಿರ್ಮಾಣ ಕಂಪನಿಯಾದ ಬಜಾಜ್ ಮತ್ತು ವಿಶ್ವ ವಿಖ್ಯಾತ ಮೋಟೋರ್‌ಸೈಕಲ್ ನಿರ್ಮಾಣ ಕಂಪನಿ ಟ್ರಯಂಫ್ ಜೊತೆಯಾಗಿ ಎರಡು ಬೈಕ್‌ಗಳನ್ನು ಅನಾವರಣಗೊಳಿಸಿದ್ದು ನಮ್ಮ ಭಾರತೀಯ ಬೈಕ್ ಪ್ರೇಮಿಗಳ ಬಹುದಿನದ ಕನಸೊಂದು ನನಸಾದಂತೆ ಕಾಣುತ್ತಿದೆ.
ದಿನಾಂಕ ಜುಲೈ 27 ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಕಾಲಮಾನ ರಾತ್ರಿ 11.30 ರ ಸುಮಾರಿಗೆ ಟ್ರೈಂಫ್ ಎರಡು ಬೈಕ್‌ಗಳನ್ನು ಅನಾವರಣ ಮಾಡಿದೆ. ಇನ್ನು ಬಜಾಜ್-ಟ್ರಯಂಫ್ ಜಂಟಿಯಾಗಿ ಎರಡು ಬೈಕ್ ಅನ್ನು ಈ ಸಮಾರಂಭದಲ್ಲಿ ಅನಾವರಣಗೊಳಿಸಿದ್ದು ಇವುಗಳು ಸ್ಪೀಡ್ 400 ರೋಡ್‌ಸ್ಟರ್ ಮತ್ತು ಸ್ಕ್ರಾಂಬ್ಲರ್ 400 X.

ಇನ್ನು ಮಾಹಿತಿಗಳ ಪ್ರಕಾರ ಈ ಎರಡೂ ಬೈಕ್‌ಗಳ ರಿಸರ್ಚ್ ಆಂಡ್ ಡೆವಲೆಪ್‌ಮೆಂಟ್ ಅನ್ನು ಟ್ರಯಂಫ್ನ ಯುಕೆ ಯಲ್ಲಿನ ಡಿವಿಷನ್ ಮಾಡಿದ್ದು, ಇದರ ಪ್ರೊಡಕ್ಷನ್ ಅನ್ನು ಬಜಾಜ್ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ. ಈ ಎರಡೂ ಬೈಕ್‌ಗಳು ಟ್ರೈಂಫ್‌ನ ಐಕಾನಿಕ್ ಡಿಸೈನ್ ಮತ್ತು ಪರ್ಫಾಮೆನ್ಸ್ ಅನ್ನು ಒಳಗೊಳ್ಳಲಿದೆ.
ಇನ್ನು ಟ್ರೈಂಫ್ ಈ ಸ್ಪೀಡ್ ೪೦೦ ರೋಡ್‌ಸ್ಟರ್ ಅನ್ನು ತನ್ನ ಯಶಸ್ವಿ ಕ್ಲಾಸಿಕ್ ಲೈನ್‌ಅಪ್ ಆದ ಸ್ಪೀಡ್ ಟ್ವಿನ್ 900 ಮತ್ತು 1200 ಗೆ ಸೇರಿಸಲಿದ್ದು ಇದರ ಸ್ಕ್ರಾಂಬ್ಲರ್ 400 X ಅನ್ನು ಟ್ರೈಂಫ್‌ನ ಮತ್ತೊಂದು ಯಶಸ್ವಿ ಸರಣಿಯಾದ ಸ್ಕ್ರಾಂಬ್ಲರ್ 900 ಮತ್ತು 1200 ರ ಶ್ರೇಣಿಗೆ ಸೇರಲಿದೆ ಎಂದು ಕಂಪನಿ ತಿಳಿಸಿದೆ.

ಡಿಸೈನ್: ಇನ್ನುಸ್ಪೀಡ್ 400 ಮತ್ತು ಸ್ಕ್ರಾಂಬ್ಲರ್ 400 X ರ ಡಿಸೈನ್ ಅನ್ನು ಗಮನಿಸುವುದಾದರೆ ಎರಡೂ ಬೈಕ್ ಸಹ ರೆಟ್ರೋ ಡಿಸೈನ್ ಟಚ್ ಅನ್ನು ಹೊಂದಿದೆ ಎಂದೇ ಹೇಳಬಹುದು. ಇದರಲ್ಲಿ ಮುಖ್ಯವಾಗಿ ಟ್ರಯಂಫ್ ನ ಎವರ್‌ಗ್ರೀನ್ ರೋಡ್‌ಸ್ಟರ್ ಮತ್ತು ಸ್ಕ್ರಾಂಬ್ಲರ್ ಸಿಲೂಯೆಟ್‌ಗಳು, ಇದರ ಸಿಗ್ನೇಚರ್ ಟ್ಯಾಂಕ್‌ಗಳು, ಟ್ರಯಂಫ್ ನ ಕ್ಲಾಸಿಕ್ ಎಂಜಿನ್ ಪ್ರೊಫೈಲ್ ಮತ್ತು ಟ್ರೈಂಫ್ ಬ್ಯಾಡ್ಜ್ ಪ್ರಮುಖವಾದವು.
ಎಂಜಿನ್ & ಪರ್ಫಾಮೆನ್ಸ್: ಇನ್ನು ಸ್ಪೀಡ್ 400 ರೋಡ್‌ಸ್ಟರ್ ಮತ್ತು ಸ್ಕ್ರಾಂಬ್ಲರ್ 400 X ಈ ಎರಡೂ ಬೈಕ್‌ಗಳಲ್ಲಿ TR ಸರಣಿಯ ಫ್ಯುಯೆಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ 398 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪರಿಚಯಿಸಲಾಗಿದ್ದು, ಈ ಬೈಕ್‌ಗಳು ಈ ಎಂಜಿನ್ ಸಹಾಯದಿಂದ 40 ಪಿಎಸ್ ಪವರ್ ಮತ್ತು 37.5 ಎನ್‌ಎಮ್ ಟಾರ್ಕನ್ನು ಸಹ ಉತ್ಪಾದಿಸಲಿದೆ.

ಇನ್ನು ಸ್ಪೀಡ್ 400 ನಲ್ಲಿ 43mm ಬಿಗ್‌ಸೈಡ್ ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್ ಕಂಡು ಬಂದರೆ ಹಿಂಬದಿ ಮೋನೋ ಶಾಕ್ ರೇರ್ ಸಸ್ಪೆನ್ಷನ್ ಸೆಟ್‌ಅಪ್ ಅನ್ನು ಕಾಣಬಹುದು. ಇನ್ನು ಇದೇ ರೀತಿ ಸ್ಕ್ರಾಂಬ್ಲರ್ 400 X ನಲ್ಲಿ ಲಾಂಗ್ ಟ್ರಾವೆಲ್ ಸಸ್ಪೆನ್ಷನ್, 19 ಇಂಚ್‌ಗಳ ಮುಂಬಾಗದ ಚಕ್ರ ಮತ್ತು ಹೆಚ್ಚಿನ ಸ್ಟೆಬಿಲಿಟಿಗೆ ಅಗಲವಾದ ಹ್ಯಾಂಡಲ್ ಬಾರ್‌ಗಳನ್ನು ಕಾಣಬಹುದಾಗಿದೆ.
ಇನ್ನು ಇಷ್ಟು ಮಾತ್ರವಲ್ಲದೇ ಬೈಕ್‌ನಲ್ಲಿ ಇತರ ಆಧುನಿಕ ಟೆಕ್ನಾಲಜಿ ಫೀಚರ್ಸ್‌ಗಳನ್ನೂ ಕಾಣಬಹುದಾಗಿದೆ. ಅದರಲ್ಲಿ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಡ್ಯುಯಲ್ ಫಾರ್ಮಾಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳು ಸಹ ಸೇರಿವೆ. ಇನ್ನು ಮಾಹಿತಿಗಳ ಪ್ರಕಾರ ಈ ಬೈಕ್ ಮುಂದಿನ ವರ್ಷ ಗ್ರಾಹಕರ ಕೈಸೇರಲಿದೆ ಎಂದು ಕಂಪನಿ ತಿಳಿಸಿದೆ. ಎರಡೂ ಬೈಕ್‌ನ ಬೆಲೆ ಇನ್ನೂ ಸಹ ಹೊರಬಿದ್ದಿಲ್ಲ.

ಇನ್ನು ಸ್ಪೀಡ್ 400 ಬೈಕ್ ಕಾರ್ನಿವಲ್ ರೆಡ್, ಕ್ಯಾಸ್ಪಿಯನ್ ಬ್ಲೂ ಮತ್ತು ಫ್ಯಾಂಟಂ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದ್ದು, ಸ್ಕ್ರಾಂಬ್ಲರ್ 400 X ಬೈಕ್ ಮ್ಯಾಟ್ ಖಾಕಿ ಗ್ರೀನ್ ಮತ್ತು ಫ್ಯೂಷನ್ ವೈಟ್, ಕಾರ್ನಿವಲ್ ರೆಡ್ ಮತ್ತು ಫ್ಯಾಂಟಂ ಬ್ಲ್ಯಾಕ್ ಹಾಗೂ ಫ್ಯಾಂಟಂ ಬ್ಲ್ಯಾಕ್ ಮತ್ತು ಸಿಲ್ವರ್ ಐಸ್ ಬಣ್ಣದಲ್ಲಿ ಗ್ರಾಹಕರ ಮುಂದೆ ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








