TVS Apache: ಕಡಿಮೆ ಬೆಲೆಗೆ 'ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ' ಬಿಡುಗಡೆ.. ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ (TVS) ಗುರುತಿಸಿಕೊಂಡಿದೆ. ಗೋವಾದಲ್ಲಿ ಆದ್ದೂರಿಯಾಗಿ ನಡೆಯುತ್ತಿರುವ ಮೋಟೋಸೋಲ್ (MotoSoul - 2023) ಕಾರ್ಯಕ್ರಮದಲ್ಲಿ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ (TVS Apache RTR 160 4V) ಬೈಕ್ ಬಿಡುಗಡೆಯಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ರೂ.1,34,990 ಎಕ್ಸ್ ಶೋರೂಂ (ಚೆನ್ನೈ) ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಮೋಟಾರ್ ಸೈಕಲ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಹೊಸದಾದ ಹೆಡ್‌ಲೈಟ್‌ನ್ನು ಪಡೆದಿದೆ. ಕಂಪನಿಯ ಸ್ಮಾರ್ಟ್-ಕನೆಕ್ಟ್ (SmartXonnect) ವೆಹಿಕಲ್ ತಂತ್ರಜ್ಞಾನವನ್ನು ಹೊಂದಿದೆ. ಪ್ರಮುಖವಾಗಿ ರೈನ್, ಅರ್ಬನ್ ಮತ್ತು ಸ್ಪೋರ್ಟ್ ಎಂಬ 3 ರೈಡ್ ಮೋಡ್‌ ಆಯ್ಕೆಯನ್ನು ಒಳಗೊಂಡಿದೆ.

TVS Apache: ಕಡಿಮೆ ಬೆಲೆಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ.. ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ (TVS Apache RTR 160 4V) ಬೈಕ್, 4 ವಾಲ್ವ್, ಆಯಿಲ್ ಕೂಲ್ಡ್ 157.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ರೈನ್ ಹಾಗೂ ಅರ್ಬನ್ ಮೋಡ್‌ನಲ್ಲಿ 8,600 rpmನಲ್ಲಿ 15.42 bhp ಗರಿಷ್ಠ ಪವರ್ ಹಾಗೂ 7,250 rpmನಲ್ಲಿ 14.14 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಸ್ಪೋರ್ಟ್ಸ್ ಮೋಡ್‌ನಲ್ಲಿ ಈ ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ನ ಸಿಂಗಲ್ ಸಿಲಿಂಡರ್ ಎಂಜಿನ್ 9,250 rpmನಲ್ಲಿ 17.3 bhp ಪವರ್ ಮತ್ತು 7,250 rpmನಲ್ಲಿ 14.73 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

TVS Apache: ಕಡಿಮೆ ಬೆಲೆಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬಿಡುಗಡೆ.. ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ 270 ಎಂಎಂ ಡಿಸ್ಕ್, ರೇರ್ 230 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಡುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ. ಸಸ್ಪೆಷನ್ ಸೆಟಪ್ ಕುರಿತು ಮಾತನಾಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌ ಹಾಗೂ ರೇರ್ ಮೊನೊಶಾಕ್ ಸಸ್ಪೆಷನ್ ಸೆಟಪ್ ಒಳಗೊಂಡಿದೆ.

ಈ ಬೈಕ್, 17 - ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 90/90 ಹಾಗೂ ರೇರ್ 130/70 ಅಳತೆಯ ಟ್ಯೂಬ್ ಲೆಸ್ ಟೈಯರ್ಸ್ ಅನ್ನು ಪಡೆದಿದೆ. ಇದು, ರಸ್ತೆ ಮೇಲೆ ಸುಲಭವಾಗಿ ಚಲಿಸಲು ನೆರವಾಗುತ್ತದೆ. ಈಗಾಗಲೇ ದೇಶಾದ್ಯಂತ ಎಲ್ಲ ಟಿವಿಎಸ್ ಶೋರೂಂಗಳಲ್ಲಿ ಈ ಮೋಟಾರ್ ಸೈಕಲ್ ಬುಕ್ಕಿಂಗ್ ತೆರೆಯಲಾಗಿದ್ದು, ಮುಂದಿನ ವರ್ಷ (2024)ದಿಂದ ವಿತರಣೆಗಳು ಶುರುವಾಗಲಿದೆ.

ಇನ್ನು, ಟಿವಿಎಸ್ ಕಂಪನಿ ಅಗ್ಗದ ಬೆಲೆಗೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಬಿಡುಗಡೆಗೊಳಿಸಿರುವುದು ಗ್ರಾಹಕರಿಗೆ ಖುಷಿತಂದಿದೆ. ಅದರಲ್ಲೂ ಪ್ರೀಮಿಯಂ ಬೈಕ್ ಇಷ್ಟಪಡುವ ಯುವಕರನ್ನು ಖಂಡಿತ ಸೆಳೆಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದು, ಮುಂಬರುವ ದಿನಗಳಲ್ಲಿ ಈ ಬೈಕಿಗೆ ಹೆಚ್ಚಿನ ಬೇಡಿಕೆ ಬರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, December 9, 2023, 18:57 [IST]
English summary
Tvs apache rtr 160 4v launched in india affordable price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+