TVS: ಬಿಡುಗಡೆಗೂ ಮುನ್ನವೇ ಟಿವಿಎಸ್ ಹೊಸ ಬೈಕ್ ಕಾಣಿಸಿತು, ಭರ್ಜರಿ ವಿಶೇಷತೆಗಳಿವೆ.. ಡೇಟ್ ರಿವೀಲ್?

ತಮಿಳುನಾಡಿನ ಹೊಸೂರು ಮೂಲದ ಟಿವಿಎಸ್ (TVS) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 'ಟಿವಿಎಸ್ ಎಕ್ಸ್' ಬಿಡುಗಡೆಗೊಳಿಸಿ, ತೀವ್ರ ಸಂಚಲನ ಮೂಡಿಸಿತ್ತು. ಕೆಲವೇ ದಿನಗಳಲ್ಲಿ ಅಪಾಚೆ ಆರ್‌ಟಿಆರ್ 310 ಬೈಕ್ ಲಾಂಚ್ ಮಾಡಲಿದೆ.

ಟಿವಿಎಸ್ ಮೋಟಾರ್ ಮುಂಬರುವ ಅಪಾಚೆ ಆರ್‌ಟಿಆರ್ 310 (Apache RTR 310) ಮೋಟಾರ್‌ಸೈಕಲ್ ಕುರಿತ ಟೀಸರ್ ಅನ್ನು ಬುಧವಾರ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ನೂತನ ಬೈಕ್ ಡಿಸೈನ್ ಬಗ್ಗೆ ಭಾಗಶಃ ಮಾಹಿತಿಯನ್ನು ಬಹಿರಂಗಪಡಿಸಿದಂತೆ ಕಾಣುತ್ತಿದೆ. ಈಗಾಗಲೇ, ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಬುಕ್ಕಿಂಗ್ ಶುರುವಾಗಿದ್ದು, ಸೆಪ್ಟೆಂಬರ್ 6ರಂದು ಭಾರತದಲ್ಲಿ ಲಾಂಚ್ ಆಗುವ ನೀರಿಕ್ಷೆಯಿದೆ.

TVS: ಬಿಡುಗಡೆಗೂ ಮುನ್ನವೇ ಟಿವಿಎಸ್ ಹೊಸ ಬೈಕ್ ಕಾಣಿಸಿತು, ಭರ್ಜರಿ ವಿಶೇಷತೆಗಳಿವೆ.. ಡೇಟ್ ರಿವೀಲ್?

ಟಿವಿಎಸ್ ಕಂಪನಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಗಮನಿಸಿದಾಗ, ನೂತನ ಅಪಾಚೆ ಆರ್‌ಟಿಆರ್ 310 ಬೈಕಿನ ಹೆಡ್ ಲ್ಯಾಂಪ್ ಹಾಗೂ ಫ್ಯುಯೆಲ್ ಟ್ಯಾಂಕ್ ಅನ್ನು ಕಪ್ಪು ಬಣ್ಣದ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೂ ಕೆಲವೊಂದು ಅತ್ಯಾಧುನಿಕ ಡಿಸೈನ್ ಫೀಚರ್ಸ್ ಹಾಗೆಯೇ ಕಣ್ಣಿಗೆ ಎದ್ದು ಕಾಣುತ್ತವೆ.

ಈ ಹೊಸ ಮೋಟಾರ್‌ಸೈಕಲ್, LED ಟರ್ನ್ ಇಂಡಿಕೇಟರ್‌, LED ಹೆಡ್‌ಲ್ಯಾಂಪ್ಸ್, ಸ್ಟೆಪ್ ಅಪ್ ಸೀಟ್, ಅಲಾಯ್ ವೀಲ್ಸ್ ಜೊತೆಗೆ ಎರಡು ತುದಿಯಲ್ಲಿಯೂ ಡಿಸ್ಕ್ ಬ್ರೇಕ್ ನಂತಹ ಆಕರ್ಷಕ ವಿನ್ಯಾಸದ ವೈಶಿಷ್ಟ್ಯಗಳನ್ನು ಹೊಂದಿರುವುದನ್ನು ನೋಡಬಹುದು. ಬೆಲೆ ವಿಚಾರವಾಗಿ ಟಿವಿಎಸ್ ಕಂಪನಿಯು ಎಲ್ಲಿಯೂ ಅಧಿಕೃತ ವಿವರವನ್ನು ಬಹಿರಂಗಪಡಿಸಿಲ್ಲ. ಆದರೆ, ರೂ.2.5 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

TVS: ಬಿಡುಗಡೆಗೂ ಮುನ್ನವೇ ಟಿವಿಎಸ್ ಹೊಸ ಬೈಕ್ ಕಾಣಿಸಿತು, ಭರ್ಜರಿ ವಿಶೇಷತೆಗಳಿವೆ.. ಡೇಟ್ ರಿವೀಲ್?

ಟಿವಿಎಸ್ ಹಾಗೂ ಬಿಎಂಡಬ್ಲ್ಯೂ ಸಹಯೋಗದಲ್ಲಿ ನೂತನ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಇದು ಶಕ್ತಿಯುತ ಎಂಜಿನ್ ಪಡೆದಿರುವ ಸಾಧ್ಯತೆಯಿದೆ. ಇದರ, 313 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, 9,700 rpmನಲ್ಲಿ 33 hp ಗರಿಷ್ಠ ಪವರ್ ಹಾಗೂ 7,770 rpmನಲ್ಲಿ 27.3 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬೈಕ್, ಪುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ಕನೆಕ್ಟಿವಿಟಿ, ಡುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಯಮ್)ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿರಬಹುದು. ಸಸ್ಪೆನ್ಷನ್ ಸೆಟಪ್ ವಿಚಾರಕ್ಕೆ ಬರುವುದಾದರೆ, ಈ ಹಿಂದೆ ಟೀಸರ್ ನಲ್ಲಿ ತೋರಿಸಿದಂತೆ ಫ್ರಂಟ್ USD ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿರುವ ನಿರೀಕ್ಷೆಯಿದೆ.

ಕಳೆದ ಕೆಲವು ದಿನಗಳ ಹಿಂದೆ, ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನವೆಂಬರ್ ತಿಂಗಳಿಂದ ಈ ಸ್ಕೂಟರ್ ವಿತರಣೆ ಆರಂಭವಾಗಲಿದೆ. ಇದರಲ್ಲಿ 4.44 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 140 ಕಿಮೀ ರೇಂಜ್ ನೀಡುತ್ತದೆ.

ಜೊತೆಗೆ ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಗಂಟೆಗೆ 105 ಕಿಮೀ ಟಾಪ್ ಸ್ವೀಡ್ ಹೊಂದಿದ್ದು, Xtealth, Xtride ಹಾಗೂ Xonic ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿದೆ. 10.25 - ಇಂಚಿನ HD ಟಿಲ್ಟ್ ಸ್ಕ್ರೀನ್, ಜಿಯೋಫೆನ್ಸಿಂಗ್, ಆಟೋ-ಲಾಕಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 31, 2023, 10:34 [IST]
English summary
Tvs apache rtr310 bike partially revealed launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+