ಟಿವಿಎಸ್‌ ಅಪಾಚಿ ಆರ್‌ಟಿಎಕ್ಸ್‌ ಹೆಸರಿಗೆ ಟ್ರೇಡ್‌ಮಾರ್ಕ್‌‌: ಮುಂದಿನ ಟಿವಿಎಸ್‌ ಅಡ್ವೆಂಚರ್ ಬೈಕ್‌ ಇದೇನಾ?

ಭಾರತೀಯ ಪ್ರಸಿದ್ಧ ಮೋಟಾರ್‌ ಸೈಕಲ್‌ ಕಂಪನಿಯಾದ ಟಿವಿಎಸ್‌, ತನ್ನ ಬತ್ತಳಿಕೆಗೆ ಹೊಸ ಮೋಟಾರ್‌ ಸೈಕಲನ್ನು ಸೇರಿಸಲಿದೆ ಎಂದು ವರದಿಗಳು ತಿಳಿಸಿವೆ. ಕಳೆದ ಕೆಲವು ತಿಂಗಳುಗಳಿಂದ ಟಿವಿಎಸ್‌ ಕಂಪನಿಯ ಮೋಟಾರ್‌ ಸೈಕಲ್‌ ಮಾರಾಟದಲ್ಲಿ ಗಮನಾರ್ಹ ರೀತಿಯಲ್ಲಿ ಏರಿಕೆ ಕಂಡಿದ್ದು ಹೊಸ ಬೈಕ್‌ ಅನ್ನು ಮಾರುಕಟ್ಟೆಗೆ ತರುವ ತವಕದಲ್ಲಿದೆ.

ಇನ್ನು ಟಿವಿಎಸ್‌ನ ಹೊಸ ಮೋಟಾರ್ ಸೈಕಲ್‌ ಅಡ್ವೆಂಚರ್‌ ಆವೃತ್ತಿಯಾಗಿರಲಿದ್ದು ಈ ಬೈಕ್‌ನ ಹೆಸರು ಟಿವಿಎಸ್‌ ಅಪಾಚಿ ಆರ್‌ಟಿಎಕ್ಸ್‌ (TVS Apache RTX) ಆಗಿರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಬಹುತೇಕ ಎಲ್ಲಾ ಸೆಗ್ಮೆಂಟ್‌ನಲ್ಲಿ ಟಿವಿಎಸ್‌ ತನ್ನ ಬೈಕ್‌ಗಳನ್ನು ತಂದು ಉತ್ತಮ ರೀತಿಯಲ್ಲಿ ಗ್ರಾಹಕರನ್ನು ಸಂಪಾದಿಸುತ್ತಿರುವುದು ಎಲ್ಲರಿಗೂ ತಿಳಿದಿದೆ.

TVS Apache RTX

ಇದೇ ರೀತಿ ತನ್ನ ಜೈತ್ರ ಯಾತ್ರೆಯನ್ನು ಮುಂದುವರೆಸುವುದಕ್ಕಾಗಿ ಟಿವಿಎಸ್‌ ಕಂಪನಿಯು ಅಡ್ವೆಂಚರ್‌ ಸೆಗ್ಮೆಂಟ್‌ನಲ್ಲಿ ತನ್ನ ಬೈಕನ್ನು ಲಾಂಚ್‌ ಮಾಡುವ ನಿರ್ಧಾರ ಮಾಡಿದ್ದು ಕೆಲವೇ ಸಮಯಗಳಲ್ಲಿ ಈ ಅಪಾಚಿ ಆರ್‌ಟಿಎಕ್ಸ್‌ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಇದು 313 ಸಿಸಿ ಯ ಮೋಟಾರ್‌ ಸೈಕಲ್‌ ಆಗಿರಲಿದೆ ಎಂದು ತಿಳಿದು ಬಂದಿದೆ.

ಈ ಟಿವಿಎಸ್‌ ಅಪಾಚಿ ಆರ್‌ಟಿಎಕ್ಸ್‌ ಮಾರುಕಟ್ಟೆಗೆ ಬಂದರೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಈ ಅಡ್ವೆಂಚರ್‌ ಸೆಗ್ಮೆಂಟ್‌ನಲ್ಲಿ ಹೆಸರು ಮಾಡುತ್ತಿರುವ ಹೋಂಡಾ ಸಿಬಿ 200ಎಕ್ಸ್, ಹೀರೋ ಎಕ್ಸ್‌ಪಲ್ಸ್‌, ಸುಜುಕಿ ವಿಸ್ಟಾರ್ಮ್‌ 250 ಎಸ್‌ಎಕ್ಸ್‌, ರಾಯಲ್‌ ಎನ್‌ಫೀಲ್ಡ್‌ ಹಿಮಾಯಯನ್‌ ಮತ್ತು ಕೆಟಿಎಂ ನ ಅಡ್ವೆಂಚರ್‌ ಸರಣಿಯ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

TVS Apache RTX

ಇನ್ನು ಮಾಹಿತಿಗಳ ಪ್ರಕಾರ ಟಿವಿಎಸ್‌ ಕಂಪನಿಯು ಅಪಾಚಿ ಆರ್‌ಟಿಎಕ್ಸ್‌ ಎಂಬ ಹೆಸರನ್ನು ಟ್ರೇಡ್‌ ಮಾರ್ಕ್‌ನಲ್ಲಿ ರಿಜಿಸ್ಟರ್‌ ಮಾಡಿರುವುದಾಗಿ ಸುದ್ದಿಯಾಗಿದ್ದು ಮಾಹಿತಿಗಳ ಪ್ರಕಾರ ಆರ್‌ಟಿಎಕ್ಸ್‌ ಟಿವಿಎಸ್ ನ ಮುಂದಿನ ಅಡ್ವೆಂರ್‌ ಬೈಕ್‌ ಆಗಿರಲಿದೆ ಎಂಬುದು ಖಚಿತವಾಗಿದೆ. ಇದರಿಂದ ಟಿವಿಎಸ್‌ ಬೈಕ್‌ ಪ್ರೇಮಿಗಳ ಅಡ್ವೆಂಚರ್‌ ಮೋಟಾರ್‌ ಸೈಕಲ್‌ನ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ.

ಇನ್ನು ವರದಿಗಳ ಪ್ರಕಾರ ಮುಂಬರಲಿರುವ ಟಿವಿಎಸ್‌ ಅಪಾಚಿ ಆರ್‌ಟಿಎಕ್ಸ್‌ ೩೧೩ ಬೈಕ್‌ನ ಎಂಜಿನ್‌ ಬಗ್ಗೆ ಮಾತನಾಡುವುದಾದರೆ ಸುಮಾರು 313 ಸಿಸಿ ಯ ಎಂಜಿನ್ ಈ ಬೈಕ್‌ನೊಂದಿಗೆ ಬರಲಿದ್ದು ಇದು ಸುಮಾರು ೩೩.೫೨ ಬಿಹೆಚ್‌ಪಿ ಪವರ್‌ ಮತ್ತು ೨೮ ಎನ್‌ಎಮ್ ಟಾರ್ಕನ್ನು ಬಿಡುಗಡೆಗೊಳಿಸಲಿದೆ.

ಈ ಬೈಕ್‌ 6 ಸ್ಪೀಡ್‌ ಗೇರ್‌ಬಾಕ್ಸ್‌ ಅನ್ನು ಹೊಂದಿರಲಿದ್ದು ಈಗಾಗಲೇ ಮಾರುಕಟ್ಟೆಯಲ್ಲಿ ಅಡ್ವೆಂಚರ್‌ ಸೆಗ್ಮೆಂಟ್‌ನಲ್ಲಿರುವ ಬಿಎಂಡಬ್ಲ್ಯೂ ನ ಬೈಕ್‌ ಆದ ಜಿ310 ಅನ್ನು ಹೋಲಲಿದೆ ಎಂದು ಬೈಕ್‌ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ 300 ಸಿಸಿ ಮೋಟಾರ್‌ ಸೈಕಲ್‌ನ ಸೆಗ್ಮೆಂಟ್‌ನಲ್ಲಿ ಬಿಎಂಡಬ್ಲ್ಯೂ ಮತ್ತು ಟಿವಿಎಸ್ ಸ್ವಾಮ್ಯದಲ್ಲಿ ಬಿಎಂಡಬ್ಲ್ಯೂ‌ ಮೂರು ಬೈಕ್‌ ಅನ್ನು ಮಾರುಕಟ್ಟೆಗೆ ತಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 26, 2023, 15:13 [IST]
English summary
Tvs files trademark for upcoming motorcycle tvs apache rtx
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+