India
YouTube

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಕೆಟಿಎಂ ಹಾಗೂ ಬಜಾಜ್‌ ಬೈಕ್‌ ಕಂಪನಿಗಳಿಗೆ ಪೈಪೋಟಿ ನೀಡಲು ಟಿವಿಎಸ್‌ ಕಂಪನಿಯು ತನ್ನ ಹೊಸ ಬೈಕ್‌ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ದವಾಗುತ್ತಿದೆ. ಹೊಸ ಬೈಕ್ ಮಾದರಿಯು ತಿಂಗಳು 7ರಂದು ಬಿಡುಗಡೆಯಾಗಲಿದ್ದು, ಹೊಸ ಬೈಕ್ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಮಾಹಿತಿಗಳು ಹರಿದಾಡುತ್ತಿವೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಟಿವಿಎಸ್ ಹೊಸ ಬೈಕ್ ಮಾದರಿಯು 250ಸಿಸಿ ವಿಭಾಗದಲ್ಲಿನ ಕೆಟಿಎಂ ಡ್ಯೂಕ್‌ 250 ಹಾಗೂ ಬಜಾಜ್‌ ಪಲ್ಸರ್ ಎನ್‌ 250 ಬೈಕ್‌ಗಳಿಗೆ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆಯಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳ ಪ್ರಕಾರ ಟಿವಿಎಸ್‌ ಹೊಸ ರೊನಿನ್‌ ಬೈಕ್ ಸ್ಕ್ರ್ಯಾಂಬ್ಲರ್‌ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದೆ. ಈಗಾಗಲೇ ಟಿವಿಎಸ್‌ ಕಂಪನಿಯು 125, 160, 200 ಸಿಸಿ ವಿಭಾಗಗಳಲ್ಲಿ ಟಿವಿಎಸ್‌ ಅಪಾಚೆ ಬೈಕ್‌ಗಳನ್ನು ಹೊಂದಿದ್ದು, ಈ ವಿಭಾಗಗಳ ಮಾರುಕಟ್ಟೆಯಲ್ಲಿ ಬಜಾಜ್‌ ಹಾಗೂ ಕೆಟಿಎಂನ ಬೈಕ್‌ಗಳಿಗೆ ಪ್ರಬಲ ಪ್ರತಿಸ್ಫರ್ಧಿಯಾಗಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಮೂಲಗಳ ಪ್ರಕಾರ ಹೊಸ ಟಿವಿಎಸ್‌ ರೊನಿನ್‌ ಝೆಪ್ಲಿನ್ ಪ್ರೇರಿತ ಕ್ರೂಸರ್‌ ಎಂದು ನಿರೀಕ್ಷಿಸಲಾಗಿದ್ದು, ಇದು 223 ಸಿಸಿ ಎಂಜಿನ್‌ನ್ನು ಹೊಂದಿದೆ. ಇದರ ವಿನ್ಯಾಸದಲ್ಲಿ ರೊನಿನ್‌ ವೃತ್ತಾಕಾರದ ಹೆಡ್‌ಲೈಟ್‌ ಹೊಂದಿದ್ದು, ರೆಟ್ರೋ ಲುಕ್‌ನಿಂದ ಕೂಡಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಜೊತೆಗೆ T ಆಕಾರದ ಡೇ ಟೈಮ್‌ ರನ್ನಿಂಗ್‌ ಲ್ಯಾಂಪ್ ಮತ್ತು ಸಿಂಗಲ್‌ ಪ್ಯಾಡ್‌ ಇನ್ಸ್ಟ್ರುಮೆಂಟಲ್‌ ಕನ್ಸೋಲ್ ಅನ್ನು ಒಳಗೊಂಡಿದೆ. ಹೀಗಾಗಿ ಇದು ರೆಟ್ರೋಲುಕ್‌ ಇಷ್ಟಪಡುವ ಬೈಕ್‌ ಪ್ರೇಮಿಗಳಿಗೆ ಹೊಸ ರೊನಿನ್‌ ಒಂದು ಉತ್ತಮ ಆಯ್ಕೆಯಾಗಬಲ್ಲದು.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಟಿವಿಎಸ್‌ ರೊನಿನ್‌ ಮಾದರಿಯಲ್ಲಿ ಕಂಪನಿಯು 5 ಸ್ಪೀಡ್‌ ಗೇರ್‌ ಬಾಕ್ಸ್‌ನೊಂದಿಗೆ ಜೋಡಿಸಲಾದ 223 ಸಿಸಿ ಸಿಂಗಲ್ ಸಿಲಿಂಡರ್‌ ಎಂಜಿನ್‌ನ್ನು ನಿಯಂತ್ರಿಸುತ್ತದೆ. ಇನ್ನು ಸಸ್ಪೆನ್ಷನ್‌ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿ ಮೋನೋಶಾಕ್‌ ಸಸ್ಪೆನ್ಷನ್‌ ಹಾಗೂ ಮುಂಭಾಗದಲ್ಲಿ ಅಪ್‌ಸೈಡ್‌ ಡೌನ್‌ ಫೋರ್ಕ್‌ ಸಸ್ಪೆನ್ಷನ್‌ ವ್ಯವಸ್ಥೆಯನ್ನು ಹೊಂದಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಅತ್ಯುತ್ತಮ ಸಸ್ಪೆನ್ಷನ್ ಸೌಲಭ್ಯದಿಂದಾಗಿ ಉತ್ತಮ ರೈಡಿಂಗ್‌ ಕಂಫರ್ಟ್‌ ಹೊಂದಬಹುದಾಗಿದ್ದು, ಟಿಯರ್‌ ಡ್ರಾಪ್‌ ಮಾದರಿಯ ಇಂಧನ ಟ್ಯಾಂಕ್ ಹೊಸ ಬೈಕ್ ಉತ್ತಮ ಲುಕ್ ನೀಡುತ್ತಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಹೊಸ ವಿನ್ಯಾಸಗಳು ಬೈಕ್‌ಗೆ ಕೆಫೆ ರೇಸರ್‌ ಶೈಲಿಯನ್ನು ನೀಡಲಿದ್ದು, ಬೈಕ್‌ನ ಎರಡೂ ಕಡೆಗಳಲ್ಲಿ ಅಂದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ಯುಯಲ್‌ ಚಾನಲ್‌ ಎಬಿಎಸ್‌ ಜೊತೆಗೆ ಡಿಸ್ಕ್‌ ಬ್ರೇಕನ್ನು ನೀಡಲಾಗಿದ್ದು, ರೈಡರ್‌ಗೆ ಗರಿಷ್ಟ ಮಟ್ಟದ ಸುರಕ್ಷತೆಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಹಾಗೆಯೇ ಹಿಂಭಾಗದಲ್ಲಿ ಕೊಳವೆಯಾಕಾರದ ಗ್ರಾಬ್ ರೈಲ್ ಇದೆ, ಆಸನದ ವ್ಯವಸ್ಥೆಯಲ್ಲಿ ಸಿಂಗಲ್‌ ಸೀಟ್‌ ಇದ್ದು ಹಿಂಬದಿ ಸವಾರರಿಗೂ ಸಹ ಆರಾಮದಾಯಕ ಸವಾರಿಯ ಅನುಭವವನ್ನು ಟಿವಿಎಸ್‌ ರೊನಿನ್‌ ನೀಡಬಲ್ಲದು.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಇದರೊಂದಿಗೆ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್‌ ಹಲವಾರು ಪ್ರಯೋಗಗಳನ್ನು ನಡೆಸಿದ್ದು, ಅದರಲ್ಲಿ ಬಹುತೇಕವಾಗಿ ಎಲ್ಲದರಲ್ಲಿಯೂ ಯಶಸ್ಸು ಗಳಿಸಿದೆ. ಭಾರತದಲ್ಲಿ ಮಾರಾಟವಾಗುವ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಟಿವಿಎಸ್‌ ಸಹ ಮುಂಚೂಣಿಯಲ್ಲಿದೆ. ಅದರಲ್ಲೂ ಟಿವಿಎಸ್‌ ಅಪಾಚೆ ಮಾದರಿಯ ಬೈಕ್‌ಗಳು ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಇನ್ನು ಬಿಡುಗಡೆಗೊಂಡ ಬಳಿಕ ಈ ಟಿವಿಎಸ್‌ ರೊನಿನ್‌ ಬಹುತೇಕವಾಗಿ ಬಜೆಟ್‌ ಪ್ರಿಯರ ನೆಚ್ಚಿನ ಆಯ್ಕೆಯಾಗಬಹುದಾಗಿದ್ದು, ಬಿಡುಗಡೆಗೊಂಡ ಬಳಿಕ ರೊನಿನ್‌ ಹೊಸ ಮಾದರಿಯು ಮಾರುಕಟ್ಟೆಯಲ್ಲಿ ಯಾವ ರೀತಿಯ ಸಂಚಲನವನ್ನು ಮೂಡಿಸಲಿದೆ ಎಂಬುವುದನ್ನು ಕಾಯ್ದುನೋಡಬೇಕಿದೆ.

ಕೆಟಿಎಂ, ಬಜಾಜ್‌ಗೆ ಪೈಪೋಟಿ ನೀಡಲು ಬರುತ್ತಿದೆ ಟಿವಿಎಸ್‌ ಹೊಸ ರೊನಿನ್‌!

ಡ್ರೈವ್‌ ಸ್ಪಾರ್ಕ್‌ ಅಭಿಪ್ರಾಯ

ಕಡಿಮೆ ಬೆಲೆಯ ರೆಟ್ರೋ ಲುಕ್‌ ಸ್ಕ್ರ್ಯಾಂಬ್ಲರ್‌ ಬೈಕ್‌ ನಿಮ್ಮ ಆಯ್ಕೆಯಾದರೆ ಹೊಸ ರೊನಿನ್‌ ನಿಮಗೆ ಹೇಳಿ ಮಾಡಿಸಿರುವ ಬೈಕ್‌ ಮಾದರಿಯಾಗಲಿದೆ. ಜೊತೆಗೆ ಭಾರತದಾದ್ಯಂತ ಇರುವ ಟಿವಿಎಸ್‌ನ ವಿಸ್ತಾರವಾದ ಟಿವಿಎಸ್‌ ಮಾರಾಟ ಮಳಿಗೆಗಳು, ಸೇವಾ ಕೇಂದ್ರಗಳು ಹೊಸ ಬೈಕ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಲಿವೆ.

Most Read Articles

Kannada
English summary
Tvs ronin new images leaked before launch
Story first published: Wednesday, July 6, 2022, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X