TVS iQube: ದಾಖಲೆ ಮಟ್ಟದ ಸ್ಕೂಟರ್‌ಗಳ ಮಾರಾಟ ಮಾಡಿ ಅಚ್ಚರಿಗೊಳಿಸಿದ ಐಕ್ಯೂಬ್
ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬಂದಿವೆ. ಮುಂಬರುವ ವರ್ಷಗಳಲ್ಲಿ ಈ ಮಾತು ನಿಜವಾದ್ರೂ ಆಶ್ಚರ್ಯವಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಕೇವಲ ಟಿವಿಎಸ್ ಬ್ರಾಂಡ್‌ನ iQube, ದೇಶೀಯ ಮಾರುಕಟ್ಟೆಯಲ್ಲಿ 1,50,000-ಯೂನಿಟ್ ಮಾರಾಟದ ಮೈಲಿಗಲ್ಲನ್ನು ಮೀರಿಸಿದೆ.
ಹೌದು ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸ್ಕೂಟರ್ ಬಿಡುಗಡೆಯಾದಾಗಿನಿಂದ 2023 ಜುಲೈ 22 ರವೆರೆಗೆ ಒಟ್ಟು 1,54,263 ಸ್ಕೂಟರ್‌ಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಇನ್ನು ಜೂನ್ 2023 ರ ಅಂತ್ಯದವರೆಗೆ ಒಟ್ಟು 1,47,309 ಸ್ಕೂಟರ್‌ಗಳ ಮಾರಾಟವಾಗಿದ್ದು, ಜುಲೈ 2023 ರ ವರದಿಯನ್ನು ಆಗಸ್ಟ್‌ನಲ್ಲಿ ಪ್ರಕಟಿಸಲಾಗುವುದು.

ವಿಚಿತ್ರವೆಂಬಂತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಜನವರಿ 2020 ರಲ್ಲಿ ಬಿಡುಗಡೆಯಾಗಿತ್ತು. ಆದರೆ ಟಿವಿಎಸ್ ಐಕ್ಯೂಬ್ ವೇಗವಾಗಿ ಜನರಲ್ಲಿ ಜನಪ್ರಿಯತೆ ಪಡೆದಿದೆ. 1,50,000 ಸ್ಕೂಟರ್‌ಗಳ ಮಾರಾಟವನ್ನು ಸಾಧಿಸಲು 43 ತಿಂಗಳುಗಳನ್ನು ತೆಗೆದುಕೊಂಡಿದೆ. ಪ್ರಸ್ತುತ ಹಣಕಾಸು ವರ್ಷದ (FY24) ಮೊದಲ ಮೂರು ತಿಂಗಳಲ್ಲಿ, TVS 38,602 ಯುನಿಟ್‌ಗಳ ಸಗಟು ಪ್ರಮಾಣವನ್ನು ದಾಖಲಿಸಿದೆ.
ಹೆಚ್ಚಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಂತೆ, TVS ಜೂನ್ 2023 ರಿಂದ FAME-2 ಸಬ್ಸಿಡಿಯನ್ನು ಕಡಿತಗೊಳಿಸಿದಾಗ ಮಾರಾಟವು ನಿಧಾನಗೊಂಡಿದೆ. ಆದರೂ TVS iQube ತನ್ನ ಅತ್ಯುತ್ತಮ ಮಾಸಿಕ ಮಾರಾಟವನ್ನು ಕಳೆದ ಮೇ ತಿಂಗಳಲ್ಲಿ ಕಂಡಿದೆ, ಹೇಗೆಂದರೆ ಮೇ 2023 ರಲ್ಲಿ (20,253 ಯೂನಿಟ್‌ಗಳು) ಖರೀದಿದಾರರು ಕಡಿಮೆಯಾದ ಸಬ್ಸಿಡಿ ಲಾಭವನ್ನು ಪಡೆಯಲು ಬೆಲೆ ಏರಿಕೆ ಮುಂಚಿತವಾಗಿಯೇ ಬುಕಿಂಗ್ ಮಾಡಿದ ಕಾರಣ ಉತ್ತಮ ಮಾರಾಟ ಕಂಡಿತ್ತು.

ಅಲ್ಲದೇ FY23 (ಆರ್ಥಿಕ ವರ್ಷ) ದಲ್ಲಿ iQube ಬಲವಾದ ಬೇಡಿಕೆಯನ್ನು ಕಂಡ ಕಾರಣವೆಂದರೆ ಮೇ 2022 ರಲ್ಲಿ ರಿಫ್ರೆಶ್ ಮಾಡಿದ iQube ಲೈನ್ಅಪ್ ಅನ್ನು ಸುಧಾರಿತ ಶ್ರೇಣಿ ಮತ್ತು ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಯಿತು. ಇದೇ ಕಾರಣದಿಂದ ಮಾರಾಟವು ವೇಗವಾಗಿ ಏರಿತು. ಈ ಮೂಲಕ ವಾರ್ಷಿಕವಾಗಿ ಶೇ 342 ರಷ್ಟು ಬೆಳವಣಿಗೆ ಸಾಧಿಸಿರುವುದಾಗಿ ಕಂಪನಿ ಹೇಳಿದೆ.
ಪ್ರಸ್ತುತ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಾದ ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ST ನಲ್ಲಿ ಖರೀದಿಗೆ ಲಭ್ಯವಿದೆ. ಮೊದಲ ಎರಡು ರೂಪಾಂತರಗಳು ಪ್ರಸ್ತುತ ಮಾರಾಟಕ್ಕೆ ಲಭ್ಯವಿದೆ. ಆದರೆ, iQube ST ರೂಪಾಂತರದ ಮಾರಾಟ ಇನ್ನೂ ಆರಂಭವಾಗಿಲ್ಲ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆರಂಭಿಕ ಬೆಲೆ ರೂ.1,12,231 ಇದೆ. ಮಿಡ್-ಲೆವೆಲ್ ರೂಪಾಂತರ ಐಕ್ಯೂಬ್ ಎಸ್ ಬೆಲೆ ರೂ.1,20,184 ಇದೆ.

ಈ ಸ್ಕೂಟರ್ 7 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್‌ಗೆ ಸಂಬಂಧಿಸಿದಂತೆ, 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಐಕ್ಯೂಬ್ ST ರೂಪಾಂತರದಲ್ಲಿ ಬಳಸಲಾಗಿದೆ.
ಇದು ಸಂಪೂರ್ಣ ಚಾರ್ಜಿನಲ್ಲಿ 145 ಕಿ.ಮೀ ರೇಂಜ್ ನೀಡಲಿದೆ. 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಐಕ್ಯೂಬ್, ಮತ್ತು ಮಿಡ್-ಲೆವೆಲ್ ಐಕ್ಯೂಬ್ ಎಸ್ ರೂಪಾಂತರದಲ್ಲಿ ಬಳಸಲಾಗಿದೆ. ಇದು ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ ನೀಡಲಿದೆ.

ಟಾಪ್-ಸ್ಪೆಕ್ ST ರೂಪಾಂತರವನ್ನು ಕಳೆದ ವರ್ಷ ತೋರಿಸಲಾಯಿತು, ಆದರೆ ಇನ್ನೂ ಅಧಿಕೃತವಾಗಿ ಮಾರಾಟಕ್ಕೆ ಹೋಗಿಲ್ಲ. ಇದು ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ, ಮೊದಲ-ಜೆನ್ ಮಾದರಿಯಲ್ಲಿ 75 ಕಿ.ಮೀ ವ್ಯಾಪ್ತಿಯ ಸುಮಾರು ಎರಡು ಪಟ್ಟು ಹೆಚ್ಚು ಮೈಲೇಜ್ ಇದರಲ್ಲಿ ಸಿಗಲಿದೆ. ಟಿವಿಎಸ್ ಐಕ್ಯೂಬ್ ನೆಟ್‌ವರ್ಕ್ ಕ್ರಮೇಣ ವಿಸ್ತರಿಸಿದೆ, ಇದು ಪ್ರಸ್ತುತ 140 ನಗರಗಳಲ್ಲಿ ಮತ್ತು ರಾಷ್ಟ್ರದಾದ್ಯಂತ 200 ಟಚ್ ಪಾಯಿಂಟ್‌ಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications