TVS iQube: ಟಿವಿಎಸ್ ಐಕ್ಯೂಬ್‌ಗೆ ಭಾರೀ ಬೇಡಿಕೆ, ಶೋರೂಂನತ್ತ ಮುಖ ಮಾಡಿದ ಗ್ರಾಹಕ!
ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಸದ್ಯ, ನವೆಂಬರ್ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದ್ದು, ಕಂಪನಿಯು ನೀರಿಕ್ಷಿತ ಮಟ್ಟಕ್ಕಿಂತ ಉತ್ತಮವಾಗಿ ಪ್ರಗತಿ ಸಾಧಿಸಿದೆ. ಅದರಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್‌ನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.
ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ವಿವರವನ್ನು ನೋಡುವ ಮೊದಲು, ಟಿವಿಎಸ್ ಕಂಪನಿಯ ಒಟ್ಟಾರೆ ಸೇಲ್ಸ್ ಅಂಕಿಅಂಶಗಳ ಬಗ್ಗೆ ತಿಳಿಯೋಣ. ಕಂಪನಿಯು ಕಳೆದ ನವೆಂಬರ್ ತಿಂಗಳು, 364,231 ಯುನಿಟ್ (ದ್ವಿಚಕ್ರ - ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿ, ಹೋದ ವರ್ಷದ (2022) ಇದೇ ಅವಧಿಗೆ ಹೋಲಿಸಿದರೆ (277,123 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 31% ಪ್ರಗತಿ ಕಂಡಿದೆ.

ದೇಶ - ವಿದೇಶದಲ್ಲಿ ಮಾರಾಟಗೊಳಿಸುವ ದ್ವಿಚಕ್ರ ವಾಹನಗಳು (Two - Wheelers) ಈ ಬಾರಿ ಟಿವಿಎಸ್ ಕಂಪನಿಗೆ ಉತ್ತಮ ಲಾಭವನ್ನು ತಂದುಕೊಟ್ಟಿವೆ. ನವೆಂಬರ್ ತಿಂಗಳು 352,103 ಯುನಿಟ್ ಟೂ ವೀಲರ್ ಸೇಲ್ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (263,642 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 34% ಬೆಳವಣಿಗೆ ಸಾಧಿಸಿದೆ.
ದೇಶೀಯ ಮಾರುಕಟ್ಟೆಯ (Domestic Market) ದ್ವಿಚಕ್ರ ವಾಹನ ಮಾರಾಟದಲ್ಲಿಯೂ ಟಿವಿಎಸ್ ಕಂಪನಿ ಉತ್ತಮವಾದ ಬೆಳವಣಿಗೆ ಸಾಧಿಸಿದೆ. ನವೆಂಬರ್ ತಿಂಗಳು (2023) 287,017 ಯುನಿಟ್ ವಾಹನಗಳನ್ನು ಸೇಲ್ ಮಾಡಿದ್ದು, ಕಳೆದ ವರ್ಷದ ನವೆಂಬರ್ ಗೆ (191,730 ಯುನಿಟ್) ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 50% ಪ್ರಗತಿ ಕಂಡಿದೆ.

ಮೋಟಾರ್ ಸೈಕಲ್ ಮಾರಾಟದ ಬಗ್ಗೆ ಮಾತನಾಡುವುದಾದರೆ, ಟಿವಿಎಸ್ ಕಂಪನಿಯು ಕಳೆದ ತಿಂಗಳು (2023) 172,836 ಯುನಿಟ್ ಸೇಲ್ ಮಾಡಿದ್ದು, 2022ರ ನವೆಂಬರ್ ತಿಂಗಳಿಗೆ (145,006 ಯುನಿಟ್) ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 19% ಬೆಳವಣಿಗೆ ಸಾಧಿಸಿದೆ. ಸ್ಕೂಟರ್ ಸೇಲ್ ನಲ್ಲೂ ಟಿವಿಎಸ್ ಉತ್ತಮ ಪ್ರಗತಿ ಕಂಡಿದ್ದು, ನವೆಂಬರ್ ನಲ್ಲಿ 135,749 ಯುನಿಟ್ ಮಾರಾಟ ಮಾಡಿ, ಶೇಕಡ 62% ಪ್ರಗತಿ ಕಂಡಿದೆ.
ಟಿವಿಎಸ್, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಸಾಧಿಸಿದೆ. ಸದ್ಯ ಕಂಪನಿ ಐಕ್ಯೂಬ್ ಇ-ಸ್ಕೂಟರ್ ಮಾತ್ರ ಮಾರಾಟ ಮಾಡುತ್ತಿದ್ದು, ನವೆಂಬರ್ ತಿಂಗಳು (2023) 16,782 ಯುನಿಟ್ ಸೇಲ್ ಮಾಡಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (10,056 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 66.88% ಪ್ರಗತಿ ಕಂಡಿದೆ. ಟಿವಿಎಸ್, ಈ ವರ್ಷದ ಆಗಸ್ಟ್ ತಿಂಗಳಲ್ಲಿ 'ಎಕ್ಸ್' ಇ-ಸ್ಕೂಟರ್ ಬಿಡುಗಡೆಗೊಳಿಸಿತ್ತು. ಆದರೆ, ವಿತರಣೆಗಳು ಶುರುವಾಗಿಲ್ಲ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಐಕ್ಯೂಬ್ (TVS iQube), 2 ರೂಪಾಂತರದ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ S. ಬೆಂಗಳೂರಿನಲ್ಲಿ ಐಕ್ಯೂಬ್ ರೂ.1,47,968 ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್, 3.04 kWh ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.
ಈ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ರೇಂಜ್ ನೀಡಲಿದ್ದು, 75 km/h ಟಾಪ್ ಸ್ವೀಡ್ ಹೊಂದಿದೆ. 4 ಗಂಟೆ 30 ನಿಮಿಷದಲ್ಲಿ ಐಕ್ಯೂಬ್ ಸ್ಕೂಟರ್ ಬ್ಯಾಟರಿ 0 - 80% ಚಾರ್ಜ್ ಆಗುತ್ತದೆ. ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ರೈಡಿಂಗ್ ಅಂಕಿಅಂಶಗಳು ಒಳಗೊಂಡನಂತೆ ವಿವಿಧ ಮಾಹಿತಿ ಪಡೆಯಲು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇಯನ್ನು ಕನೆಕ್ಟ್ ಮಾಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications