TVS: ಮಾಡರ್ನ್ - ರೆಟ್ರೋ ಬೈಕ್ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ: ಬೆಲೆ ಎಷ್ಟು, ವಿಶೇಷತೆಗಳೇನು?

ಭಾರತದಲ್ಲಿ ಟಿವಿಎಸ್ (TVS) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬೈಕ್ ಹಾಗೂ ಸ್ಕೂಟರ್ ಬಿಡುಗಡೆಗೊಳಿಸುವ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಪಡೆದಿದೆ. ಈ ಹಬ್ಬದ ಋತುವಿನಲ್ಲಿ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಹೊಸ ರೋನಿನ್ ಸ್ಪೆಷಲ್ ಎಡಿಷನ್ ಲಾಂಚ್ ಮಾಡಿದೆ.

ಟಿವಿಎಸ್ ಮೋಟಾರ್ (TVS Motors) ಮಾಡರ್ನ್ - ರೆಟ್ರೋ ಮೋಟಾರ್‌ಸೈಕಲ್‌ ರೋನಿನ್ ಸ್ಪೆಷಲ್ ಎಡಿಷನ್ (Ronin special edition) ಬಿಡುಗಡೆಗೊಳಿಸಿದೆ. ಈ ಆವೃತ್ತಿಯು ರೂ.1,72,700 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇತರೆ ರೋನಿನ್ ರೂಪಾಂತರಗಳಿಗೆ ಹೋಲಿಸಿದರೆ, ಒಂದಿಷ್ಟು ಕಾಸ್ಮೆಟಿಕ್ ಬದಲಾವಣೆಯನ್ನು ಪಡೆದುಕೊಂಡಿದೆ. ಉಳಿದಂತೆ ತಾಂತ್ರಿಕವಾಗಿ ಹಾಗೆಯೇ ಇದೆ.

TVS: ಮಾಡರ್ನ್ - ರೆಟ್ರೋ ಬೈಕ್ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ: ಬೆಲೆ ಎಷ್ಟು, ವಿಶೇಷತೆಗಳೇನು?

ಹೊಸದಾಗಿ ಲಾಂಚ್ ಆಗಿರುವ ರೋನಿನ್ ಸ್ಪೆಷಲ್ ಎಡಿಷನ್, ಟ್ರಿಪಲ್ ಟೋನ್ ಗ್ರಾಫಿಕ್ ಸ್ಕೀಮ್ ಹೊಂದಿದೆ. ಇದಕ್ಕೆ ಗ್ರೇ ಪ್ರೈಮರಿ ಶೆಡ್ ಆಗಿದ್ದು, ವೈಟ್ ಸೆಕೆಂಡರಿ ಶೆಡ್ ಹಾಗೂ ರೆಡ್ ಸ್ಟ್ರಿಪ್ ಥರ್ಡ್ ಟೋನ್ ಆಗಿದೆ. ವೀಲ್ ರಿಮ್ 'ಟಿವಿಎಸ್ ರೋನಿನ್' ಬ್ರ್ಯಾಂಡಿಂಗ್‌ ಒಳಗೊಂಡಿದ್ದು, USB ಚಾರ್ಜರ್, ಆಕರ್ಷಕ ವಿನ್ಯಾಸಗೊಂಡಿರುವ ಇಎಫ್ಐ ಕವರ್ ಹೊಂದಿದೆ. ಹೆಡ್‌ಲ್ಯಾಂಪ್ ಬೆಜೆಲ್‌ ಬ್ಲ್ಯಾಕ್ ಥೀಮ್ ಅನ್ನು ಪಡೆದಿದೆ.

ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಕೂಡ ಹಿಂದಿನ ಮಾದರಿಗಳಂತೆ ಅದೇ ಎಂಜಿನ್ ಹೊಂದಿದ್ದು, ಇದರ 225.9 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್, 20.4 hp ಗರಿಷ್ಠ ಪವರ್ ಹಾಗೂ 19.93 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

TVS: ಮಾಡರ್ನ್ - ರೆಟ್ರೋ ಬೈಕ್ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ: ಬೆಲೆ ಎಷ್ಟು, ವಿಶೇಷತೆಗಳೇನು?

ಈ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ವೈಶಿಷ್ಟ್ಯ ವಿಚಾರವಾಗಿ ಹೇಳುವುದಾದರೆ, ಇದು ಫುಲ್ ಎಲ್ಇಡಿ ಲೈಟಿಂಗ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿದ್ದು, ಎರಡು ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮೋಡ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ರೈನ್ ಮತ್ತು ರೋಡ್. ಇದರೊಟ್ಟಿಗೆ ಸ್ಲಿಪ್ಪರ್ ಕ್ಲಚ್ ಮತ್ತು ಗ್ಲೈಡ್ ಥ್ರೂ ಟೆಕ್ನಾಲಜಿಯಿದೆ.

ನೂತನ ಬೈಕ್, ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಮುಂಭಾಗ ಅಪ್-ಸೈಡ್ ಡೌನ್ ಫೋರ್ಕ್ಸ್, ಹಿಂಭಾಗ 7 - ಸ್ಟೆಪ್ ಪ್ರೆಲೋಡ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಹೇಳುವುದಾದರೆ, ಮುಂಭಾಗ 300 ಎಂಎಂ, ಹಿಂಭಾಗ 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ರೋನಿನ್ ರೂ.1.49 ಲಕ್ಷದಿಂದ ರೂ.1.69 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಇದು, 225.9 ಸಿಸಿ ಏರ್/ಆಯಿಲ್ ಕೋಲ್ಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5 ಸ್ವೀಡ್ ಗೇರ್ ಬಾಕ್ಸ್ ನೊಂದಿಗೆ ಖರೀದಿದಾರರಿಗೆ ಲಭ್ಯವಿದೆ. 42.95 kmpl ಮೈಲೇಜ್ ನೀಡುತ್ತದೆ.

ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹೊಂದಿದೆ. ಇದು, ನೋಟಿಫಿಕೇಶನ್ ಹಾಗೂ ಫೋನ್ ಕಾಲ್ ಬಗ್ಗೆ ಮಾಹಿತಿ ತೋರಿಸುತ್ತದೆ. ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ವಾಯ್ಸ್, ರೈಡ್ ಅಸಿಸ್ಟ್ ಮತ್ತು USB ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, October 28, 2023, 10:17 [IST]
English summary
Tvs ronin special edition launch india what is the new
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+