ಫ್ಲೆಕ್ಸ್ ಫ್ಯುಯೆಲ್ ವಿಭಾಗಕ್ಕೆ TVS.. ಅಪಾಚೆ RTR 160 4V ಪ್ರದರ್ಶನ
ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯ 'ಅಪಾಚೆ' ಬೈಕ್ ಭಾರೀ ಬೇಡಿಕೆಯನ್ನು ಹೊಂದಿದೆ. ಇದಕ್ಕಾಗಿ ಕಂಪನಿಯು ತನ್ನ ಬೈಕ್‌ಗಳನ್ನು ಕಾಲಕಾಲಕ್ಕೆ ನವೀಕರಿಸುತ್ತಲೇ ಇರುತ್ತದೆ. ಇದರ ಭಾಗವಾಗಿ, ಟಿವಿಎಸ್ ಆಟೋ ಎಕ್ಸ್‌ಪೋದಲ್ಲಿ RTR 160 4V ಫ್ಲೆಕ್ಸ್ ಫ್ಯುಯೆಲ್ ಮಾದರಿಯನ್ನು ಪ್ರದರ್ಶಿಸಿದೆ. ಈ ಬೈಕ್ ಮೇಲೆ ಖರೀದಿದಾರರಿಗೆ ನಿರೀಕ್ಷೆಗಳು ಹೆಚ್ಚಾಗಿವೆ.
ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಬೈಕ್‌ಗಳು ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಆದರೆ, ಮುಂಬರುವ ದಿನಗಳಲ್ಲಿ ಫ್ಲೆಕ್ಸ್ ಫ್ಯುಯೆಲ್ ಮಾದರಿಗಳು ಖಂಡಿತವಾಗಿಯೂ ಬೇಡಿಕೆಯನ್ನು ಪಡೆಯಲಿವೆ. ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಈ ಮಾದರಿಗಳನ್ನು ರೆಡಿ ಮಾಡುವ ಕಾರ್ಯದಲ್ಲಿ ತೊಡಗಿವೆ. ಇದರ ಭಾಗವಾಗಿ, ಹೀರೋ ಮೋಟೋಕಾರ್ಪ್ ಗ್ಲಾಮರ್ Xtec ಫ್ಲೆಕ್ಸ್ ಫ್ಯುಯೆಲ್, ಸುಜುಕಿ Gixxer 250 ಫ್ಲೆಕ್ಸ್ ಫ್ಯುಯೆಲ್ ಮತ್ತು ಹೋಂಡಾ XRE 300 ಫ್ಲೆಕ್ಸ್ ಫ್ಯುಯೆಲ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿವೆ.

ಟಿವಿಎಸ್ ಅಪಾಚೆ RTR 160 4V ಫ್ಲೆಕ್ಸ್ ಫ್ಯುಯೆಲ್ ಬೈಕಿನ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಇದು 159.7 ಸಿಸಿ ಆಯಿಲ್ - ಕೂಲ್ಡ್, SOHC ಎಂಜಿನ್ ಹೊಂದಿದೆ. ಇದು 9250 rpm ನಲ್ಲಿ 17.39 bhp ಗರಿಷ್ಠ ಪವರ್ ಮತ್ತು 7250 rpm ನಲ್ಲಿ 14.73 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಬೈಕ್‌ನಲ್ಲಿ ಅರ್ಬನ್, ಸ್ಪೋರ್ಟ್ಸ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.
ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಫ್ಲೆಕ್ಸ್ ಫ್ಯುಯಲ್ ಬೈಕ್‌ನ ಸುತ್ತಳತೆ ಬಗ್ಗೆ ಮಾತನಾಡುವುದಾದರೆ, ಇದು 2035 ಎಂಎಂ ಉದ್ದ, 790 ಎಂಎಂ ಅಗಲ, 1050 ಎಂಎಂ ಎತ್ತರ ಮತ್ತು 1357 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ ವಿಚಾರಕ್ಕೆ ಬಂದರೆ, ಇದು 180 ಎಂಎಂ ಇದೆ. ಈ ಬೈಕ್‌ನ ಒಟ್ಟು ತೂಕ 275 ಕೆಜಿ ಇದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ಖರೀದಿಸಬಹುದು.

ಅಪಾಚೆ RTR 160 4V ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಇದೀಗ ಈ ಬೈಕ್ ಫ್ಲೆಕ್ಸ್ ಫ್ಯೂಯೆಲ್ ಆವೃತ್ತಿಯಲ್ಲಿ ಲಾಂಚ್ ಆಗಲು ರೆಡಿಯಾಗಿದೆ. ಇದು ಅದರ ಹಿಂದಿನ ಸ್ಟ್ಯಾಂಡರ್ಡ್ ಮಾದರಿಗೆ ಬಹುತೇಕ ಹೋಲುತ್ತದೆ.ಈ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಎಥೆನಾಲ್ ಆಧಾರಿತ ಫ್ಯುಯೆಲ್ (E20 ರಿಂದ E85: ಅಂದರೆ, ಎಥೆನಾಲ್ ಹಾಗೂ ಪೆಟ್ರೋಲ್) ಸಹಾಯದಿಂದ ಕಾರ್ಯ ನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.
ಟಿವಿಎಸ್ ಅಪಾಚೆ ಆರ್ ಟಿಆರ್ 160 4ವಿ ಫ್ಲೆಕ್ಸ್ ಫ್ಯೂಯಲ್ ಬೈಕ್ ನೋಡಲು ತುಂಬಾ ಆಕರ್ಷಕವಾಗಿದ್ದು, ಈ ಬೈಕ್ 12 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಅನ್ನು ಪಡೆದಿದೆ. ಡಿಸೈನ್ ವಿಷಯದಲ್ಲಿ ಈ ಬೈಕ್ ಸ್ಟ್ಯಾಂಡರ್ಡ್ ಮಾದರಿಯನ್ನು ಹೋಲುತ್ತದೆ. ವೈಶಿಷ್ಟ್ಯಗಳು ಕೂಡ ಹಿಂದಿನ ಮಾದರಿಯಂತೆಯೇ ಇದ್ದು, ಹೆಚ್ಚು ಬದಲಾಗಿರುವಂತೆ ಕಾಣುತ್ತಿಲ್ಲ. ಹೊಸ ಬೈಕ್‌ನ ಕಾರ್ಯಕ್ಷಮತೆ ಮತ್ತು ಮೈಲೇಜ್ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಶೀಘ್ರದಲ್ಲೇ ಅದನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಟಿಎವಿಸ್ ಅಪಾಚೆ RTR 160 4V ಸ್ಟ್ರೀಟ್ ಬೈಕ್ ಆಗಿದ್ದು, ರೂ.1,22,410 ಬೆಲೆ ಹೊಂದಿದೆ. ಇದು 4 ರೂಪಾಂತರಗಳು ಮತ್ತು 5 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ವೆರಿಯಂಟ್ ಬೆಲೆ ರೂ.1,30,710 ಇದೆ. ಅಪಾಚೆ RTR 160 4V, 159.7ಸಿಸಿ BS6 ಎಂಜಿನ್ ಹೊಂದಿದ್ದು, ಇದು 17.31 bhp ಪವರ್ ಮತ್ತು 14.73 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದ್ದು, ಜೊತೆಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿದೆ.
ಟಿಎವಿಸ್ ಅಪಾಚೆ RTR 160 4V ಬೈಕ್, 144 ಕೆಜಿ ತೂಕವಿದ್ದು, 12 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಹೊಸ ಹೆಡ್‌ಲ್ಯಾಂಪ್ ಡೇಟೈಮ್ ರನ್ನಿಂಗ್ ಲ್ಯಾಂಪ್ (DRL) ಅನ್ನು ಹೊಂದಿದೆ. ಟಾಪ್-ಎಂಡ್ ರೂಪಾಂತರವು ಬ್ಲೂಟೂತ್ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಬಹುದು. ಹೊಸ ಟಿವಿಎಸ್ ಅಪಾಚೆ ಆರ್ ಟಿಆರ್ 160 4ವಿ ಫ್ಲೆಕ್ಸ್ ಫ್ಯೂಯಲ್ ಬೈಕ್ ಮಾರುಕಟ್ಟೆಗೆ ಬಂದ ಮೇಲೆ ಖರೀದಿದಾರರಿಗೆ ಖಂಡಿತ ಆಕರ್ಷಿಸುತ್ತದೆ.


Click it and Unblock the Notifications