TVS iQube: ಯಾರು ಊಹಿಸಿರಲಿಲ್ಲ, 'ಟಿವಿಎಸ್ ಐಕ್ಯೂಬ್'ನಿಂದ ದಾಖಲೆ

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಟಿವಿಎಸ್ ಮೋಟಾರ್ (TVS Motor) ಗುರುತಿಸಿಕೊಂಡಿದ್ದು, ಕಂಪನಿಯ ಟೂ ವೀಲರ್ ಗಳು ವಿಶ್ವಾಸಾರ್ಹತೆಗೆ ಹೆಸರುವಾಗಿವೆ. ಸದ್ಯ, ಆಗಸ್ಟ್ ತಿಂಗಳ ಮಾರಾಟ ವರದಿ ಪ್ರಗಟಗೊಂಡಿದ್ದು, ಟಿವಿಎಸ್ ಉತ್ತಮ ಪ್ರಗತಿ ಸಾಧಿಸಿದೆ. ಅದರಲ್ಲೂ ಐಕ್ಯೂಬ್ (iQube) ಸೇಲ್ ನಲ್ಲಿ ದಾಖಲೆ ನಿರ್ಮಿಸಿದೆ.

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ವಿವರವನ್ನು ನೋಡುವ ಮೊದಲು, ಟಿವಿಎಸ್ ಕಂಪನಿಯ ಒಟ್ಟಾರೆ ಸೇಲ್ಸ್ ಬಗ್ಗೆ ಗಮನಹರಿಸೋಣ. ಆಗಸ್ಟ್ ತಿಂಗಳಲ್ಲಿ (2023) 345,848 ಯುನಿಟ್ (ದ್ವಿಚಕ್ರ - ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (333,787 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಕಂಪನಿಯು ಶೇಕಡ 4% ಬೆಳವಣಿಗೆ ಕಂಡಿದೆ.

TVS iQube: ಯಾರು ಊಹಿಸಿರಲಿಲ್ಲ, ಟಿವಿಎಸ್ ಐಕ್ಯೂಬ್ನಿಂದ ದಾಖಲೆ

ಪ್ರತ್ಯೇಕವಾಗಿ, ಟಿವಿಎಸ್ ಮಾರಾಟಗೊಳಿಸಿದ ಒಟ್ಟು ದ್ವಿಚಕ್ರ ವಾಹನಗಳ (two-wheeler) ಕುರಿತು ತಿಳಿಯೋಣ. ಆಗಸ್ಟ್ ತಿಂಗಳಲ್ಲಿ ಕಂಪನಿ 332,110 ಯುನಿಟ್ ಟೂ ವೀಲರ್ ಸೇಲ್ ಮಾಡಿ, ಹೋದ ವರ್ಷದ ಆಗಸ್ಟ್ ಗೆ (315,539) ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 5% ಪ್ರಗತಿ ಸಾಧಿಸಿದೆ. ಅದೇ ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು (256,619 ಯುನಿಟ್) ಶೇಕಡ 7% ಬೆಳವಣಿಗೆ ಕಂಡಿದೆ.

ಮೋಟಾರ್‌ಸೈಕಲ್‌ ಮಾರಾಟದಲ್ಲಿ ಟಿವಿಎಸ್ ತೀವ್ರ ಹಿನ್ನೆಡೆ ಅನುಭವಿಸಿದೆ. (2023) ಆಗಸ್ಟ್ ತಿಂಗಳಲ್ಲಿ 153,047 ಯುನಿಟ್ ಸೇಲ್ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (157,118 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ -2.59% ಕುಸಿತವಾಗಿದೆ. ಆದರೆ, ಸ್ಕೂಟರ್ ಮಾರಾಟದಲ್ಲಿ ಭರ್ಜರಿಯಾಗಿ ಯಶಸ್ಸು ಸಾಧಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

TVS iQube: ಯಾರು ಊಹಿಸಿರಲಿಲ್ಲ, ಟಿವಿಎಸ್ ಐಕ್ಯೂಬ್ನಿಂದ ದಾಖಲೆ

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸೇಲ್ ಮಾಡಿದ್ದ 121,866 ಯುನಿಟ್ ಸ್ಕೂಟರ್ ಗೆ ಹೋಲಿಸಿದರೆ, ಈ ಆಗಸ್ಟ್ ನಲ್ಲಿ 142,502 ಯುನಿಟ್ ಮಾರಾಟ ಮಾಡಿ, ಶೇಕಡ 17% ಬೆಳವಣಿಗೆ ಸಾಧಿಸಿದೆ. ಪ್ರಮುಖವಾಗಿ, ಐಕ್ಯೂಬ್ (iQube) ಸೇಲ್ ನಲ್ಲಿ ಎಷ್ಟೇ ಪ್ರತಿಸ್ಪರ್ಧಿಗಳಿದ್ದರೂ ಟಿವಿಎಸ್ ಕಂಪನಿ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದ್ದು, ದೊಡ್ಡ ದಾಖಲೆಯನ್ನು ನಿರ್ಮಾಣ ಮಾಡಿದೆ.

ಟಿವಿಎಸ್ ಕಂಪನಿ (2023) ಆಗಸ್ಟ್ ತಿಂಗಳಲ್ಲಿ 23,887 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಾಟ ಮಾಡಿ, 2022ರ ಇದೇ ಅವಧಿಗೆ ಹೋಲಿಸಿದರೆ (4,418 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 440% ಪ್ರಗತಿ ಸಾಧಿಸಿದೆ. ಇದು, ಪ್ರತಿಸ್ಪರ್ಧಿಗಳಾದ ಓಲಾ, ಎಥರ್, ಹೀರೋ ಸೇರಿದಂತೆ ಅನೇಕ ಕಂಪನಿಗಳಿಗೆ ಭೀತಿ ಉಂಟು ಮಾಡಿದೆ.

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಐಕ್ಯೂಬ್, ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.1,13 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. 3.04 kWh ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 ಕಿಲೋಮೀಟರ್ ರೇಂಜ್ ನೀಡುವ ಸಾಮರ್ಥ್ಯ ಒಳಗೊಂಡಿದೆ.

ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್, 75 km/h ಟಾಪ್ ಸ್ವೀಡ್ ಹೊಂದಿದ್ದು, ಇದರ 0 - 80% ಬ್ಯಾಟರಿ ಚಾರ್ಜ್ ಆಗಲು 4 ಗಂಟೆ 30 ನಿಮಿಷ ಸಾಕು. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಫುಲ್-ಕಲರ್ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈಡಿಂಗ್ ಅಂಕಿಅಂಶಗಳು ಒಳಗೊಂಡಂತೆ ವಿವಿಧ ಮಾಹಿತಿಯಾಗಿ ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ನೊಂದಿಗೆ ಡಿಸ್‌ಪ್ಲೇ ಕನೆಕ್ಟ್ ಮಾಡಬಹುದು.

ಇತ್ತೀಚೆಗೆ ಬಿಡುಗಡೆಗೊಂಡ ಟಿವಿಎಸ್ ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಹೇಳುವುದಾದರೆ, ಇದು ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 4.44 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 140 ಕಿಮೀ ರೇಂಜ್ ನೀಡುತ್ತದೆ. ಗಂಟೆಗೆ 105 ಕಿಮೀ ಟಾಪ್ ಸ್ವೀಡ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, September 4, 2023, 10:45 [IST]
English summary
Tvs sales growth 5 august iqube records highest details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+