ಓಲಾ, ಎಥರ್‌ಗೆ ನಿದ್ದೆಗೆಡಿಸಲು ಬಿಡುಗಡೆಯಾದ ಹೊಸ TVS X ಇವಿ ಸ್ಕೂಟರ್ ವಿಶೇಷತೆಗಳು!

ಟಿವಿಎಸ್ ಮೋಟಾರ್ ಕಂಪನಿ ಐಕ್ಯೂಬ್ ನಂತರ ಇವಿ ಮಾರುಕಟ್ಟೆಯಲ್ಲಿ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಟಿವಿಎಸ್ ಮೋಟಾರ್ ಇದಕ್ಕೆ X ಎಂಬ ಹೆಸರನ್ನು ನೀಡಿದ್ದು, ಇದು ಐಕ್ಯೂಬ್‌ಗಿಂತ ಹೆಚ್ಚಿನ ಸಾಮರ್ಥ್ಯ, ವೈಶಿಷ್ಟ್ಯಗಳನ್ನು ಪಡೆದಿದೆ. ಹಾಗಾದ್ರೆ ಇದರ ಟಾಪ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಹೇಗಿದೆ ಪರ್ಫಾಮೆನ್ಸ್: ಟಿವಿಎಸ್ ಎಕ್ಸ್ ಕೇವಲ 2.6 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಸಾಧಿಸಬಲ್ಲದು, ಹಾಗೆಯೇ 60 ಕಿ.ಮೀ ವೇಗವನ್ನು ಕೇವಲ 4.5 ಸೆಕೆಂಡುಗಳಲ್ಲಿ ತಲುಪಬಲ್ಲದು. ಇದರ ಟಾಪ್ ಸ್ಪೀಡ್ ಗಂಟೆಗೆ 105 ಕಿ.ಮೀ ಇರುವುದಾಗಿ ಕಂಪನಿ ತಿಳಿಸಿದೆ. ಕಂಪನಿಯು 3 ಗಂಟೆ 40 ನಿಮಿಷಗಳಲ್ಲಿ ಸ್ಕೂಟರ್ ಅನ್ನು ಶೇ 80 ರಷ್ಟು ಚಾರ್ಜ್ ಮಾಡಬಹುದು ಎಂದು ಹೇಳಿಕೊಂಡಿದೆ.

tvs-x-electric-scooter-top-things-to-know

ಹೇಗಿದೆ ಬ್ಯಾಟರಿ ಪವರ್?: TVS X 4.44 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 140 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇನ್ನು ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ 11 kW (14.7 bhp) ಮೋಟಾರ್ ಜೊತೆಗೆ 7 kW (9.3 bhp) ನ ಪವರ್ ಉತ್ಪಾದನೆಯೊಂದಿಗೆ ಮಿಡ್-ಡ್ರೈವ್ ಮೋಟರ್ ಅನ್ನು ಪಡೆದಿದೆ.

ಹೊಸದೇನಿದೆ: ಹೊಸ TVS X ಹೊಸದಾಗಿ ಅಭಿವೃದ್ಧಿಪಡಿಸಿದ Xleton ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಅಂದರೆ ಇದು ಇತರ ಸಾಮಾನ್ಯ ಸ್ಕೂಟರ್‌ಗಳಿಗಿಂತ 2.5 ಪಟ್ಟು ಗಟ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ವಿಶಾಲವಾದ ಸೀಟ್‌ಗಳು ಸವಾರನಿಗೆ ಮಾತ್ರವಲ್ಲದೆ ಹಿಂಬದಿ ಕುಳಿತವರಿಗೂ ಆರಾಮವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

tvs-x-electric-scooter-top-things-to-know

ಇನ್ನು ಇದರ ಬೂಟ್‌ ನೋಡಿಕೊಂಡರೆ ಸಾಮಾನ್ಯ ಸ್ಕೂಟರ್‌ಗಳಷ್ಟೇ ಜಾಗವನ್ನು ನೀಡಿದ್ದು, ಸೀಟಿನ ಕೆಳಗೆ ಯೋಗ್ಯವಾದ 19 ಲೀಟರ್ ಸಂಗ್ರಹಣೆಗೆ ಅನುವು ಮಾಡಿಕೊಡಲಾಗಿದೆ. ಉಳಿದಂತೆ ಸ್ಕೂಟರ್ Xtealth, Xtride ಮತ್ತು Xonic ಎಂಬ ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬರಲಿದ್ದು, ಆಯ್ಕೆ ಮಾಡಬಹುದಾದ ಪುನರುತ್ಪಾದಕ ಬ್ರೇಕಿಂಗ್ ಅನ್ನು (ರೀಜೆನ್ ಬ್ರೇಕಿಂಗ್) ಕೂಡ ಪಡೆದಿದೆ.

ಅದ್ಬುತ ವೈಶಿಷ್ಟ್ಯಗಳು: ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ TVS ಸ್ಮಾರ್ಟ್ Xhield ಅನ್ನು ಹೊಂದಿದ್ದು, ಇದು ವೇಗದ ಮಿತಿ, ಅತಿವೇಗದ ಎಚ್ಚರಿಕೆ, ಕ್ರಾಷ್ ಡಿಟೆಕ್ಷನ್ (ಅಪಘಾತ ಪತ್ತೆ), ಜಿಯೋಫೆನ್ಸಿಂಗ್, ಟೋವಿಂಗ್ ಎಚ್ಚರಿಕೆ, ಆಟೋ-ಲಾಕಿಂಗ್ ಒಳಗೊಂಡಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಇದರ ಇನ್ಫೋಟೈನ್‌ಮೆಂಟ್ ಸಿಸ್ಟಂ ಕಸ್ಟಮೈಸ್ ಮಾಡಬಹುದಾಗಿದೆ.

tvs-x-electric-scooter-top-things-to-know

ಕಂಪನಿಯು ಆಂತರಿಕವಾಗಿ ಅಭಿವೃದ್ಧಿಪಡಿಸಿದ NavPro ಎಂಬ ಹೊಸ ತಲೆಮಾರಿನ SmartXonnect ಪ್ಲಾಟ್‌ಫಾರ್ಮ್‌ ಅನ್ನು ಇದಕ್ಕಾಗಿ ಪರಿಚಯಿಸಿದೆ. ಇದು 10.25-ಇಂಚಿನ HD ಟಿಲ್ಟ್ ಸ್ಕ್ರೀನ್ ಸೆಟಪ್‌ನೊಂದಿಗೆ ಬರಲಿದ್ದು, ಇನ್ಫೋಟೈನ್‌ಮೆಂಟ್ ಸಿಸ್ಟಮ್ ನ್ಯಾವಿಗೇಷನ್, ಗೇಮ್‌ಗಳು, ಸಂಗೀತ ಸೇರಿದಂತೆ ಹಲವು ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಟಿವಿಎಸ್ X ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 2.50 ಲಕ್ಷ (ಎಕ್ಸ್ ಶೋರೂಂ) ಇದೆ. ಮೊದಲ 2,000 ಗ್ರಾಹಕರಿಗೆ ಹೆಚ್ಚುವರಿ ರೂ. 18,000 ಮೊದಲ ಆವೃತ್ತಿಯ ಪ್ಯಾಕೇಜ್ ಲಭ್ಯವಿರುತ್ತದೆ. TVS X ಗಾಗಿ ಬುಕಿಂಗ್‌ಗಳು ಆಗಸ್ಟ್ 24 ರಂದು ಮಧ್ಯರಾತ್ರಿ ಪ್ರಾರಂಭವಾಗಲಿದ್ದು, ವಿತರಣೆಗಳು ನವೆಂಬರ್‌ನಿಂದ ಪ್ರಾರಂಭವಾಗುತ್ತವೆ. ಇದು iQube ನಂತರ ಕಂಪನಿಯ ಎರಡನೇ ಎಲೆಕ್ಟ್ರಿಕ್ ಕೊಡುಗೆಯಾಗಿದ್ದು, ಹೆಚ್ಚು ಪ್ರೀಮಿಯಂ ಹಾಗೂ ಪವರ್ ಮತ್ತು ತಂತ್ರಜ್ಞಾನದಲ್ಲಿ ಐಕ್ಯೂಬ್‌ಗಿಂತ ದೊಡ್ಡದಾಗಿದೆ.

tvs-x-electric-scooter-top-things-to-know

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Thursday, August 24, 2023, 16:04 [IST]
English summary
Tvs x electric scooter top things to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+