Ultraviolette F77: ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಚಂದ್ರಯಾನ-3ಕ್ಕೆ ಅರ್ಪಣೆ

ಅಲ್ಟ್ರಾವೈಲೆಟ್ (Ultraviolette) ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಇಂದು ಎಫ್77 ಸ್ಪೇಸ್ ಎಡಿಷನ್ (F77 Space Edition) ಇ - ಬೈಕ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಾದರಿಯನ್ನು ಚಂದ್ರಯಾನ-3ಕ್ಕೆ ಅರ್ಪಣೆ ಮಾಡಿರುವುದಾಗಿ ಕಂಪನಿ ಘೋಷಣೆ ಮಾಡಿದೆ.

ಸಾಮಾನ್ಯ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್‌ಗಿಂತ ಹೊಚ್ಚ ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಕೊಂಚ ಅತ್ಯಾಧುನಿಕ ವಿನ್ಯಾಸ ಹೊಂದಿರುವುದರಿಂದ ಹೆಚ್ಚಿನ ಬೆಲೆಯನ್ನು ಪಡೆದಿದೆ. ರೂ.5.60 ಲಕ್ಷ (ಎಕ್ಸ್ - ಶೋರೂಂ) ದರಕ್ಕೆ ಖರೀದಿಗೆ ಲಭ್ಯವಿದೆ. ನಾಳೆಯಿಂದ (ಆಗಸ್ಟ್ 22) ಈ ಮೋಟಾರ್‌ಸೈಕಲ್ ಬುಕ್ಕಿಂಗ್ ಆರಂಭವಾಗಲಿದ್ದು, ಕಂಪನಿಯು ಕೇವಲ 10 ಯುನಿಟ್ ಗಳನ್ನು ಮಾತ್ರ ಉತ್ಪಾದಿಸಲಿದೆ.

Ultraviolette F77: ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಚಂದ್ರಯಾನ-3ಕ್ಕೆ ಅರ್ಪಣೆ

ನೂತನ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಡಿಸೈನ್ ಕುರಿತು ಮಾತನಾಡುವುದಾದರೆ, ಇದು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಪ್ರಮುಖವಾಗಿ ಅತ್ಯಾಧುನಿಕ ವಿಮಾನಗಳಲ್ಲಿ ಬಳಕೆ ಮಾಡುವ ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ಸ್ ಹಾಗೂ ಟೆಕ್ನಲಾಜಿಯನ್ನು ಪಡೆದಿದೆ. ಇದರಲ್ಲಿ ಏರೋಸ್ಪೇಸ್ - ಗ್ರೇಡ್ ಅಲ್ಯೂಮಿನಿಯಂನ್ನು ಕೂಡ ಉಪಯೋಗಿಸಲಾಗಿದೆ. ಈ ಕಾರಣಕ್ಕೆ 'ಎಫ್77 ಸ್ಪೇಸ್ ಎಡಿಷನ್' ಬೈಕ್ ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ.

ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಇ-ಬೈಕ್ ಸಂಪೂರ್ಣ ಚಾರ್ಜಿನಲ್ಲಿ 307 km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 39.94 bhp ಗರಿಷ್ಠ ಪವರ್ ಹಾಗೂ 100 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಈ ಬೈಕ್, ಕೇವಲ 2.9 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಹೊಂದಲಿದ್ದು, 152 kmph ಟಾಪ್ ಸ್ವೀಡ್ ಒಳಗೊಂಡಿದೆ.

Ultraviolette F77: ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಚಂದ್ರಯಾನ-3ಕ್ಕೆ ಅರ್ಪಣೆ

ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಲಾಂಚ್ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ನಾರಾಯಣ ಸುಬ್ರಮಣ್ಯಂ ಅವರು, 'ನಾವು ಆಧುನಿಕ ಕಾಲಘಟಕ್ಕೆ ತಕ್ಕಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಆವಿಷ್ಕಾರಗಳನ್ನು ಮಾಡುತ್ತವೆ. ಅದಕ್ಕೆ ಈ ನೂತನ ಎಲೆಕ್ಟ್ರಿಕ್ ಬೈಕ್ ಉತ್ತಮ ನಿದರ್ಶನವಾಗಿದೆ. ಈ ಮೋಟಾರ್‌ಸೈಕಲ್, ವಿಮಾನದಂತೆ ಗುಣಲಕ್ಷಣ ಹಾಗೂ ವಿನ್ಯಾಸವನ್ನು ಹೊಂದಿದೆ' ಎಂದು ಅವರು ಹೇಳಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್, ರೂ.3.8 ಲಕ್ಷ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇದರ ಪ್ರೀಮಿಯಂ ಮಾದರಿ ಎಫ್77 ರೆಕಾನ್ ರೂ.4.55 ಲಕ್ಷ (ಎಕ್ಸ್ ಶೋರೂಂ) ದರಕ್ಕೆ ಸಿಗುತ್ತದೆ. ಇದರಲ್ಲಿ ಬಳಕೆ ಮಾಡಿರುವ PMS ಮೋಟಾರ್, 38.8 bhp ಪವರ್, 95 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 147 km/h ಟಾಪ್ ಸ್ವೀಡ್ ಹೊಂದಿದೆ.

Ultraviolette F77: ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಚಂದ್ರಯಾನ-3ಕ್ಕೆ ಅರ್ಪಣೆ

ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಬೈಕ್ 7.1 kWh ಮತ್ತು 10.3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗಲಿದ್ದು, ಅದರ ಅನ್ವಯ ಸಂಪೂರ್ಣ ಚಾರ್ಜಿನಲ್ಲಿ 206 km ರಿಂದ 307 km ರೇಂಜ್ ಕೊಡುತ್ತದೆ. ಇದರೊಟ್ಟಿಗೆ 5 ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್‌, LED ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಅಲ್ಟ್ರಾವೈಲೆಟ್ ಎಫ್77 ಇ ಮೋಟಾರ್ ಸೈಕಲ್, ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಎಂಬ ಮೂರು ರೈಡಿಂಗ್ ಮೋಡ್ ಪಡೆದಿದ್ದು, ಫ್ರಂಟ್ USD ಫೋರ್ಕ್‌, ರೇರ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಜೊತೆಗೆ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಈ ಬೈಕ್, 35 km ರೇಂಜ್ ಕೊಡುವಷ್ಟು ಚಾರ್ಜ್ ಆಗಲು 1 ಗಂಟೆ ತೆಗೆದುಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, August 21, 2023, 18:19 [IST]
English summary
Ultraviolette launches f77 space edition tribute chandrayaan 3 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+