Hero Glamour: ಕಡಿಮೆ ಬೆಲೆಗೆ ನವೀಕರಿಸಿದ ಹೀರೋ ಗ್ಲಾಮರ್ 125 ಬೈಕ್ ಬರಲಿದೆ, ವಿಶೇಷತೆಗಳೇನು?

ಹೀರೋ ಮೋಟೊಕಾರ್ಪ್ (Hero MotoCorp), ಭಾರತದಲ್ಲಿ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಹಬ್ಬದ ಋತುವಿನಲ್ಲಿ ದೇಶೀಯ ಪ್ರಯಾಣಿಕ ಮೋಟಾರ್ ಸೈಕಲ್ ವಿಭಾಗದಲ್ಲಿ ಅತ್ಯಾಧುನಿಕವಾಗಿ ನವೀಕರಣಗೊಂಡಿರುವ ಗ್ಲಾಮರ್ 125 ಬೈಕ್ ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸುತ್ತಿದೆ.

ಮುಂಬರುವ ವಾರಗಳಲ್ಲಿ ಹೊಸ ಹೀರೋ ಗ್ಲಾಮರ್ 125 ಬೈಕ್ ದರಗಳು ಘೋಷಣೆಯಾಗುವ ಸಾಧ್ಯತೆಯಿದೆ. ಇಂಟರ್ನೆಟ್ ನಲ್ಲಿ ಸೋರಿಕೆಯಾಗಿರುವ ನೂತನ ಬೈಕ್ ಚಿತ್ರಗಳನ್ನು ಗಮನಿಸಿದಾಗ ಬಹುತೇಕ ಹಿಂದಿನ ಮಾದರಿ ವಿನ್ಯಾಸಕ್ಕೆ ಹೋಲಿಕೆಯಾಗುತ್ತದೆ. ನವೀಕರಣದೊಂದಿಗೆ ಬರಲಿರುವ ಹೀರೋ ಗ್ಲಾಮರ್ 125 ಕೊಂಚ ಬೆಲೆ ಏರಿಕೆಯನ್ನು ಪಡೆದುಕೊಂಡಿರಬಹುದು. ಸದ್ಯ, ಗ್ಲಾಮರ್ ಆರು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ.

Hero Glamour: ಕಡಿಮೆ ಬೆಲೆಗೆ ನವೀಕರಿಸಿದ ಹೀರೋ ಗ್ಲಾಮರ್ 125 ಬೈಕ್ ಬರಲಿದೆ, ವಿಶೇಷತೆಗಳೇನು?

ರೂ.83,000 ದಿಂದ ರೂ.87,000 ಎಕ್ಸ್ ಶೋರೂಂ ಬೆಲೆಯಲ್ಲಿ ಈ ಬೈಕ್ ಸಿಗಲಿದೆ. ನವೀಕರಿಸಿದ ಹೀರೋ ಗ್ಲಾಮರ್ 125 BSVI ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿದ ಎಂಜಿನ್ ಹೊಂದಿರಲಿದೆ. ಇದರ, 124.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ 7,500 rpmನಲ್ಲಿ 10.72 bhp ಗರಿಷ್ಠ ಪವರ್, 6,000 rpmನಲ್ಲಿ 10.6 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ನೂತನ ಹೀರೋ ಗ್ಲಾಮರ್ 125 ಬೈಕ್, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಬಹುದು. ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡ ಚಿತ್ರಗಳನ್ನು ನೋಡಿದಾಗ, ನವೀಕರಣಗೊಂಡಿರುವ ಈ ಬೈಕ್ ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಸಿಂಗಲ್ ಪೀಸ್ ಬ್ಲ್ಯಾಕ್ ಫಿನಿಶ್ಡ್ ಸೀಟ್, ಸಿಂಗಲ್ ಪೀಸ್ ಗ್ರಾಬ್ ರೈಲ್ ಅನ್ನು ಹೊಂದಿದ್ದು, ಸ್ಪೋರ್ಟಿ ಲುಕ್ ಗಾಗಿ ಆಕರ್ಷಕ ಫ್ಯುಯೆಲ್ ಟ್ಯಾಂಕ್ ಪಡೆದಿದೆ.

Hero Glamour: ಕಡಿಮೆ ಬೆಲೆಗೆ ನವೀಕರಿಸಿದ ಹೀರೋ ಗ್ಲಾಮರ್ 125 ಬೈಕ್ ಬರಲಿದೆ, ವಿಶೇಷತೆಗಳೇನು?

ಇದರೊಟ್ಟಿಗೆ ಅತ್ಯಾಧುನಿಕ ಹೆಡ್‌ಲ್ಯಾಂಪ್, ಹ್ಯಾಲೊಜೆನ್ ಟರ್ನ್ ಇಂಡಿಕೇಟರ್, ಫ್ರಂಟ್ ಹಾಗೂ ರೇರ್ ಬ್ಲ್ಯಾಕ್ ಫಿನಿಶ್ಡ್ ಅಲಾಯ್ ವೀಲ್ಸ್ ಒಳಗೊಂಡಿದೆ. ಜೊತೆಯಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಮೌಂಟೆಡ್ ಬ್ಲಾಕ್ ಫಿನಿಶ್ಡ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಹೀಟ್ ಶೀಲ್ಡ್ ಹೊಂದಿದೆ. CBS (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಫ್ರಂಟ್ ಡಿಸ್ಕ್, ರೇರ್, ಡ್ರಮ್ ಬೈಕ್ ಆಯ್ಕೆಯನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಡ್ಯುಯಲ್ ಶಾಕ್ ಅಬ್ಸಾರ್ಬರ್ಸ್ ಅನ್ನು ಹೊಂದಿದೆ. ನವೀಕರಿಸಿದ ಹೀರೋ ಗ್ಲಾಮರ್ 125 ಪ್ರಯಾಣಿಕ ಬೈಕ್ ಆಗಿದ್ದು, ಅಗ್ಗದ ಬೆಲೆಗೆ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಇಷ್ಟವಾಗಬಹುದು. ಎಲ್ಲ ಅಂದುಕೊಂಡಂತೆ ಆದ್ರೆ, ಹಬ್ಬದ ಋತುವಿನ ವೇಳೆಗೆ ಈ ಬೈಕ್, ಗ್ರಾಹಕರ ಕೈಸೇರಲಿದೆ.

ಹೀರೋ ಕಂಪನಿ, ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ 'Xtreme 200ಎಸ್ 4ವಿ' ಬೈಕ್ ಅನ್ನು ರೂ. 1.41 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್, 199.6 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೋಲ್ಡ್ ಎಂಜಿನ್ ಹೊಂದಿದ್ದು, 19.1 hp ಗರಿಷ್ಠ ಪವರ್ ಹಾಗೂ 17.35 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಹೀರೋ Xtreme 200ಎಸ್ 4ವಿ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ & ನೋಟಿಫಿಕೇಶನ್ ಅಲರ್ಟ್, ಬ್ಲೂಟೂತ್ ಕನೆಕ್ಟ್ದ್ LCD ಡಿಸ್ಪ್ಲೇ, ಸ್ಪ್ಲಿಟ್ ಕ್ಲಿಪ್ ಆನ್ ಹ್ಯಾಂಡಲ್‌ಬಾರ್‌, LED ಹೆಡ್‌ಲೈಟ್‌ ಅನ್ನು ಹೊಂದಿದೆ. ಮೂನ್ ಯೆಲ್ಲೋ, ಪ್ಯಾಂಥರ್ ಬ್ಲ್ಯಾಕ್ ಮೆಟಾಲಿಕ್ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಹೀರೋ Xtreme 200ಎಸ್ 4ವಿ ಬೈಕ್, 155 ಕೆಜಿ ತೂಕವಿದ್ದು, 17 ಇಂಚಿನ ಅಲಾಯ್ ವೀಲ್ಸ್ ಹಾಗೂ ಟ್ಯೂಬ್ ಲೆಸ್ ಟೈಯರ್ಸ್ ಅನ್ನು ಪಡೆದಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಸಸ್ಪೆನ್ಷನ್ ಸೆಟಪ್ ವಿಚಾರವಾಗಿ ಮಾತನಾಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಮೊನೊಶಾಕ್ ಸೆಟಪ್ ಹೊಂದಿದೆ. ಈ ಬೈಕ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ.

Source: Team BHP

More from DriveSpark

Article Published On: Wednesday, August 2, 2023, 17:26 [IST]
English summary
Updated hero glamour 125 launch india soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+