Vegh S60: ಕಡಿಮೆ ಬೆಲೆಗೆ ಹೈಸ್ಪೀಡ್ 'ವೇಗ್ ಎಸ್60' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ವಿಶೇಷತೆಗಳೇನು?
ದೇಶದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಅದರಲ್ಲೂ ಓಲಾ, ಟಿವಿಎಸ್, ಎಥರ್ ಹಾಗೂ ಬಜಾಜ್ ಇ-ಸ್ಕೂಟರ್‌ಗಳನ್ನು ಅಧಿಕ ಜನರು ಕೊಂಡುಕೊಳ್ಳುತ್ತಿದ್ದಾರೆ. ಇದೀಗ ವೇಗ್ ಆಟೋಮೊಬೈಲ್ (Vegh Automobiles) ಹೊಸ ಸೇರ್ಪಡೆಯಾಗಿದೆ.
ಇವಿ ಇಂಡಿಯಾ ಎಕ್ಸ್‌ಪೋ (EV India Expo) 2023ದಲ್ಲಿ ವೇಗ್ ಆಟೋಮೊಬೈಲ್ ಕಂಪನಿ ತನ್ನ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್, ಎಸ್60 (S60) ಬಿಡುಗಡೆಗೊಳಿಸಿದೆ. ಇದು ರೂ.1.25 ಲಕ್ಷ (ಎಲ್ಲ ತೆರಿಗೆ ಒಳಗೊಂಡು) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯ ಅಧಿಕೃತ ಡೀಲರ್‌ಶಿಪ್ ಗೆ ಭೇಟಿ ನೀಡಿ, ಆಸಕ್ತ ಗ್ರಾಹಕರು ಕೊಂಡುಕೊಳ್ಳಬಹುದು. ಕೆಲವೇ ದಿನಗಳಲ್ಲಿ ನವೀಕರಿಸಿದ ಎಸ್60 ಇ-ಸ್ಕೂಟರ್ ಲಾಂಚ್ ಮಾಡಲಿದೆ.

ನೂತನ ವೇಗ್ ಎಸ್60 ಎಲೆಕ್ಟ್ರಿಕ್ ಸ್ಕೂಟರ್, ಮ್ಯಾಟ್ ಬ್ಲಾಕ್, ಲೈಟ್ ಗ್ರೇ, ವೈಟ್ ಹಾಗೂ ಲೈಟ್ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇದು, AIS156 ಸ್ಟೇಜ್ 2 ಪ್ರಮಾಣೀಕೃತ 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಹೈಸ್ವೀಡ್ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವುದರಿಂದ ಸಂಪೂರ್ಣ ಚಾರ್ಜ್ ನಲ್ಲಿ 120 ಕಿ.ಮೀಗೂ ಹೆಚ್ಚಿನ ರೇಂಜ್ ನೀಡುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 2.5 kW ಸಾಮರ್ಥ್ಯದ ಪೀಕ್ ಮೋಟಾರ್ ಬಳಕೆ ಮಾಡಲಾಗಿದ್ದು, 75 kmph ಟಾಪ್ ಸ್ವೀಡ್ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ವೇಗ್ ಎಸ್60 ಇ-ಸ್ಕೂಟರ್ 4 - 5 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಜೊತೆಗೆ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ರೆಟ್ರೋ ಲುಕ್ ಹೊಂದಿದೆ.

ಹೊಸ ವೇಗ್ ಎಸ್60 ಎಲೆಕ್ಟ್ರಿಕ್ ಸ್ಕೂಟರ್, ಡಿಜಿಟಲ್ ಡಿಸ್ಪ್ಲೇ, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್, ನಗರ ಪ್ರದೇಶದ ಸಂಚಾರಕ್ಕೆ ಸೂಕ್ತವಾಗುವಂತೆ ಮೂರು ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ದೊಡ್ಡದಾದ ಸೀಟ್ ಪಡೆದಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಹೈಡ್ರಾಲಿಕ್ ಸೆಟಪ್ ಒಳಗೊಂಡಿದೆ. ಇದರೊಂದಿಗಿರುವ ವಿವಿಧ ಫೀಚರ್ಸ್ ಖರೀದಿದಾರರನ್ನು ಸೆಳೆಯುತ್ತಿವೆ.
ಗ್ರೇಟರ್ ನೋಯ್ಡಾದಲ್ಲಿ ನಡೆದ ಇದೇ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಎಲೆಕ್ಟ್ರಾನಿಕ್ಸ್ ದೈತ್ಯ 'ಏಸರ್', ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಮೂವಿ-125-4ಜಿ ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಯನ್ನು ಹೊಂದಿದೆ. 48V 35.2Ah ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 80 ಕಿಲೋಮೀಟರ್ ರೇಂಜ್ ನೀಡುತ್ತದೆ. 75 kmph ಟಾಪ್ ಸ್ವೀಡ್ ಪಡೆದಿದೆ.

ಮನೆ ವಿದ್ಯುತ್ ಬಳಕೆಯಲ್ಲಿ ಮೂವಿ-125-4ಜಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್, ಕೆಲವೇ ನಾಲ್ಕು ಗಂಟೆಯಲ್ಲಿ ಚಾರ್ಜ್ ಆಗುತ್ತದೆ. 16 - ಇಂಚಿನ ವೀಲ್ಸ್ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ, ಬ್ಲೂಟೂತ್ ಸಂಪರ್ಕಿತ 4-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ. ಆದರೆ, ಕಂಪನಿಯು ಈ ಸ್ಕೂಟರ್ ಬೆಲೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.
ಇನ್ನು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಬಿಡುಗಡೆಗೊಳಿಸುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಗಮನಿಸಿದರೆ, ಹೆಚ್ಚಿನ ಗ್ರಾಹಕರು ಇ-ಸ್ಕೂಟರ್/ ಬೈಕ್ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ ಎಂದು ಸುಲಭವಾಗಿ ಹೇಳಬಹುದು. ಜೊತೆಗೆ ಬೇಡಿಕೆ ಹೆಚ್ಚಳಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು, ಆಕರ್ಷಕ ವೈಶಿಷ್ಟ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಲಾಂಚ್ ಮಾಡುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








