ಇದ್ದಕ್ಕಿದ್ದಂತೆ ಮೈಲೇಜ್ ಕಡಿಮೆಯಾದ್ರೆ ಈ ಗುಂಡಿಯೇ ಕಾರಣ... ಬಹುತೇಕರಿಗೆ ಇದರ ಬಳಕೆಯೇ ಗೊತ್ತಿಲ್ಲ!

ಭಾರತದಲ್ಲಿ ದ್ವಿಚಕ್ರ ವಾಹನಗಳಿಲ್ಲದೇ ಅದಷ್ಟೋ ಮಂದಿಗೆ ದಿನ ಕಳೆಯುವುದಿಲ್ಲ. ದ್ವಿಚಕ್ರ ವಾಹನಗಳನ್ನು ನಂಬಿಕೊಂಡು ನಿತ್ಯ ಕೆಲಸ ಮಾಡಿ ಸಂಪಾದನೆ ಮಾಡುವವರೂ ಇದ್ದಾರೆ. ಇವರೆಲ್ಲರಿಗೂ ಒಂದಾನೊಂದು ಸಂದರ್ಭದಲ್ಲಿ ಮೈಲೇಜ್ ಸಮಸ್ಯೆ ಖಂಡಿತ ಕಾಡಿರುತ್ತದೆ. ಇದಕ್ಕೆ ಮುಖ್ಯ ಕಾರಣವನ್ನು ಇಲ್ಲಿ ತಿಳಿದುಕೊಳ್ಳೋಣ.

ಮೊದಲಿಗೆ ಭಾರತದಲ್ಲಿನ ಇತ್ತೀಚಿಗಿನ ಬೈಕ್‌ಗಳನ್ನು ಇಲ್ಲಿ ಹೇಳುತ್ತಿಲ್ಲ, ಏಕೆಂದರೆ ಅವು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡು ಬರುತ್ತವೆ. ಈಗಿನ ಬೈಕ್‌ಗಳು ಹಾನಿಗೊಳಗಾಗುವುದು ತೀರಾ ಕಡಿಮೆ, ಜೊತೆಗೆ ನಿರ್ವಹಣೆ ಕೂಡ ತುಂಬಾ ಸುಲಭವಾಗಿದೆ. ಆದರೆ ಇಂದಿಗೂ ಹಳೆಯ ದ್ವಿಚಕ್ರ ವಾಹನಗಳನ್ನು ಓಡಿಸುವ ಅನೇಕ ಜನರಿದ್ದಾರೆ. ಇವರಲ್ಲಿ ಬಹುತೇಕರು ಇಂಧನ ಉಳಿಸಲು ಬಯಸುವವರಿದ್ದಾರೆ.

mileage suddenly decreases

ಆದ್ರೆ ಇವರಿಗೆ ತಮ್ಮ ಬೈಕ್ ಇದ್ದಕ್ಕಿದ್ದಂತೆ ಮೈಲೇಜ್ ಕಡಿಮೆ ನೀಡುತ್ತಿರುವ ಅನುಭವ ಒಮ್ಮೆಯಾದ್ರೂ ಆಗಿರುತ್ತದೆ ಅಲ್ಲವೇ? ಹೋಗಲಿ ಬಿಡಿ, ಮೈಲೇಜ್ ಕಡಿಮೆಯಾಗಿದೆ ಸರಿ, ಆದ್ರೆ ಪವರ್ ಕೂಡ ಕಡಿಮೆಯಾದ್ರೆ ಕಂಡಿತ ನಿಮಗೆ ಭಯವಾಗುತ್ತದೆ. ವಾಹನಕ್ಕೆ ಏನೋ ಸಮಸ್ಯೆ ಆಗಿದೆ ಎಂಬ ಅನುಮಾನ ಕಾಡತೊಡಗುತ್ತದೆ. ವಾಸ್ತವವಾಗಿ ಇದು ಬೈಕ್‌ನ ಲಿವರ್ ನಿಂದಾಗಿ ಹೀಗಾಗುತ್ತದೆ.

ಯಾರಾದರೂ ಅದನ್ನು ತಿರುಗಿಸಿದರೆ, ಬೈಕಿನ ಮೈಲೇಜ್ ಕಡಿಮೆಯಾಗುತ್ತದೆ. ಇದರ ಬಗ್ಗೆ ತಿಳಿದವರೂ ಕೂಡ ಕೆಲವೊಮ್ಮೆ ಅದನ್ನು ಪರಿಶೀಲಿಸಿದೆ ವಾಹನ ಚಲಾಯಿಸಿ ಮೈಲೇಜ್ ಕಡಿಮೆಯಾಗಿದೆ ಎಂದು ಚಿಂತಿಸುತ್ತಾರೆ. ಇದರ ಬಗ್ಗೆ ತಿಳಿದವರಿಗಿಂತ ತಿಳಿಯದವರೇ ಹೆಚ್ಚು. ಈ ಲಿವರ್ ಅಂದ್ರೆ ಬೈಕ್‌ನ ಚೋಕ್ ಆಗಿದೆ. ಎಂಜಿನ್ ತುಂಬಾ ತಂಪಾದಾಗ ಅಥವಾ ಸ್ಟಾರ್ಟಿಂಗ್ ಸಮಸ್ಯೆ ಇದ್ದಾಗ ಇದನ್ನು ಬಳಸಲಾಗುತ್ತದೆ.

mileage suddenly decreases

ಬೈಕ್‌ಗಳನ್ನು ಓಡಿಸುವ ಅನೇಕರಿಗೆ ಇದರ ಸರಿಯಾದ ಬಳಕೆ ತಿಳಿದಿಲ್ಲ. ಹಾಗಾದ್ರೆ ಬೈಕ್ ಚೋಕ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಸರಿಯಾದ ಬಳಕೆ ಏನು ಎಂಬುದನ್ನು ಇಲ್ಲಿ ನೋಡೊಣ. ಮೊದಲೇ ಹೇಳಿದಂತೆ ಇತ್ತಿಚಿನ ಬೈಕ್‌ಗಳಲ್ಲಿ ಆಧುನಿಕ ತಂತ್ರಜ್ಞಾನವಿದೆ. ಇವುಗಳಲ್ಲಿ ಎಂಜಿನ್‌ಗೆ ಪೆಟ್ರೋಲ್‌ ಪಂಪ್ ಮಾಡಲು ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಒದಗಿಸಲಾಗುತ್ತಿದೆ.

ಈ ಹೊಸ ಬೈಕ್‌ಗಳಲ್ಲಿನ ಈ ವಿಧಾನವು ಇಂಧನವನ್ನು ಸಹ ಉಳಿಸುತ್ತದೆ. ಆದ್ರೆ ಹಳೆಯ ಬೈಕ್‌ಗಳು ಹಾಗಲ್ಲ, ಕಾರ್ಬೋರೇಟರ್ ವ್ಯವಸ್ಥೆಯೊಂದಿಗೆ ಬರುತ್ತಿದ್ದವು. ಈ ಕಾರ್ಬೋರೇಟರ್ ಪೆಟ್ರೋಲ್ ಹಾಗೂ ಗಾಳಿಯನ್ನು ಒಟ್ಟಿಗೆ ಎಂಜಿನ್‌ಗೆ ಕಳುಹಿಸುವ ಮೂಲಕ ಎಂಜಿನ್‌ಗೆ ಪವರ್ ನೀಡುತ್ತಿತ್ತು. ಇಂತಹ ವ್ಯವಸ್ಥೆ ಹೊಂದಿರುವ ಬೈಕ್‌ಗಳಲ್ಲಿ ಸಾಮಾನ್ಯವಾಗಿ ಸ್ಟಾರ್ಟಿಂಗ್ ಸಮಸ್ಯೆ ಇರುತ್ತದೆ.

mileage suddenly decreases

ಇದಕ್ಕಾಗಿಯೇ ಹಳೆಯ ಬೈಕ್‌ಗಳಲ್ಲಿ ಚೋಕ್ ಅನ್ನು ನೀಡಲಾಗುತ್ತಿತ್ತು. ಅನೇಕ ಜನರು ಚೋಕ್ ಅನ್ನು ಬಳಸಿ ಬೈಕ್ ಸ್ಟಾರ್ಟ್ ಮಾಡಿದ ಬಳಿಕ ಅದನ್ನು ಆಫ್ ಮಾಡುವುದನ್ನು ಮರೆಯುತ್ತಾರೆ. ಇದೇ ನೋಡಿ ಮೂಲ ಸಮಸ್ಯೆ, ಚೋಕ್ ಅನ್ನು ಹಾಗೆಯೇ ಬಿಟ್ಟರೇ ಹೆಚ್ಚು ಇಂಧನವನ್ನು ಕುಡಿಯುತ್ತದೆ. ಆಗ ನಮಗೇ ತಿಳಿಯದಂತೆ ಮೈಲೇಜ್ ಕಡಿಮೆಯಾಗುತ್ತದೆ.

ಚೋಕ್ ಎಂಜಿನ್‌ಗೆ ಹೆಚ್ಚಿನ ಪೆಟ್ರೋಲ್ ಕಳುಹಿಸುತ್ತದೆ: ವಾಸ್ತವವಾಗಿ, ಬೈಕ್ ಸ್ಟಾರ್ಟ್ ಆಗದಿದ್ದರೆ ಎಂಜಿನ್‌ಗೆ ಹೆಚ್ಚಿನ ಇಂಧನ ಕಳುಹಿಸುವ ಮೂಲಕ ಸ್ಟಾರ್ಟ್‌ ಆಗುವಂತೆ ಮಾಡುವುದು ಚೋಕ್‌ನ ಕೆಲಸವಾಗಿದೆ. ಚೋಕ್ ಒತ್ತಿದ ತಕ್ಷಣ, ಕಾರ್ಬೋರೇಟರ್‌ಗೆ ಗಾಳಿಯ ಪೂರೈಕೆ ನಿಂತು ಹೆಚ್ಚಿನ ಇಂಧನ ಎಂಜಿನ್‌ಗೆ ಹೋಗುತ್ತದೆ. ಇದು ಇಗ್ನಿಷನ್‌ಗೆ ಸಾಕಷ್ಟು ಇಂಧನವನ್ನು ನೀಡುವುದರಿಂದ ಬೈಕ್ ಸ್ಟಾರ್ಟ್‌ ಆಗುತ್ತದೆ.

ತುಂಬಾ ಜನರು ಸ್ಟಾರ್ಟ್ ಆದ ಖುಷಿಯಲ್ಲಿ ಚೋಕ್ ಅನ್ನು ಹಾಗೆಯೇ ಬಿಟ್ಟು ಹೊರಟುಬಿಡುತ್ತಾರೆ. ಬೈಕ್ ಪ್ರಾರಂಭವಾದ ತಕ್ಷಣ, ಚೋಕ್ ಅನ್ನು ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದರೆ ಹೆಚ್ಚಿನ ಇಂಧನವು ಎಂಜಿನ್‌ಗೆ ಹೋಗಿ ಮೈಲೇಜ್ ಕಡಿಮೆಯಾಗುತ್ತದೆ. ಹಲವು ಬೈಕ್‌ಗಳಲ್ಲಿ ಹ್ಯಾಂಡಲ್ ಬಾರ್‌ನಲ್ಲಿ ಚೋಕ್ ಅನ್ನು ನೋಡಬಹುದು, ಇನ್ನು ಕೆಲವು ಬೈಕುಗಳಲ್ಲಿ ಇದು ಇಂಧನ ಟ್ಯಾಂಕ್ ಅಡಿಯಲ್ಲಿ ಇರುತ್ತದೆ.

More from DriveSpark

Article Published On: Wednesday, May 24, 2023, 14:50 [IST]
English summary
What is function of choke how does it reduce mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+