ಖಡಕ್ ಲುಕ್‌ನಲ್ಲಿ ಬಿಡುಗಡೆಯಾದ ಹೊಸ Yamaha R15 V4 ಡಾರ್ಕ್ ನೈಟ್ ಎಡಿಷನ್

ಯಮಹಾ ಕಂಪನಿಯು ತನ್ನ ಜನಪ್ರಿಯ ಮಾಡಲ್ ಆಗಿರುವ R15 V4 ಮಾದರಿಯನ್ನು ಈಗ ಆಕರ್ಷಕ ಪೇಂಟ್ ಸ್ಕೀಮ್‌ನಲ್ಲಿ ಬಿಡುಗಡೆ ಮಾಡಿದೆ. ಹೊಸ ಮಾದರಿಯು ಈಗ ಹೊಸ ಡಾರ್ಕ್ ನೈಟ್ ಆವೃತ್ತಿಯ ಪೇಂಟ್ ಸ್ಕೀಮ್‌ನೊಂದಿಗೆ ಬಂದಿದ್ದು, ರೂ. 1,81,900 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಡಾರ್ಕ್ ನೈಟ್ ಆವೃತ್ತಿಯ ಪೇಂಟ್ ಸ್ಕೀಮ್‌, ಕೆಂಪು ಬಣ್ಣದ ಮಾದರಿಗಿಂತ ದುಬಾರಿಯಾಗಿದ್ದರೇ ರೇಸಿಂಗ್ ಬ್ಲೂ ಮತ್ತು ಇಂಟೆನ್ಸಿಟಿ ವೈಟ್ ಪೇಂಟ್ ಆಯ್ಕೆಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ರೆಡ್ (ರೂ. 1.81 ಲಕ್ಷ), ಡಾರ್ಕ್ ನೈಟ್ (ರೂ. 1.82 ಲಕ್ಷ), ನೀಲಿ ಮತ್ತು 'ಇಂಟೆನ್ಸಿಟಿ ವೈಟ್' (ಎರಡೂ ರೂ. 1.86 ಲಕ್ಷ) ಇದೆ.

Yamaha R15 V4

ಹೊಸ ಡಾರ್ಕ್ ನೈಟ್ ಆವೃತ್ತಿಯ ಬಣ್ಣದ ವಿಷಯಕ್ಕೆ ಬಂದರೆ FZ ಮತ್ತು R15 V3 ನಲ್ಲಿ ಇದ್ದ ಹಾಗೆಯೇ ಅದೇ ಪೇಂಟ್ ಅಕ್ಸೆಂಟ್‌ಗಳೊಂದಿಗೆ ಬರುತ್ತದೆ. ವಿವರವಾಗಿ ಹೇಳುವುದಾದರೆ, FZ ಮತ್ತು R15 V3 ನಲ್ಲಿನ ಎಲ್ಲಾ ಇತರ ಡಾರ್ಕ್ ನೈಟ್ ಆವೃತ್ತಿಯ ಪೇಂಟ್ ಸ್ಕೀಮ್‌ಗಳಂತೆ, ಗೋಲ್ಡನ್ ಮುಖ್ಯಾಂಶಗಳೊಂದಿಗೆ ಮ್ಯಾಟ್ ಬ್ಲಾಕ್ ಬೇಸ್ ಪೇಂಟ್ ಅನ್ನು ಹೊಂದಿದೆ.

ಇದನ್ನು ಹೊರತುಪಡಿಸಿ ಬೈಕಿನಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿಲ್ಲ. ಮುಖ್ಯವಾಗಿ ಪವರ್‌ನಲ್ಲಿ ಯಾವುದದೇ ಬದಲಾವಣೆ ಇಲ್ಲ, ಅದೇ 18.1bhp ಮತ್ತು 14.2Nm ಅನ್ನು ಹೊರಹಾಕುವ 155cc, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಇದರ ಪವರ್‌ಫುಲ್ ಮೋಟಾರ್ ಅನ್ನು 6 ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಎಂದಿನಂತೆ ಅದೇ ಪರ್ಫಾಮನ್ಸ್ ಕಾಣಬಹುದು.

Yamaha R15 V4

ಹಳೆಯ R15 V4 ನೊಂದಿಗೆ ನೀಡಲಾಗುವ ಅದೇ ವೈಶಿಷ್ಟ್ಯಗಳನ್ನು ಹೊಸ ಮಾದರಿಯಲ್ಲೂ ನೀಡಲಾಗುತ್ತಿದೆ. ಟ್ರಾಕ್ಷನ್ ಕಂಟ್ರೋಲ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್, DRL ಗಳೊಂದಿಗೆ LED ಹೆಡ್‌ಲೈಟ್, ಬ್ಲೂಟೂತ್ ಸಂಪರ್ಕದೊಂದಿಗೆ ಸಂಪೂರ್ಣ-ಡಿಜಿಟಲ್ LCD ಇನ್ಸ್ಟ್ರೂಮೆಂಟ್ ಕನ್ಸೋಲ್, ರೈಡಿಂಗ್ ಮೋಡ್‌ಗಳು (ಟ್ರ್ಯಾಕ್, ಸ್ಟ್ರೀಟ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬ್ರೇಕಿಂಗ್ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್‌ನಿಂದ ಬರುತ್ತದೆ, ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಹಿಂಭಾಗದಲ್ಲಿ 220 ಎಂಎಂ ಡಿಸ್ಕ್‌ಗೆ ಜೋಡಿಸಲಾಗಿದೆ. ಇದರ ಪ್ರತಿಸ್ಪರ್ಧಿಗಳನ್ನು ನೋಡುವುದಾದರೆ, ಯಮಹಾ R15 V4 ಭಾರತದಲ್ಲಿ KTM RC 125 ಮತ್ತು RC200, ಸುಜುಕಿ Gixxer SF 250 ಮತ್ತು ಬಜಾಜ್ ಪಲ್ಸರ್ RS200 ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಹೋಗುತ್ತದೆ.

Yamaha R15 V4

ಭಾರತದಲ್ಲಿ R15 ಬಿಡುಗಡೆಯಾದಾಗಿನಿಂದಲೂ ಯಮಹಾಗೆ ಉತ್ತಮ ಮಾರಾಟವನ್ನು ತಂದುಕೊಟ್ಟಿದೆ. ಇದೇ ಕಾರಣದಿಂದಾಗಿ ಕಂಪನಿಯು ಈ ಮಾರಿಯ ಅಭಿಮಾನಿಗಳಿಗಾಗಿ R15 V4 ವರೆಗೆ ಹಲವು ನವೀಕರಣಗಳನ್ನು ಮಾಡಿ ಇಂದಿಗೂ ಮಾರುಕಟ್ಟೆಯಲ್ಲಿ ಇರಿಸಿದೆ. ಇದೀಗ ಬಿಡುಗಡೆಯಾಗಿರುವ ಹೊಸ R15 V4 ಡಾರ್ಕ್ ನೈಟ್ ಆವೃತ್ತಿಯ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Monday, May 22, 2023, 17:22 [IST]
English summary
Yamaha r15 v4 dark night edition launched
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+