ಭಾರತದಲ್ಲಿ ಭರ್ಜರಿ ಸೇಲ್: ಈ ಬೈಕನ್ನು ಲ್ಯಾಟೀನ್ ಅಮೇರಿಕಾಗೂ ಪರಿಚಯಿಸಿದ ಹೆಮ್ಮೆಯ ಬಜಾಜ್!
ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ಸ್ ನೀಡುವ ಮತ್ತು ಗ್ರಾಹಕರ ಬಜೆಟ್‌ಗೆ ಹೊಂದಿಕೊಳ್ಳುವ ಒಂದು ಬೈಕ್ ಎಂದರೆ ಅದು ಬಜಾಜ್‌ನ ಪಲ್ಸರ್ N160. ಮಾಡರ್ನ್ ಲುಕ್ ಮತ್ತು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿರುವ ಈ ಬೈಕ್ ಲಾಂಚ್ ಆದ ಕೆಲವೇ ಸಮಯದಲ್ಲಿ ಇದು ಭಾರತೀಯರ ಫೇವರಿಟ್ ಆಗಿದೆ.
ಇದೀಗ ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವುದರ ಜೊತೆಗೆ ಇದೀಗ ಲ್ಯಾಟೀನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹೊಸ ಕಲರ್ ಮತ್ತು ಉತ್ತಮ ಲುಕ್ ಜೊತೆ ಈ ಬೈಕ್ ಲ್ಯಾಟೀನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇಂದಿನ ಲೇಖನದಲ್ಲಿ ಈ ವಿಷಯದ ಕುರಿತಾಗಿ ನೋಡಲಿದ್ದು, ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

ಲ್ಯಾಟಿನ್ ಸ್ಪೆಕ್ ಬಜಾಜ್ ಪಲ್ಸರ್ N160 ಬಗ್ಗೆ ನೋಡುವುದಾದರೆ, ಭಾರತ ಬಿಟ್ಟು ಹೊರದೇಶದಲ್ಲಿ ಲ್ಯಾಟಿನ್ ಅಮೇರಿಕಾ ಮಾರುಕಟ್ಟೆ ಬಜಾಜ್‌ನ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಬಜಾಜ್ ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಬಜಾಜ್ ತನ್ನ ಪಲ್ಸರ್ N160 ಯನ್ನು ಮಾರಾಟ ಮಾಡಲು ಉದ್ದೇಶಿಸಿ, ಲಾಂಚ್ ಮಾಡಿದೆ. ಈ ಮಾರುಕಟ್ಟೆಯಲ್ಲಿ ಈಗಾಗಲೇ ಬಜಾಜ್ ತನ್ನ ಪ್ರಸಿದ್ದ ಬೈಕ್ ಮಾದರಿಯಾದ ಪಲ್ಸರ್ NS200 ಅನ್ನು ಮಾರಾಟ ಮಾಡುತ್ತಿದೆ.
ಇನ್ನು ಇಲ್ಲಿನ ಮಾರುಕಟ್ಟೆಯ ಮಾರಾಟದಲ್ಲಿ ಹೆಚ್ಚಿನ ಪರಿಣಾಮ ಬೀರುವ ಉದ್ದೇಶದಿಂದ ಬಜಾಜ್ ಇಲ್ಲಿ ಬೇರೆಯದೇ ಬಣ್ಣವನ್ನು ತರಲು ನಿರ್ಧರಿಸಿದ್ದು, ಡ್ಯುಯಲ್ ಟೋನ್ ಮಾದರಿಯಲ್ಲಿ ಈ ಬೈಕ್ ಅನ್ನು ಲ್ಯಾಟೀನ್ ಅಮೇರಿಕಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ. ಭಾರತೀಯ ಮಾರುಕಟ್ಟೆಯಲ್ಲಿ N160 (Bajaj Pulsar N160) ಬೈಕ್‌ಗೆ ನಾವು ಈ ಬಣ್ಣವನ್ನು ನೋಡಿಲ್ಲ ಎಂದೇ ಹೇಳಬಹುದು.

ಸದ್ಯ ಭಾರತದಲ್ಲಿರುವ N160 ಬಗ್ಗೆ ನೊಡುವುದಾದರೆ, ಹೊಸ ಅಪ್‌ಡೇಟ್ ಭಾಗವಾಗಿ ಬಜಾಜ್ ಪಲ್ಸರ್ N160 ನಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ LCD ಕ್ಲಸ್ಟರ್ ನೀಡಲಾಗಿದೆ. ಇದು ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಪ್ರಯಾಣದಲ್ಲಿರುವಾಗ ಈ ಇಂಟರ್ಫೇಸ್ ಮೂಲಕ ಕಾರ್ಯನಿರ್ವಹಿಸಲು ಎಡ ಸ್ವಿಚ್‌ಗಿಯರ್‌ನಲ್ಲಿ ಹೊಸ ಮೋಡ್ ಬಟನ್ ನೀಡಲಾಗಿದೆ.
ಬ್ಲೂಟೂತ್ ಸಂಪರ್ಕದ ಜೊತೆಗೆ, ಬಳಕೆದಾರರು ಈಗ ತಮ್ಮ ಸ್ಮಾರ್ಟ್‌ಫೋನ್ ಅನ್ನು ಪಲ್ಸರ್ N160 ನೊಂದಿಗೆ ಸಂಪರ್ಕಿಸಬಹುದು. ಈ ಮೂಲಕ ನೀವು ಪ್ರಯಾಣದಲ್ಲಿರುವಾಗ ಕರೆಗಳನ್ನು ಸ್ವೀಕರಿಸಬಹುದು, ಮೊಬೈಲ್ ನೋಟಿಫಿಕೇಷನ್ ಅಲರ್ಟ್, ಮೊಬೈಲ್ ಸಿಗ್ನಲ್ ಸ್ಟ್ರೆಂತ್ ಮತ್ತು ಬ್ಯಾಟರಿ ಲೆವಲ್ ಅನ್ನು ನೋಡಬಹುದು. ಹಾಗೆಯೇ ಗೇರ್ ಇಂಟಿಕೇಟರ್, ಕ್ವಿಕ್ ಫ್ಯೂಯಲ್ ಎಕಾನಮಿ, ಆವರೇಜ್ ಫ್ಯೂಯಲ್ ಎಕಾನಮಿನಮಿಗಳ ಬಗ್ಗೆ ತಿಳಿದುಕೊಳ್ಳಬಹುದು.

ಇತ್ತೀಚೆಗೆ ಬಜಾಜ್ N250 ಬೈಕ್ ಅನ್ನು ಸಹ ಲಾಂಚ್ ಮಾಡಿದೆ. ಈ ಬೈಕ್‌ನಲ್ಲಿ 249cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಬರುತ್ತಿದ್ದು, ಇದರ ಸಹಾಯದಿಂದ ಈ ಬೈಕ್ ಸುಮಾರು 24.5 PS ಪವರ್ ಮತ್ತು 21.5 ಎನ್‌ಎಮ್ ಟಾರ್ಕ್ ಸಹ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು. ಸ್ಲಿಪರ್ ಕ್ಲಚ್ ಸಹ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








