ಹೊಸ ನವೀಕರಣಗಳೊಂದಿಗೆ ಬಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ವಿಡಿಯೋ: ಹೇಗಿದೆ ನೋಡಿ
80ರ ದಶಕದಲ್ಲಿ ಭಾರತೀಯರ ಪ್ರೀತಿಯ ಸಾರಥಿಯಾಗಿತ್ತು. ಹೆಚ್ಚಿನ ಜನರ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಇದಾಗಿದ್ದು, ಅಷ್ಟರಮಟ್ಟಿಗೆ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. 2005ರ ಈ ಜನಪ್ರಿಯ ಹಮಾರ ಬಜಾಜ್ ಸ್ಕೂಟರ್ ಸ್ಥಗಿತಗೊಂಡಿತು. ಮತ್ತೆ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಭಾರತದ ರಸ್ತೆಗಿಳಿಯಿತು.
ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ರೂಪದಲ್ಲಿ ಮರಳಿ ಬಂದು ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಸೃಸಃಟಿಸಲು ಪ್ರಯತ್ನಿಸುತ್ತಿದೆ. ಇನ್ನು ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಗ್ರಾಹರನ್ನು ಸೆಳೆಯುವ ಸಾಧ್ಯತೆಗಳಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾವು ಇತ್ತೀಚೆಗೆ ಬೆಂಗಳೂರಿನಲ್ಲಿ ರೈಡ್ ಮಾಡಿದ್ದೇವೆ. ಈ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸ, ಫಿಚರ್ಸ್, ಹೊಸ ಬದಲಾವಣೆ ಮತ್ತು ರೈಡಿಂಗ್ ಅನುಭವದ ಬಗ್ಗೆ ಹೆಚ್ಚಿನ ವೀಡಿಯೋ ಇಲ್ಲಿದೆ.
ಹೊಸ 2024ರ ಬಜಾಜ್ ಚೇತಕ್ ಪ್ರೀಮಿಯಂ ದೊಡ್ಡದಾದ 3.2kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 126 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಇನ್ನು ಚೇತಕ್ ಪ್ರೀಮಿಯಂ 650w ಆನ್‌ಬೋರ್ಡ್ ಚಾರ್ಜರ್‌ನೊಂದಿಗೆ ಬರುತ್ತದೆ. ಇದರ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಬಹುದು.
ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು 5.63bhp ಅನ್ನು 22.7Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 73 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಚೇತಕ್ ಸ್ಪೋರ್ಟ್ಸ್ ಮೋಡ್, ಹಿಲ್-ಹೋಲ್ಡ್, ಸೀಕ್ವೆನ್ಷಿಯಲ್ ಬ್ಲಿಂಕರ್‌ಗಳು, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಈ ಕೆಲವು ವೈಶಿಷ್ಟ್ಯಗಳನ್ನು ಆಯ್ಕೆಗೆಗೆ ಹೆಚ್ಚುವರಿ ಹಣ ಪಾವತಿಸಬೇಕಾಕಿದೆ.

ಹೊಸ ಬದಲಾವಣೆಗಳು: ಹೊಸ ಬಜಾಜ್ ಚೇತಕ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಆವೃತ್ತಿಗಳಲ್ಲಿ ಆಕರ್ಷಕ ಬೆಲೆಯೊಂದಿಗೆ ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್ ಮತ್ತು ಹೆಚ್ಚಿನ ತಂತ್ರಜ್ಞಾನಗಳೊಂದಿಗೆ ಬಂದಿದೆ. ಪ್ರಮುಖವಾಗಿ ಬಜಾಜ್ ಚೇತಕ್ ಯುವ ಖರೀದಿದಾರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 5-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಟೆಕ್‌ಪ್ಯಾಕ್ (TecPac) ಪ್ಯಾಕೇಜ್ ನೊಂದಿಗೆ ಬಂದಿದೆ.
ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಹಾಗೂ ಡಿಸ್ಪ್ಲೇ ಥೀಮ್ ರೀತಿಯ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇವುಗಳೊಂದಿಗೆ ಹಿಲ್ ಹೋಲ್ಡ್, ರಿವರ್ಸ್ ಮೋಡ್, ಸ್ಪೋರ್ಟ್ಸ್ ಮೋಡ್‌ನ್ನು ಒಳಗೊಂಡಿದೆ. ಚೇತಕ್ ಪ್ರೀಮಿಯಂನಲ್ಲಿ ಪರಿಚಯಿಸಲಾದ ಇತರ ವೈಶಿಷ್ಟ್ಯಗಳೆಂದರೆ ಸ್ಪೆಲ್ಫ್-ಕ್ಯಾನ್ಸೆಲಿಂಗ್ ಬ್ಲಿಂಕರ್‌ಗಳು, ಲೆಪ್ಟ್ ಮತ್ತು ರೈಟ್ ಕಂಟ್ರೋಲ್ ಗಳ ಸ್ವಿಚ್‌ಗಳು, ಎಲೆಕ್ಟ್ರಾನಿಕ್ ಹ್ಯಾಂಡಲ್ ಲಾಕ್ ಮತ್ತು ಸೀಟ್ ತೆರೆಯುವ ಸ್ವಿಚ್ ಅನ್ನು ಹೊಂದಿದೆ.


Click it and Unblock the Notifications








