ಅಗ್ಗದ ಬೆಲೆಗೆ 400cc ಬೈಕ್ ಬಿಡುಗಡೆ: ಹೊಸ ಬಜಾಜ್ ಪಲ್ಸರ್ NS400Z ವಿಶೇಷತೆಗಳು!

ಬಜಾಜ್ ಕಂಪನಿಯು ತನ್ನ ಪಲ್ಸರ್ ಲೈನ್-ಅಪ್‌ಗೆ ಪವರ್‌ಫುಲ್ ಮಾದರಿಯನ್ನು ಸೇರ್ಪಡೆ ಮಾಡಿದೆ. ಬಹು ನಿರೀಕ್ಷಿತ ಪಲ್ಸರ್ NS400Z ಅನ್ನು ರೂ. 1.85 ಲಕ್ಷ(ಎಕ್ಸ್‌ ಶೋರೂಂ)ಕ್ಕೆ ಬಿಡುಗಡೆ ಮಾಡಿದೆ. ಈ ಬೆಲೆಯಲ್ಲಿ 400cc ಬೈಕ್ ಸಿಗುತ್ತಿರುವುದು ಇದೇ ಮೊದಲು. ಇದರ ಬೆಲೆ, ಫೀಚರ್ಸ್ ಕುರಿತ ವಿವರವಾದ ಮಾಹಿತಿಯನ್ನು ಇಲ್ಲಿ ನೋಡೋಣ.

ಹೊಸ ಬಜಾಜ್ ಪಲ್ಸರ್ NS400Z ಸಂಪೂರ್ಣ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಆಗಿದ್ದು, ಇದುವರೆಗಿನ ಅತಿದೊಡ್ಡ ಪಲ್ಸರ್ ಬೈಕ್ ಆಗಿ ಬಿಡುಗಡೆಯಾಗಿದೆ. ಇದು 373.27cc ಎಂಜಿನ್‌ನೊಂದಿಗೆ ಬರೋಬ್ಬರಿ 40 PS ಪವರ್ ಮತ್ತು 35 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಸುಗಮ ನಿರ್ವಹಣೆಗಾಗಿ ರೈಡ್ - ಬೈ - ವೈರ್ ತಂತ್ರಜ್ಞಾನವನ್ನು ಸಹ ಹೊಂದಿದೆ. ರೋಡ್‌, ರೈನ್, ಸ್ಪೋರ್ಟ್, ಆಫ್‌ರೋಡ್ ಎಂಬ ರೈಡ್‌ಮೋಡ್‌ಗಳನ್ನು ನೀಡಲಾಗಿದ್ದು, ಬದಲಾಯಿಸಬಹುದಾದ ಎಲೆಕ್ಟ್ರಾನಿಕ್ ಟ್ರಾಕ್ಷನ್ ಕಂಟ್ರೋಲ್ (ಇಟಿಸಿ), ಸ್ಪೋರ್ಟ್ ಮತ್ತು ಆಫ್-ರೋಡ್ ಮೋಡ್‌ಗಳಲ್ಲಿ ಹಿಡಿತವನ್ನು ಮತ್ತಷ್ಟು ಹೆಚ್ಚಿಸುತ್ತದೆ.

2024-bajaj-pulsar-ns400-price-features-specs-details

ಇದರ ಡಿಸೈನ್ ಬಗ್ಗೆ ಮಾತನಾಡುವುದಾದ್ರೆ, ಬಜಾಜ್ ಪಲ್ಸರ್ NS400Z, ಗೋಲ್ಡ್ USD ಫೋರ್ಕ್ಸ್ ಮತ್ತು ಕಾರ್ಬನ್ ಫೈಬರ್ ಗ್ರಾಫಿಕ್ಸ್ ಪಡೆದುಕೊಂಡಿದೆ. ಅಂಡರ್‌ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಬಿಕಿನಿ ಫೇರಿಂಗ್ ಮತ್ತು ಸ್ಪೋರ್ಟಿ ಟೈಲ್ ವಿಭಾಗದಲ್ಲಿ 'NS400' ಬ್ಯಾಡ್ಜಿಂಗ್‌ನೊಂದಿಗೆ ಏರೋಡೈನಾಮಿಕ್ ಡಿಸೈನ್ ಅನ್ನು ಪಡೆದುಕೊಂಡಿದೆ. ಸಿಗ್ನೇಚರ್ DRL ಜೊತೆಗೆ ಹೊಸ ಮುಂಭಾಗದ ಗ್ರಿಲ್ ಮೋಟಾರ್‌ಸೈಕಲ್‌ಗೆ ಪ್ರೀಮಿಯಂ ಟಚ್ ನೀಡಿದೆ.

ಅಡ್ಜಸ್ಟಬಲ್ ಲಿವರ್‌ಗಳು (ಐದು ಹಂತಗಳು) ಮತ್ತು ದೊಡ್ಡ ಡಿಸ್ಕ್ ಬ್ರೇಕ್‌ಗಳು (320 ಎಂಎಂ ಮುಂಭಾಗ, 230 ಎಂಎಂ ಹಿಂಭಾಗ), ಅಗಲವಾದ ಟೈರ್‌ಗಳು (110/70-17 ಮುಂಭಾಗ, 140/70 R17 ಹಿಂಭಾಗ), 1344mm ವ್ಹೀಲ್‌ಬೇಸ್, ಹೈಡ್ರೋಫಾರ್ಮ್ಡ್ ಟ್ಯೂಬ್ಯುಲರ್ ಸ್ಟ್ರೀಟ್‌ಫೈಟರ್ ಹ್ಯಾಂಡಲ್‌ಬಾರ್ ಕಡಿಮೆ ಕಂಪನದೊಂದಿಗೆ (NVH) ಉತ್ತಮ ಪರ್ಫಾಮೆನ್ಸ್‌ಗೆ ಸಹಕರಿಸುತ್ತದೆ.

2024-bajaj-pulsar-ns400-price-features-specs-details

ತಾಂತ್ರಿಕ ವಿಶೇಷತೆಗಳು: ರೈಡ್‌ ಮೋಡ್‌ಗಳು ಮತ್ತು ಗೇರ್ ಬದಲಾವಣೆಗಳಿಗಾಗಿ ಸ್ಲಿಪ್ಪರ್ ಕ್ಲಚ್ ಅನ್ನು ನೀಡಲಾಗಿದೆ. ಸುಧಾರಿತ 43mm USD ಫೋರ್ಕ್‌ಗಳು ಮತ್ತು ಸ್ಮಾರ್ಟ್ 4 - ವೇ ಸ್ವಿಚ್‌ಗಳೊಂದಿಗೆ ರೈಡ್ - ಬೈ - ವೈರ್, ಎಲ್ಇಡಿ ಪ್ರೊಜೆಕ್ಟರ್ ಡಿಆರ್‌ಎಲ್‌ಗಳೊಂದಿಗಿನ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, ಬ್ಲಿಂಕರ್‌ಗಳ ಸಂಪೂರ್ಣ ವೈಶಿಷ್ಟ್ಯ ಭರಿತ ಸೂಟ್‌ ಅನ್ನು ಒದಗಿಸಲಾಗಿದೆ. ಮೋಟಾರ್‌ಸೈಕಲ್‌ನ ತಾಂತ್ರಿಕ ವಿಶೇಷತೆಗಳ ಹೊರತಾಗಿ, NS400Z ಬ್ಲೂಟೂತ್ ಸಂಪರ್ಕ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್ ಮತ್ತು ಮ್ಯೂಸಿಕ್ ಕಂಟ್ರೋಲ್‌ಗಳನ್ನು ನೀಡಲಾಗಿದ್ದು, ಒಟ್ಟಾರೆ ಪ್ರೀಮಿಯಂ ಅನುಭವ ನೀಡುವುದಾಗಿ ಕಂಪನಿ ತಿಳಿಸಿದೆ.

ಸುರಕ್ಷತೆ: NS400Z ಮೋಟಾರ್‌ಸೈಕಲ್ ರೈಡರ್ ಸುರಕ್ಷತೆಯಲ್ಲಿ ರಾಜಿಯಾಗದೆ, ಸಂಯೋಜಿತ ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್, ವಿವಿಧ ಸವಾರಿ ಪರಿಸ್ಥಿತಿಗಳಲ್ಲಿ ವೀಲ್ ಲಾಕ್-ಅಪ್ ಅನ್ನು ತಡೆಯುತ್ತದೆ. ಮೋಟಾರ್‌ಸೈಕಲ್ ಉತ್ಸಾಹಿಗಳಿಗೆ ಸ್ಪೋರ್ಟಿ ವಿನ್ಯಾಸ, ಪವರ್, ಪರ್ಫಾಮೆನ್ಸ್ ಮತ್ತು ಸಾಟಿಯಿಲ್ಲದ ಸವಾರಿ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

2024-bajaj-pulsar-ns400-price-features-specs-details

ಪಲ್ಸರ್ NS400Z ತಮ್ಮ ಬೈಕಿಂಗ್ ಪ್ರಯಾಣವನ್ನು ಪ್ರಾರಂಭಿಸಲು ಅಥವಾ ಹೆಚ್ಚಿನ ಸಾಮರ್ಥ್ಯದ ಮೋಟಾರ್‌ಸೈಕಲ್‌ಗೆ ಅಪ್‌ಗ್ರೇಡ್ ಮಾಡಲು ಬಯಸುವ ಸವಾರರಿಗೆ ಉತ್ತಮ ಮೋಟಾರ್‌ಸೈಕಲ್ ಆಗಿದೆ. ಹೊಸ ಪಲ್ಸರ್ NS400Z ನೊಂದಿಗೆ, ಪಲ್ಸರ್ ಕ್ರೀಡಾ ವಿಭಾಗದಲ್ಲಿ ತನ್ನ ಪ್ರಬಲ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಈಗ ಸಜ್ಜುಗೊಂಡಿದ್ದು, ಗ್ರಾಹಕರ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 4, 2024, 8:30 [IST]
English summary
2024 bajaj pulsar ns400 price features specs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+