ಬಡವರ ಬಂಡಿ ಸ್ಪ್ಲೆಂಡರ್ ತಾಕತ್ತು: ಮಾರಾಟದಲ್ಲಿ ಎಲ್ಲವೂ ಉಡೀಸ್, ಹೀರೋಗೆ ಅಗ್ರ ಸ್ಥಾನ

ಭಾರತೀಯ ದ್ವಿಚಕ್ರ ವಾಹನ ಕಂಪನಿಗಳ ಮಾರಾಟದಲ್ಲಿ ಕೇವಲ ಸ್ಕೂಟರ್‌ಗಳು ಮಾತ್ರವಲ್ಲದೇ, ಮೋಟಾರ್ ಸೈಕಲ್‌ಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ 2024 ಜೂನ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಒಟ್ಟಾರೆ ಮಾರಾಟದಲ್ಲಿ ಶೇ21 ರಷ್ಟು ಹೆಚ್ಚಳವನ್ನು ಕಂಡರೆ, ಇದರಲ್ಲಿ ಮೋಟಾರ್‌ಸೈಕಲ್‌ಗಳು ಶೇ5.2 ರಷ್ಟು ಬೆಳವಣಿಗೆಯನ್ನು ಕಂಡಿವೆ. ಬಜಾಜ್, ಹೀರೋ ಮೋಟೊಕಾರ್ಪ್, ರಾಯಲ್ ಎನ್‌ಫೀಲ್ಡ್‌ನಂತಹ ಕಂಪನಿಗಳು ಮುಖ್ಯವಾಗಿ ಮೋಟಾರ್‌ಸೈಕಲ್ ಮಾರಾಟವನ್ನು ಅವಲಂಬಿಸಿವೆ. ಹಾಗಾದ್ರೆ ಜೂನ್‌ನಲ್ಲಿ ಯಾವ ಬ್ರಾಂಡ್‌ಗಳು ಹೆಚ್ಚು ಅತಿ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿವೆ ಎಂಬುದನ್ನು ಇಲ್ಲಿ ನೋಡೋಣ.

ಹೀರೋ ಮೊಟೊಕಾರ್ಪ್: ಜೂನ್ 2024 ರಲ್ಲಿ ಭಾರತದಲ್ಲಿ ಹೀರೋ ಮೋಟೊಕಾರ್ಪ್, 4,62,545 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿ ನಂ.1 ಸ್ಥಾನವನ್ನು ದಕ್ಕಿಸಿಕೊಂಡಿದೆ. ಕಳೆದ ವರ್ಷ (2023 ಜೂನ್‌) 3,93,049 ಮೋಟಾರ್‌ಸೈಕಲ್‌ಗಳ ಮಾರಾಟಕ್ಕೆ ಹೋಲಿಸಿದರೆ, ಶೇಕಡಾ 17.6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಮಾರಾಟದಲ್ಲಿ ಎಂದಿನಂತೆ ಸ್ಪ್ಲೆಂಡರ್ ಮುಂಚೂಣಿಯಲ್ಲಿದೆ.

2024-june-top-motorcycle-selling-brands-report

ಹೋಂಡಾ: ಹೋಂಡಾ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನವನ್ನು ಬೆನ್ನಟ್ಟಿದೆ. ಜೂನ್ 2024 ರಲ್ಲಿ, ಹೋಂಡಾದ ಮೋಟಾರ್‌ಸೈಕಲ್ ಮಾರಾಟವು 2,16,637 ಯುನಿಟ್‌ಗಳಷ್ಟಿದ್ದು, ಜೂನ್ 2023 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾದ 1,62,737 ಯುನಿಟ್‌ಗಳಿಗೆ ಹೋಲಿಸಿದರೆ, ಇದು ಶೇಕಡಾ 33.1 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಬಜಾಜ್: 2024ರ ಜೂನ್‌ನಲ್ಲಿ 1,59,516 ಬೈಕುಗಳನ್ನು ಮಾರಾಟ ಮಾಡುವ ಮೂಲಕ ಬಜಾಜ್ ಮೂರನೇ ಸ್ಥಾನದಲ್ಲಿದೆ. ಕಂಪನಿಯು ಕಳೆದ ವರ್ಷ(2023) ಜೂನ್ ತಿಂಗಳಿನಲ್ಲಿ 1,59,161 ಬೈಕುಗಳನ್ನು ಮಾರಾಟ ಮಾಡಿದೆ. ಪಲ್ಸರ್ ಸರಣಿಯ ಜೊತೆಗೆ ತನ್ನ ಪ್ರಯಾಣಿಕ ಬೈಕುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವದ ಮೊದಲ ಸಿಎನ್‌ಜಿ ಮೋಟಾರ್ ಸೈಕಲ್ ಫ್ರೀಡಂ 125 ಬಿಡುಗಡೆಯು ಬಜಾಜ್‌ನ ಅದೃಷ್ಟವನ್ನು ಬದಲಾಯಿಸುವ ಎಲ್ಲಾ ಸೂಷನೆಗಳು ಕಾಣುತ್ತಿವೆ.

2024-june-top-motorcycle-selling-brands-report

ಟಿವಿಎಸ್: ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಇದ್ದು, ಜೂನ್ 2024 ರಲ್ಲಿ 91,425 ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡಿ ಶೇಕಡಾ 4.7 ರಷ್ಟು ಬೆಳವಣಿಗೆ ಸಾಧಿಸಿದೆ. 2023ರ ಇದೇ ಅವಧಿಯಲ್ಲಿ, ಟಿವಿಎಸ್ ದೇಶೀಯ ಮಾರುಕಟ್ಟೆಯಲ್ಲಿ 87,275 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಟಿವಿಎಸ್‌ಗೆ, ಅಪಾಚೆ ಸರಣಿಯ ಜೊತೆಗೆ ಅದರ ಕಮ್ಯೂಟರ್ ಮೋಟಾರ್ ಸೈಕಲ್‌ಗಳು ಹೆಚ್ಚು ಮಾರಾಟವಾಗಿವೆ.

ರಾಯಲ್ ಎನ್‌ಫೀಲ್ಡ್: ಐದನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿ ಇದ್ದು, ಜೂನ್ 2024 ರಲ್ಲಿ 66,117 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ (ಜೂನ್ 2023) ರಲ್ಲಿ ಮಾರಾಟವಾದ 67,495 ಯುನಿಟ್‌ಗಳಿಗೆ ಹೋಲಿಸಿದರೆ, ಇದು ಶೇಕಡಾ 2 ರಷ್ಟು ಕುಸಿತವಾಗಿದೆ.

2024-june-top-motorcycle-selling-brands-report

ಮೇ 2024 ರಲ್ಲಿ, ರಾಯಲ್ ಎನ್‌ಫೀಲ್ಡ್ ತನ್ನ ಕೆಲವು ಜನಪ್ರಿಯ ಮಾದರಿಗಳಾದ ಕ್ಲಾಸಿಕ್ 350, ಹಂಟರ್ 350 ಮತ್ತು ಹಿಮಾಲಯನ್ ಮಾರಾಟದಲ್ಲಿ ಕುಸಿತ ಕಂಡಿದೆ. ಈ ಪ್ರವೃತ್ತಿ ಜೂನ್‌ನಲ್ಲಿಯೂ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ಹೊಸ ಬೈಕ್ ಆದ ಗೆರಿಲ್ಲಾ 450 ಬಿಡುಗಡೆಗೆ ಸಜ್ಜಾಗಿದ್ದು, ಈ ಹೊಸ ಬೈಕ್ ಕಳೆದುಹೋದ ಗತವೈಭವವನ್ನು ಮರಳಿ ತಂದುಕೊಡಲಿದೆಯೇ ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 14, 2024, 11:00 [IST]
English summary
2024 june top motorcycle selling brands report
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+