ಭಾರತದಲ್ಲಿ ಹೊಸ ಕವಾಸಕಿ Z900 ಬೈಕ್ ಬಿಡುಗಡೆ: ಬೆಲೆ ರೂ. 9.29 ಲಕ್ಷ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ನವೀಕರಿಸಿದ ಕವಾಸಕಿ Z900 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ Z900 (Kawasaki Z900) ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.29 ಲಕ್ಷವಾಗಿದೆ.

ಈ ಹೊಸ ಕವಾಸಕಿ Z900 ಬೈಕಿನ ಬೆಲೆಯನ್ನು ಇದತ ಹಿಂದಿನ ಮಾದರಿಗೆ ಹೋಲಿಸಿದರೆ ರೂ.9,000 ವರೆಗೆ ಹೆಚ್ಚಾಗಿದೆ.ಹೊಸ ಕವಾಸಕಿ Z900 ಬೈಕ್ ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಮತ್ತು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು ಸಿಂಗಲ್-ಪಾಡ್ ಎಲ್‌ಇಡಿ ಹೆಡ್‌ಲೈಟ್, ಸ್ನಾಯು ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು ಮತ್ತು ಒಟ್ಟಾರೆಯಾಗಿ ಅಗ್ರೇಸಿವ್ ಬಾಡಿವರ್ಕ್ ಅನ್ನು ಒಳಗೊಂಡಿದೆ.

2024 Kawasaki Z900

ಈ ಕವಾಸಕಿ Z900 ಬೈಕ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ ಮತ್ತು ಸಾಕಷ್ಟು ರಸ್ತೆ ಉಪಸ್ಥಿತಿಯೊಂದಿಗೆ ಬಂದಿದೆ. ಈ ಬೈಕ್ 17-ಇಂಚಿನ ಅಲಾಯ್ ವ್ಹೀಲ್ ಗಳೊಂದಿಗೆ ಹೊಸ ಡನ್‌ಲಪ್ ಸ್ಪೋರ್ಟ್‌ಮ್ಯಾಕ್ಸ್ ರೋಡ್‌ಸ್ಪೋರ್ಟ್ 2 ಟೈರ್‌ಗಳನ್ನು ಪಡೆಯುತ್ತದೆ. ಇನ್ನು ಈ ಹೊಸ ಬೈಕಿನಲ್ಲಿ 948cc, ಇನ್‌ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ.

ಈ ಎಂಜಿನ್ 9,500rpm ನಲ್ಲಿ 123.6bhp ಮತ್ತು 7,700rpm ನಲ್ಲಿ 98.6Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ ಇರಿಸಲಾಗಿದೆ.

2024 Kawasaki Z900

ಸುರಕ್ಷತೆ ವಿಭಾಗದಲ್ಲಿ ಬ್ರೇಕಿಂಗ್ ಸಿಸ್ಟಂ ಪ್ರಮುಖ ಪಾತ್ರವಹಿಸುತ್ತದೆ. ಈ ಹೊಸ ಕವಾಸಕಿ Z900 ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಡ್ಯುಯಲ್ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 250 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಈ ಬೈಕಿನ 120/70 ಮುಂಭಾಗದಲ್ಲಿ ಮತ್ತು 180/55 ಹಿಂಭಾಗದ ಡನ್‌ಲಪ್ ಟೈರ್ ಗಳನ್ನು ಹೊಂದಿವೆ. ಇನ್ನ್ನು ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮೂರು ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ಗಳು (ಸ್ಪೋರ್ಟ್. ರೋಡ್ ಮತ್ತು ರೈನ್) ಹೆಚ್ಚುವರಿ, ಸಂಪೂರ್ಣ ಕಸ್ಟಮೈಸ್ ರೈಡರ್ ಮೋಡ್ ಜೊತೆಗೆ ಲಭ್ಯವಿದೆ.

2024 Kawasaki Z900

ಇದರೊಂದಿಗೆ ಟ್ರ್ಯಾಕ್ಷನ್ ಕಂಟ್ರೋಲ್. ABS, ಫುಲ್ LED ಲೈಟಿಂಗ್ ಮತ್ತು ಬ್ಲೂಟೂತ್-ಕನೆಕ್ಟಿವಿಟಿಯೊಂದಿಗೆ ಕಲರ್ TFT ಡಿಸ್ ಪ್ಲೇಯನ್ನು ಒಳಗೊಂಡಿರುತ್ತದೆ. ಇನ್ನು ಈ ಹೊಸ ಕವಾಸಕಿ Z900 ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಾನ್ಸ್ಟರ್ , BMW F900R ಮತ್ತು ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಕವಾಸಕಿ ತನ್ನ ಕವಾಸಕಿ Z650RS ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಸಿತು. ಕವಾಸಕಿ Z650RS ಮಾದರಿಯು ನಿಯೋ-ರೆಟ್ರೋ ಮಿಡ್ ಬೈಕ್ ಆಗಿದೆ. 1970ರ ದಶಕದ ಮೂಲ ಕವಾಸಕಿ Z650-B1 ನಿಂದ ಸಾಕಷ್ಟು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದೆ. ಈ ಹೊಸ ಕವಾಸಕಿ Z650RS ಮಾದರಿಯು ಕವಾಸಕಿ Z650 ಅನ್ನು ಆಧರಿಸಿದೆ. ನಿಯೋ-ರೆಟ್ರೋ ಬೈಕ್ ಆಗಿದ್ದರೂ, ಇದು ಸಾಕಷ್ಟು ಆಧುನಿಕ ಅಂಶಗಳೊಂದಿಗೆ ಬರುತ್ತದೆ, ಇದು ಒಟ್ಟಾರೆ ದೃಶ್ಯ ಆಕರ್ಷಣೆಯನ್ನು ಸುಧಾರಿಸಿದೆ.

ಕವಾಸಕಿ Z650Rs ಬೈಕ್ ಟ್ರೆಲ್ಲಿಸ್ ಫ್ರೇಮ್ ಚಾಸಿಸ್ ಮತ್ತು 650cc ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 67 bhp ಮತ್ತು 64 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕ್ ಸ್ಲಿಮ್ ಮತ್ತು ಸ್ಪಷ್ಟವಾದ LED ಇಂಡಿಕೇಟರ್ ಮತ್ತು LED ಹೆಡ್‌ಲ್ಯಾಂಪ್ ಸೆಟಪ್‌ನಂತಹ ಒಟ್ಟಾರೆ ಸವಾರಿ ಅನುಭವವನ್ನು ಸುಧಾರಿಸಿದೆ.

More from DriveSpark

Article Published On: Wednesday, February 21, 2024, 19:00 [IST]
English summary
2024 kawasaki z900 launched in india price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+