TVS: ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ಬಿಡುಗಡೆ.. 73,700 ಬೆಲೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು!
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಖ್ಯಾತಿ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಂದು ನವೀಕರಿಸಿದ ಹೊಚ್ಚ ಹೊಸ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ನೂತನ ಸ್ಕೂಟರ್ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
2024ರ ನೂತನ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದು ರೂ.73,700 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಹಳೆಯ ಜುಪಿಟರ್ 110 ದರಕ್ಕೆ ಹೋಲಿಕೆ ಮಾಡಿದರೆ, ಸುಮಾರು ರೂ.3,700 ಅಗ್ಗವಾಗಿದೆ.

ಈ ಟಿವಿಎಸ್ ಜುಪಿಟರ್ 110 ಸ್ಕೂಟರ್ ಅದ್ಭುತವಾದ ವಿನ್ಯಾಸ (ಡಿಸೈನ್) ಒಳಗೊಂಡಿದೆ. ಮುಂಭಾಗ (ಫ್ರಂಟ್) ನವೀಕರಣಗೊಂಡಿರುವ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್ ಜೊತೆಯಲ್ಲಿ ವಿಶಾಲವಾದ (ವೈಡ್) ಎಲ್ಇಡಿ ಡಿಆರ್‌ಎಲ್‌ನ್ನು ಹೊಂದಿದೆ. ಹಿಂಭಾಗ (ರೇರ್) ಸಹ ಅತ್ಯುತ್ತಮವಾದ ವಿನ್ಯಾಸ ಹೊಂದಿದ್ದು, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಲೈಟ್ ಹೊಂದಿರುವ ಎಲ್ಇಡಿ ಲೈಟ್ ಬಾರ್‌ನ್ನು ಪಡೆದಿದೆ.
ಹೊಚ್ಚ ಹೊಸ ಜುಪಿಟರ್ 110 ಸ್ಕೂಟರ್ 113 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.91 ಹೆಚ್‌ಪಿ ಗರಿಷ್ಠ ಶಕ್ತಿ (ಪವರ್) ಹಾಗೂ 9.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 82 ಕೆಎಂಪಿಹೆಚ್ ಟಾಪ್ ಸ್ಪೀಡ್ ಪಡೆದಿದೆ. ವಿಶೇಷವಾಗಿ ಐಗೋ (IGo) ಅಸಿಸ್ಟ್ ವೈಶಿಷ್ಟ್ಯವನ್ನು ಒಳಗೊಂಡಿದೆ. ಇದು ನಗರ ಪ್ರದೇಶದಲ್ಲಿ ವಾಹನಗಳನ್ನು ಹಿಂದಿಕ್ಕುವಾಗ (ಓವರ್‌ಟೇಕ್) ಸ್ವಲ್ಪ ಹೆಚ್ಚು ಟಾರ್ಕ್ ಹೊರಹಾಕುತ್ತದೆ.

ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಂಟಲಿಜೆಂಟ್ ಸ್ಟಾರ್ಟ್-ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಹೊಸದಾಗಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಇದು ಕಾಲ್, ಟೆಕ್ಸ್ಟ್ ನೋಟಿಫಿಕೇಶನ್, ಫ್ಯುಯೆಲ್ ಎಕಾನಮಿ, ನ್ಯಾವಿಗೇಷನ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸುತ್ತದೆ.
ಈ ಸ್ಕೂಟರ್ ಯುಎಸ್‌ಬಿ ಚಾರ್ಜರ್, 2-ಲೀಟರ್ ಗ್ಲೋವ್ ಬಾಕ್ಸ್, 33-ಲೀಟರ್ ಸಾಮರ್ಥ್ಯದ ಅಂಡರ್-ಸೀಟ್ ಸೋರೇಜ್ (ಆಸನ ಕೆಳಗಿನ ಸಂಗ್ರಹಣೆ ಪೆಟ್ಟಿಗೆ) ಹಾಗೂ ಫ್ಲಾಟ್ ಸೀಟ್‌ನ್ನು ಹೊಂದಿದೆ. ಡ್ರಮ್, ಡ್ರಮ್ ಅಲಾಯ್, ಡ್ರಮ್ ಎಸ್‌ಎಕ್ಸ್‌ಸಿ ಹಾಗೂ ಡಿಸ್ಕ್ ಎಸ್‌ಎಕ್ಸ್‌ಸಿ ಎಂಬ 4 ರೂಪಾಂತರಗಳು (ವೇರಿಯೆಂಟ್) ಮತ್ತು 6 ಬಣ್ಣಗಳೊಂದಿಗೂ ಸಿಗುತ್ತದೆ.

ಹೊಸ ಜುಪಿಟರ್ 110 ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಗ್ಯಾಸ್ ಫೀಲ್ಡ್ ಎಮಲ್ಷನ್ ಡ್ಯಾಂಪರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆ ಸಲುವಾಗಿ ಮುಂದೆ 220 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂದೆ 130 ಎಂಎಂ ಡ್ರಮ್ ಬ್ರೇಕ್‌ನ್ನು ಪಡೆದಿದೆ. 12-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದ್ದು, ಟೈರ್‌ಗಳು ಕೂಡ ಉತ್ತಮವಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








