Bajaj Chetak: ನವೀಕರಣಗಳೊಂದಿಗೆ ಕಡಿಮೆ ಬೆಲೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ (Bajaj) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯಲು ಕೆಲವೇ ವರ್ಷಗಳ ಹಿಂದೆ, ಚೇತಕ್ (Chetak) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಲಾಗಿತ್ತು. ಈಗ, ಆಧುನಿಕ ವೈಶಿಷ್ಟ್ಯಗಳೊಂದಿಗೆ ನವೀಕರಣಗೊಂಡು ಲಾಂಚ್ ಆಗಿದೆ.
ದೇಶದಲ್ಲಿ ಪರಿಷ್ಕರಣೆಗೊಂಡು ಬಿಡುಗಡೆಯಾಗಿರುವ 2024 ಬಜಾಜ್ ಚೇತಕ್ (Bajaj Chetak) ಎರಡು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ ಅರ್ಬೇನ್ (Urbane) ಹಾಗೂ ಪ್ರೀಮಿಯಂ (Premium) ಕ್ರಮವಾಗಿ ರೂ.1,15,001 ಹಾಗೂ ರೂ.1,35,463 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ದೇಶಾದ್ಯಂತ 140 ನಗರಗಳಲ್ಲಿ 1 ಲಕ್ಷಕ್ಕೂ ಅಧಿಕ 'ಚೇತಕ್' ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿ ಮಾರಾಟಗೊಳಿಸಿದೆ.

ಬಜಾಜ್ ಚೇತಕ್ ಯುವ ಖರೀದಿದಾರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 5-ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಟೆಕ್‌ಪ್ಯಾಕ್ (TecPac) ಪ್ಯಾಕೇಜ್ ನೊಂದಿಗೆ ದೊರೆಯುತ್ತದೆ. ಇದು ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಹಾಗೂ ಡಿಸ್ಪ್ಲೇ ಥೀಮ್ ರೀತಿಯ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಇವುಗಳೊಂದಿಗೆ ಹಿಲ್ ಹೋಲ್ಡ್, ರಿವರ್ಸ್ ಮೋಡ್, ಸ್ಪೋರ್ಟ್ಸ್ ಮೋಡ್‌ನ್ನು ಒಳಗೊಂಡಿದೆ.
'ಟೆಕ್‌ಪ್ಯಾಕ್' ಅರ್ಬೇನ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ. ಇದು ಸಂಪೂರ್ಣ ಚಾರ್ಜ್ ನಲ್ಲಿ 113 ಕಿಲೋಮೀಟರ್ ಕ್ರಮಿಸಲಿದ್ದು, 73 kmph ಟಾಪ್ ಸ್ವೀಡ್ ಹೊಂದಿದೆ. 650 ಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್ ಬಳಕೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಪೂರ್ತಿ ಚಾರ್ಜ್ ಆಗಲು 4 ಗಂಟೆ 50 ನಿಮಿಷ ಬೇಕಾಗುತ್ತದೆ.

ಬಜಾಜ್ ಚೇತಕ್ (Bajaj Chetak) ಪ್ರೀಮಿಯಂ (Premium) ರೂಪಾಂತರ ಸಂಪೂರ್ಣ ಚಾರ್ಜ್ ನಲ್ಲಿ 108 ಕಿಲೋಮೀಟರ್ ರೇಂಜ್ ನೀಡುತ್ತದೆ. ಜೊತೆಗೆ 63 kmph ಟಾಪ್ ಸ್ವೀಡ್ ಹೊಂದಿದೆ. 800 ಡಬ್ಲ್ಯೂ ಆನ್-ಬೋರ್ಡ್ ಚಾರ್ಜರ್ ಉಪಯೋಗದಲ್ಲಿ ಇದರ ಬ್ಯಾಟರಿ ಪ್ಯಾಕ್, 3 ಗಂಟೆ 50 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗಿಬಿಡುತ್ತದೆ.
2024ರ ಬಜಾಜ್ ಚೇತಕ್ ಪ್ರೀಮಿಯಂ ವೇರಿಯೆಂಟ್ 3 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ ಇಂಡಿಗೋ ಬ್ಲೂ, ಬ್ರೂಕ್ಲಿನ್ ಬ್ಲಾಕ್ ಮತ್ತು ಹ್ಯಾಝೆಲ್ನಟ್. ಅದೇ ರೀತಿಯಲ್ಲಿ ಅರ್ಬೇನ್ ರೂಪಾಂತರ ಕೋರ್ಸ್ ಗ್ರೇ, ಸೈಬರ್ ವೈಟ್, ಬ್ರೂಕ್ಲಿನ್ ಬ್ಲಾಕ್ ಮತ್ತು ಇಂಡಿಗೋ ಮೆಟಾಲಿಕ್ ಬ್ಲೂ ಸೇರಿದಂತೆ ಆಕರ್ಷಕ 4 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಇನ್ನು, ನವೀಕರಣಗಳೊಂದಿಗೆ ಅಗ್ಗದ ಬೆಲೆಗೆ ಬಜಾಜ್ ಚೇತಕ್ ಇ-ಸ್ಕೂಟರ್ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಅತ್ಯಾಧುನಿಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ಕಂಪನಿ ನಂಬಿದೆ. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಬೇಡಿಕೆ ಬಂದರೂ ಅಚ್ಚರಿಯಿಲ್ಲ. ಬಜಾಜ್ ಚೇತಕ್ ಗೆ ಓಲಾ, ಎಥರ್, ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








