Yamaha: ಯಮಹಾ ಫ್ಯಾಸಿನೊ ಎಸ್ ಸ್ಕೂಟರ್ ಬಿಡುಗಡೆ.. ಕಾರನ್ನು ಮೀರಿಸುವ ವೈಶಿಷ್ಟ್ಯಗಳು, ರೂ.93,730 ಬೆಲೆ

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಸಂಸ್ಥೆ ಯಮಹಾ (Yamaha), ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದಿರುವ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸೋಮವಾರ ಜನಪ್ರಿಯ 'ಫ್ಯಾಸಿನೊ'ದ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ನೂತನ ಸ್ಕೂಟರ್ ಕಾರನ್ನು ಮೀರಿಸುವಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಬನ್ನಿ.. ಈ ಸ್ಕೂಟರ್‌ನ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಮಹಾ ಮೋಟಾರ್ (Yamaha Motor) ಫ್ಯಾಸಿನೊ 125 ಸ್ಕೂಟರ್‌ನ ನೂತನ ರೂಪಾಂತರ (ವೇರಿಯೆಂಟ್)ವಾದ 'ಎಸ್' ಅನ್ನು ಪರಿಚಯಿಸಿದೆ. ಇದು ಆನ್ಸರ್ ಬ್ಯಾಕ್ (Answer Back) ಎಂಬ ವಿಶೇಷವಾದ ವೈಶಿಷ್ಟ್ಯ (ಫೀಚರ್)ವನ್ನು ಹೊಂದಿದ್ದು, ಮ್ಯಾಟ್ ರೆಡ್ & ಮ್ಯಾಟ್ ಬ್ಲಾಕ್ ಬಣ್ಣಗಳ ಆವೃತ್ತಿಯು ರೂ.93.730 ಹಾಗೂ ಡಾರ್ಕ್ ಮ್ಯಾಟ್ ಬ್ಲೂ ಶೇಡ್ ಮಾದರಿ ರೂ.94,530 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

2024 Yamaha Fascino S Launched In India New Feature Like Car Rs 93 730 Price

ಈ ಆನ್ಸರ್ ಬ್ಯಾಕ್ (ಉತ್ತರ ಹಿಂದಿರುಗಿಸುವುದು) ವೈಶಿಷ್ಟ್ಯವು ಸ್ಕೂಟರ್ ಮಾಲೀಕರಿಗೆ ಹೆಚ್ಚು ಸಹಾಯಕವಾಗಿದೆ. ದೂರದಿಂದಲೇ ಇಂಡಿಕೇಟರ್ ಹಾಗೂ ಹಾರ್ನ್ ಅನ್ನು ಎರಡು ಸೆಕೆಂಡುಗಳವರೆಗೆ ಸಕ್ರಿಯಗೊಳಿಸಲು ನೆರವಾಗುತ್ತದೆ. ಈ ವೈಶಿಷ್ಟ್ಯವನ್ನು ಪಡೆಯಲು ಗೂಗಲ್ ಪ್ಲೇಸ್ಟೋರ್/ ಆಪ್ ಸ್ಟೋರ್‌ನಿಂದ ಯಮಹಾ ಸ್ಕೂಟರ್ ಆನ್ಸರ್ ಬ್ಯಾಕ್ (Yamaha Scooter Answer Back) ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಬೇಕಾಗಿದೆ.

ನೂತನ ಯಮಹಾ ಫ್ಯಾಸಿನೊ ಎಸ್ (Yamaha Fascino S) ಮಾದರಿಯು 'ಆನ್ಸರ್ ಬ್ಯಾಕ್' ಮಾತ್ರವಲ್ಲದೆ ಸೈಲೆಂಟ್ ಸ್ಟಾರ್ಟರ್, ಆಟೋಮೆಟಿಕ್ ಸ್ಟಾರ್ಟ್/ ಸ್ಟಾಪ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಿಂದಿನ ಆವೃತ್ತಿಯಂತೆ 125 ಸಿಸಿ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.04 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 10.3 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

2024 Yamaha Fascino S Launched In India New Feature Like Car Rs 93 730 Price

ಈ ಹೊಸ ಸ್ಕೂಟರ್ 99 ಕೆಜಿ ತೂಕವಿದ್ದು, 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ. 12-10 ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ. ಫ್ರಂಟ್ (ಮುಂಭಾಗ) ಟೆಲಿಸ್ಕೋಪಿಕ್ ಫೋರ್ಕ್ಸ್ & ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆಷನ್ ಸೆಟಪ್ ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ 'ಯಮಹಾ ಫ್ಯಾಸಿನೊ' ಸ್ಕೂಟರ್ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.82,580 ದಿಂದ ರೂ.93,380 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸರಿ ಸುಮಾರು 68.75 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದಕ್ಕೆ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125, ಹೋಂಡಾ ಆಕ್ಟಿವಾ 125, ಟಿವಿಎಸ್ ಜುಪಿಟರ್ 125, ಮತ್ತು ಹೀರೋ ಡೆಸ್ಟಿನಿ 125 ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ನೂತನ ಸುಜುಕಿ ಬರ್ಗ್‌ಮನ್ ಸ್ಟ್ರೀಟ್ 125 ಸ್ಕೂಟರ್ ರೂ.97,883 ರಿಂದ ರೂ.1.18 ಲಕ್ಷ, ಹೋಂಡಾ ಆಕ್ಟಿವಾ 125 ರೂ.82,634 ರಿಂದ ರೂ.91,807, ಟಿವಿಎಸ್ ಜುಪಿಟರ್ 125 ರೂ.89,155 ರಿಂದ ರೂ.99,805 ಹಾಗೂ ಹೀರೋ ಡೆಸ್ಟಿನಿ 125 ಸ್ಕೂಟರ್ 81,718 ರಿಂದ 87,518 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, June 10, 2024, 16:40 [IST]
English summary
2024 yamaha fascino s launched in india new feature like car rs 93730 price
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+