ಹೋಂಡಾ ಕಂಪನಿಯಿಂದ ಹೊಸ 125 ಸ್ಕೂಟರ್ ಬರಲಿದೆ: ಸ್ಪೋರ್ಟಿ ಲುಕ್, ಉತ್ತಮ ಮೈಲೇಜ್!

ಭಾರತೀಯ ಸ್ಕೂಟರ್ ವಿಭಾಗದಲ್ಲಿ ಆಕ್ಟಿವಾ ಮತ್ತು ಡಿಯೋಗಳಿಂದಾಗಿ ಹೋಂಡಾ ಕಂಪನಿಯು ಮುಂಚೂಣಿಯಲ್ಲಿದೆ. ಅದರಲ್ಲಿಯು ಯುವಜನರನ್ನು ಹೆಚ್ಚು ಆಕರ್ಷಿಸುವ ಡಿಯೋ, ತನ್ನ ಸ್ಪೋರ್ಟಿಯರ್ ಮತ್ತು ಹೆಚ್ಚು ಆಕ್ರಮಣಕಾರಿ ವಿನ್ಯಾಸದೊಂದಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಪ್ರಸ್ತುತ ಭಾರತಲದಲ್ಲಿ ಡಿಯೋವನ್ನು 110 ಸಿಸಿ ಮತ್ತು ಇತ್ತೀಚೆಗೆ 125 ಸಿಸಿ ಎಂಜಿನ್‌ನೊಂದಿಗೆ ಹೆಚ್ಚಿನ ಪವರ್ ಹಾಗೂ ಹಲವಾರು ವೈಶಿಷ್ಟ್ಯಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದೀಗ ಹೊಸ ಹೋಂಡಾ ಡಿಯೋ (2025ರ ಡಿಯೋ 125) ಬಿಡುಗಡೆ ಬಗ್ಗೆ ಭಾರೀ ನಿರೀಕ್ಷಗಳು ಹೆಚ್ಚಾಗಿವೆ. ಆ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇತ್ತೀಚೆಗೆ ದಕ್ಷಿಣ ಕೊರಿಯಾ ಮಾರುಕಟ್ಟೆಗಾಗಿ ಹೊಸದಾಗಿ ಬಿಡುಗಡೆಯಾದ ಹೋಂಡಾ ಡಿಯೋ ಎಲ್ಲರ ಆಸಕ್ತಿಯನ್ನು ಕೆರಳಿಸಿದೆ. ಹೋಂಡಾ ಕಂಪನಿಯು ಡಿಯೋ 125 ಸ್ಕೂಟರ್ ಅನ್ನು ಆರಂಭಿಕ ಬೆಲೆ 1.62 ಲಕ್ಷ ರೂ.ಗೆ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಿದೆ. ಇದೇ ಸ್ಕೂಟರ್ ಭಾರತದಲ್ಲಿಯೂ ಬಿಡುಗಡೆಯಾಗಲಿದೆ. ದೇಶದಲ್ಲಿ ಸದ್ಯ ಮಾರಾಟದಲ್ಲಿರುವ ಡಿಯೋ 125 ಸ್ಕೂಟರ್ ಆರಂಭಿಕ ಬೆಲೆ ರೂ.84,851(ಎಕ್ಸ್ ಶೋರೂಂ)ಮತ್ತು ಸ್ಮಾರ್ಟ್ ವೇರಿಯೆಂಟ್‌ಗೆ ರೂ.91,750(ಎಕ್ಸ್ ಶೋರೂಂ)ಬೆಲೆ ಇದೆ.

2025-honda-dio-125-will-launch-soon-in-india

ಮೂಲಗಳ ಪ್ರಕಾರ, ಕೊರಿಯಾ ಸ್ಕೂಟರ್ 5.3 ಲೀಟರ್ ಫ್ಯೂಯಲ್ ಟ್ಯಾಂಕ್ ಕೆಪಾಸಿಟಿಯೊಂದಿಗೆ ಪ್ರತಿ ಲೀ.ಗೆ 49.5 ಕಿ.ಮೀ ಮೈಲೇಜ್ ನೀಡುತ್ತದೆ. ಎಂಜಿನ್ ವಿಷಯಕ್ಕೆ ಬಂದರೆ ಅದೇ 124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಸ್ಕೂಟರ್ 8.2 ಬಿಹೆಚ್ ಪವರ್ ಮತ್ತು 10.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದೇ ಎಂಜಿನ್ ಬರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ

ಭಾರತದಲ್ಲಿಯೂ ಹೊಸ ಬಣ್ಣಗಳು: ಸದ್ಯ ಕೊರಿಯಾದಲ್ಲಿ ಬಿಡುಗಡೆಯಾಗಿರುವ ಹೋಂಡಾ ಡಿಯೋ 125 ಸ್ಕೂಟರ್ ಅನ್ನು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಡೀಪ್ ಗ್ರೌಂಡ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಇಲ್ಲಿನ ಮಾದರಿಗಳಿಗೆ ಹೋಲಿಸಿದರೆ ಒಂದೇ ರೀತಿ ಕಾಣುವುದಿಲ್ಲ. ದಕ್ಷಿಣ ಕೊರಿಯಾದ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ನೋಟದಲ್ಲಿ ಸ್ವಲ್ಪ ಗಾಢವಾಗಿದೆ, ಬಹುತೇಕ ಮ್ಯಾಟ್ ಬ್ಲ್ಯಾಕ್‌ನಂತೆ ಕಾಣುತ್ತದೆ.

2025-honda-dio-125-will-launch-soon-in-india

ಬಣ್ಣಗಳ ಬದಲಾವಣೆಯನ್ನು ಹೊರತುಪಡಿಸಿ, ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಡಿಯೋ 125 ನಲ್ಲಿ ಬೇರೆ ಯಾವುದೇ ವ್ಯತ್ಯಾಸಗಳಿಲ್ಲ. ಏಪ್ರನ್‌ನಲ್ಲಿ ದೊಡ್ಡ ಟರ್ನ್ ಇಂಡಿಕೇಟರ್, ಎಲ್ಇಡಿ ಡಿಆರ್ಎಲ್‌ಗಳು ಹ್ಯಾಂಡಲ್‌ಬಾರ್‌ನಲ್ಲಿವೆ. ಎಲ್ಇಡಿ ಹೆಡ್‌ಲೈಟ್ ಹೊಂದಿರುವ ಅದೇ ಸ್ಪೋರ್ಟಿ ವಿನ್ಯಾಸವನ್ನು ನಾವು ಇಲ್ಲಿಯೂ ಪಡೆಯುತ್ತೇವೆ.

ಭಾರತೀಯ ಸ್ಕೂಟರ್ ಮತ್ತು ದಕ್ಷಿಣ ಕೊರಿಯಾದ ಮಾದರಿಯು ಒಂದೇ ರೀತಿಯ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್‌ಗಳನ್ನು ಹೊಂದಿರಲಿವೆ. ಜೊತೆಗೆ 12-ಇಂಚಿನ ಮುಂಭಾಗ ಮತ್ತು 10-ಇಂಚಿನ ಹಿಂಭಾಗದ ವೀಲ್‌ಗಳು, ಹೋಂಡಾದ ಸ್ಮಾರ್ಟ್ ಕೀಯ ಭಾಗವಾಗಿ ಸ್ಪ್ಲಿಟ್ ಡಿಜಿಟಲ್ ಕನ್ಸೋಲ್ ಮತ್ತು ಕೀಲೆಸ್ ಇಗ್ನಿಷನ್ ಸಿಸ್ಟಮ್ ಸೇರಿದಂತೆ ಅದೇ ವೈಶಿಷ್ಟ್ಯಗಳನ್ನು ಅಲ್ಲಿಯೂ ನೀಡಲಾಗುತ್ತದೆ.

2025-honda-dio-125-will-launch-soon-in-india

ಭಾರತೀಯ ಸ್ಕೂಟರ್ ವಿಭಾಗದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳಿಗೂ ಉತ್ತಮ ಬೇಡಿಕೆ ಇದೆ, ಹೋಂಡಾ ಸ್ಕೂಟರ್‌ಗಳಿಗೆ ತುಸು ಹೆಚ್ಚು ಎಂದು ಹೇಳಬಹುದು. ಸ್ಕೂಟರ್ ವಿಭಾಗದಲ್ಲಿ ಆಕ್ಟೀವಾಗೆ ಇರುವ ಕ್ರೇಜ್ ಬೇರೊಂದು ವಾಹನಕ್ಕಿಲ್ಲ. ಇದರ ನಂತರ ಹೋಂಡಾಗೆ ಇರುವ ಮತ್ತೊಂದು ಬ್ರಹ್ಮಾಸ್ತ್ರವೆಂದರೆ ಡಿಯೋ ಮಾತ್ರ, ಈ ವಾಹನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 13, 2024, 19:18 [IST]
English summary
2025 honda dio 125 will launch soon in india
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+