TVS: ಆಕ್ರಮಣಕಾರಿ ಮೋಟಾರ್‌ಸೈಕಲ್ ಅನಾವರಣಗೊಳಿಸಿದ ಟಿವಿಎಸ್: ವಿಶೇಷತೆಗಳೇನು?
ದೇಶೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ತನ್ನ 2025ರ ರೋನಿನ್ ಕ್ರೂಸರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಗೋವಾದಲ್ಲಿ ನಡೆಯುತ್ತಿರುವ ಮೋಟೊಸೋಲ್ 4.0 ನಲ್ಲಿ 2025ರ ಟಿವಿಎಸ್ ರೋನಿನ್ ಬೈಕ್‌ನ ಗ್ಲೇಸಿಯರ್ ಸಿಲ್ವರ್ ಮತ್ತು ಚಾರ್ಕೋಲ್ ಎಂಬರ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಅನಾವರಣಗೊಳಿಸಲಾಗಿದೆ. ಈ ಹೊಸ ಬಣ್ಣದ ಮೋಟಾರ್‌ಸೈಕಲ್ ಬೆಲೆಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಆಟೋ ಎಕ್ಸ್ ಪೋದಲ್ಲಿ ಘೋಷಿಸುವ ನಿರೀಕ್ಷೆಯಿದೆ. ಈ ಹೊಸ ಬಣ್ಣಗಳಲ್ಲಿ ಎಂಟ್ರಿಕೊಡಲಿರುವ 2025ರ ರೋನಿನ್ ಕ್ರೂಸರ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
2025ರ ರೋನಿನ್ ಕ್ರೂಸರ್ ಬೈಕ್ಗೆ ಕೊಟ್ಟಿರುವ ಎರಡು ಹೊಸ ಬಣ್ಣದ ಅಪ್‌ಡೇಟ್‌ಗಳು ಪ್ರಸ್ತುತ ಮಾರಾಟದಲ್ಲಿರುವ ಡೆಲ್ಟಾ ಬ್ಲೂ ಮತ್ತು ಸ್ಟಾರ್ ಗೇಜ್ ಬ್ಲ್ಯಾಕ್ ಬಣ್ಣದ ಆಯ್ಕೆಗಳನ್ನು ಬದಲಾಯಿಸುತ್ತವೆ. ಜೊತೆಗೆ ಮೊದಲ ಬಾರಿಗೆ, ಟಿವಿಎಸ್ 2025 ರೋನಿನ್ ನ ಮಿಡ್-ಸ್ಪೆಕ್ ರೂಪಾಂತರವನ್ನು ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ನೀಡಲಿದೆ.

ಗೋವಾದಲ್ಲಿ ಮೋಟೊಸೋಲ್ 4.0 ಬಗ್ಗೆ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಮುಖ್ಯಸ್ಥ ವಿಮಲ್ ಸಂಬ್ಲಿ, ನಾವು ಮೋಟಾರುಸೈಕ್ಲಿಂಗ್ ಉತ್ಸಾಹವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ. ಮೋಟಾರುಸೈಕ್ಲಿಂಗ್ ಸಮುದಾಯವು ಅಭಿವೃದ್ಧಿ ಹೊಂದುತ್ತಿರುವುದನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ. ಮನುಷ್ಯ ಮತ್ತು ಯಂತ್ರದ ನಡುವಿನ ಬಂಧವನ್ನು ಬಲಪಡಿಸುವ ಅನನ್ಯ ಅನುಭವಗಳನ್ನು ರಚಿಸಲು ನಾವು ಸಮರ್ಪಿತರಾಗಿದ್ದೇವೆ ಎಂದಿದ್ದಾರೆ.
ಪ್ರಸ್ತುತ ರೋನಿನ್ ಅನ್ನು ಮೂರು ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ. ಇದರ ಟಾಪ್-ಸ್ಪೆಕ್ "ಟಿಡಿ" ವೇರಿಯೆಂಟ್ 1.71 ಲಕ್ಷ ರೂ.ಗಳ ಬೆಲೆಯನ್ನು ಹೊಂದಿದ್ದರೇ, ಮಿಡ್-ಸ್ಪೆಕ್, "ಡಿಎಸ್" ಬೆಲೆ 1.57 ಲಕ್ಷ ರೂ.ಗಳು ಮತ್ತು ಎಂಟ್ರಿ ಲೆವೆಲ್ "ಎಸ್ಎಸ್" ಅನ್ನು ಎರಡು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುತ್ತಿದ್ದು, ಇದರ ಬೆಲೆಯು 1.35 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ).

2025ರ ರೋನಿನ್ 225.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.1 ಬಿಹೆಚ್ ಪವರ್ ಮತ್ತು 19.93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ. ಟಿವಿಎಸ್ 2025ರ ಆವೃತ್ತಿಯನ್ನು ಬಿಡುಗಡೆ ಮಾಡಿಡುವ ಮೂಲಕ ರೋನಿನ್ ಬೆಲೆಯನ್ನು ಮೂರರಿಂದ ಐದು ಸಾವಿರ ರೂ.ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.
ರೋನಿನ್ ಬೈಕ್ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. 17 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಇದು 110/70 (ಮುಂಭಾಗ) ಮತ್ತು 130/70 (ಹಿಂಭಾಗ) ಟೈರ್‌ಗಳೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಅಪ್‌ಸೈಡ್‌ಡೌನ್ ಫೋರ್ಕ್ ಡಬಲ್ ಕ್ರೇಡಲ್ ಫ್ರೇಮ್ ಮತ್ತು ಹಿಂಭಾಗದಲ್ಲಿ 7 ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಲ್ ಮೊನೊಶಾಕ್ ಅನ್ನು ಹೊಂದಿದೆ.

ಟಿವಿಎಸ್ ಮೋಟಾರ್ ಸೈಕಲ್ ಲಗೇಜ್ ಸ್ಪೆಷಲಿಸ್ಟ್ ಜಿವಿ(GV)ಯೊಂದಿಗೆ ಹೊಸ ಸಹಯೋಗವನ್ನು ಕೂಡ ಘೋಷಿಸಿದೆ. ಈ ಪಾಲುದಾರಿಕೆಯು ಟಿವಿಎಸ್ ದ್ವಿಚಕ್ರ ವಾಹನಗಳಿಗಾಗಿ ಕಸ್ಟಮ್-ವಿನ್ಯಾಸಗೊಳಿಸಿದ ಫ್ರೇಮ್‌ಗಳು ಮತ್ತು ಮೌಂಟ್‌ಗಳನ್ನು ಅಭಿವೃದ್ಧಿಪಡಿಸಲಿದೆ. ಜೊತೆಗೆ ಹೊಸ ಸಹಭಾಗಿತ್ವವು ವಿವಿಧ ರೈಡಿಂಗ್ ಶೈಲಿಗಳು ಮತ್ತು ಶೇಖರಣಾ ಅಗತ್ಯಗಳಿಗೆ ಅನುಗುಣವಾಗಿ ಸಮಗ್ರ ಶ್ರೇಣಿಯ ಪ್ರೀಮಿಯಂ ಲಗೇಜ್ ಪರಿಹಾರಗಳನ್ನು ಒದಗಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








