Activa EV: ಸ್ಟೈಲಿಷ್ ಲುಕ್‌ನಲ್ಲಿ ಇದೇ ಜನವರಿಯಲ್ಲಿ ಅನಾವರಣಗೊಳ್ಳಲಿದೆ ಎಲೆಕ್ಟ್ರಿಕ್ ಆಕ್ಟೀವಾ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗುತ್ತಿರುವ ಕಾರಣ ಇಂಧನ ಚಾಲಿತ ಸ್ಕೂಟರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಹೋಂಡಾ ಆಕ್ಟೀವಾ ಕೂಡ ಇವಿ (Activa EV) ಅವತಾರದಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ. ಹೊಸ ವರ್ಷದ ಮೊದಲ ತಿಂಗಳಿನಲ್ಲಿ ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಆಕ್ಟೀವಾ ಸ್ಕೂಟರ್ ಅನ್ನು ಅನಾವರಣಗೊಳಿಸಲು ಕಂಪನಿ ಸಜ್ಜಾಗುತ್ತಿದೆ.

ಇದೇ ಜನವರಿ 9 ರಂದು ಹೋಂಡಾ ಆರನೇ ತಲೆಮಾರಿನ ಮಾದರಿಯ ಆಧಾರದ ಮೇಲೆ ಆಕ್ಟಿವಾ ಎಲೆಕ್ಟ್ರಿಕ್ (Activa EV) ಆವೃತ್ತಿಯನ್ನು ಅನಾವರಣಗೊಳಿಸಬಹುದು ಎಂದು ವರದಿಗಳು ಹೇಳುತ್ತಿವೆ. ಈ ಎಲೆಕ್ಟ್ರಿಕ್ ಆಕ್ಟೀವಾ ಕುರಿತಂತೆ ಯಾವುದೇ ತಾಂತ್ರಿಕ ವಿವರಗಳು ಇನ್ನೂ ತಿಳಿದಿಲ್ಲ. ಆದರೆ ಇದರಲ್ಲಿ ಸ್ಥಿರ ಬ್ಯಾಟರಿ ಪ್ಯಾಕ್ ಅನ್ನು ಬಳಸಬಹುದು, ಜೊತೆಗೆ ಯೋಗ್ಯ ಶ್ರೇಣಿಯ ಸಾಮರ್ಥ್ಯಗಳನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

activa-ev-will-be-unveiled-2024-january-9th-know-more-details

ನಮಗಿರುವ ಮಾಹಿತಿಯ ಪ್ರಕಾರ, ಮುಂಬರಲಿರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ 50 kmph ಟಾಪ್ ಸ್ವೀಡ್ ಹೊಂದಿರಬಹುದು. ಸುರಕ್ಷತೆಯ ದೃಷ್ಟಿಯಿಂದ ಸ್ಥಿರ ಬ್ಯಾಟರಿ (fixed battery) ಆಯ್ಕೆಯನ್ನು ಪಡೆದಿರಲಿದೆ. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ 100 ಕಿ.ಮೀ ರೇಂಜ್ ನೀಡಲಿದೆ. ಹಾಗೆಯೇ ಈಗಿರುವ ಎಲ್ಲಾ ಇವಿಗಳಂತೆ ಹೆಚ್ಚಿನ ಡಿಜಿಟಲ್ ಫೀಚರ್‌ಗಳನ್ನು ಹೊಂದಿರಲಿದೆ.

ಸದ್ಯ ದೇಶದಲ್ಲಿ ಇಂಧನ ಚಾಲಿತ ಆಕ್ಟೀವಾಗೆ ಇರುವ ಕ್ರೇಜ್ ಎಲ್ಲರಿಗೂ ತಿಳಿದೇ ಇದೆ. ಈ ಸ್ಕೂಟರ್‌ಗೆ ಭಾರತದಲ್ಲಿ ವ್ಯಕ್ತವಾಗಿರುವ ಅಭೂತಪೂರ್ವ ಬೇಡಿಕೆಯನ್ನು ಎಲೆಕ್ಟ್ರಿಕ್ ಆವೃತ್ತಿಗೂ ಪಡೆಯಬೇಕಾದರೆ ವಿನ್ಯಾಸದಲ್ಲಿ ಹೆಚ್ಚಾಗಿ ಬದಲಾವಣೆ ಮಾಡಬಾರದು ಎಂಬುದು ಕಂಪನಿಯ ವಿಶ್ವಾಸವಾಗಿದೆ. ಹಾಗಾಗಿ ಹೊರಭಾಗದ ವಿನ್ಯಾಸ, ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಎಲ್ಲವೂ ಇಂಧನ ಚಾಲಿತ ಹೋಂಡಾ ಆಕ್ಟಿವಾಗೆ ಹೋಲುತ್ತದೆ.

activa-ev-will-be-unveiled-2024-january-9th-know-more-details

ಹೋಂಡಾ ತನ್ನ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸುವ ಮೊದಲು ಹಲವು ವರ್ಷಗಳ ಸುಧೀರ್ಘ ಪರೀಕ್ಷೆಯನ್ನು ಮಾಡಿದೆ. ಈ ಹಿಂದೆ ಇತರ ಬ್ರಾಂಡ್‌ಗಳ ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗಳಿಂದಾಗಿ ಹೆಚ್ಚಿನ ಜಾಗೃತಿ ವಹಿಸಿ ಇವಿ ಆಕ್ಟೀವಾವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದಲೇ ಮೊದಲು ಕಡಿಮೆ ಸಾಮರ್ಥ್ಯದ ಇವಿ ಆಕ್ಟೀವಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದಾದ ನಂತರ ತನ್ನ ಎರಡನೇ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬದಲಾಯಿಸಬಹುದಾದ ಬ್ಯಾಟರಿ (swappable battery) ಆಯ್ಕೆಯಲ್ಲಿ ಬಿಡುಗಡೆ ಮಾಡಲಿದೆ. ಅದಕ್ಕೂ ಮೊದಲು ದೇಶಾದ್ಯಂತ 6000 ಬ್ಯಾಟರಿ (battery swapping) ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡುತ್ತಿದೆ. ಪ್ರಮುಖವಾಗಿ ಹೋಂಡಾ ಆಕ್ಟಿವಾ ಎಲೆಕ್ರ್ಟಿಕ್ ಸ್ಕೂಟರ್ ತಯಾರಿಕೆಗೆ ಬಳಸುವ ಕಚ್ಚಾವಸ್ತುಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗುತ್ತದೆ ಎಂದು ವರದಿಯಾಗಿದೆ.

activa-ev-will-be-unveiled-2024-january-9th-know-more-details

ಸದ್ಯ ಭಾರತದಲ್ಲಿ ಓಲಾ, ಎಥರ್, ಟಿವಿಎಸ್ ಐಕ್ಯೂಬ್‌ನಂತಹ ಇವಿ ಸ್ಕೂಟರ್‌ಗಳು ಹೆಚ್ಚಾಗಿ ಮಾರಾಟದಲ್ಲಿವೆ. ಈ ಬ್ರಾಂಡ್‌ಗಳ ನಡುವೆ ಭರ್ಜರಿ ಪೈಪೋಟಿ ಕೂಡ ಇದೆ. ಅಲ್ಲದೇ ಕೆಲವು ಬೆಂಕಿ ಅವಘಡಗಳಿಂದ ಗ್ರಾಹಕರಿಗೆ ಇವಿ ಸ್ಕೂಟರ್‌ಗಳ ಮೇಲೆ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಇಷ್ಟೆಲ್ಲಾ ಕಠಿಣತೆಗಳನ್ನು ಮೀರಿ ಹೋಂಡಾ ಎಲೆಕ್ಟ್ರಿಕ್ ಆಕ್ಟೀವಾ ಜನರನ್ನು ತನ್ನತ್ತ ಸೆಳೆದು ಇವಿ ವಿಭಾಗದಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳಲಿದೆಯೇ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, January 3, 2024, 15:18 [IST]
English summary
Activa ev will be unveiled 2024 january 9th know more details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+