ಒಂದು ಲಕ್ಷದೊಳಗೆ ಸಿಗಲಿದೆ ಬಜಾಜ್‌ನ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌‌: ಕ್ರಾಂತಿ ಸೃಷ್ಟಿಸುತ್ತಾ ಹೊಸ ಚೇತಕ್‌!

ಬಜಾಜ್‌ ಚೇತಕ್‌ ಎಲೆಕ್ಟ್ರಿಕ್‌ ಸದ್ಯಕ್ಕೆ ಬಜಾಜ್‌ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಏಕಮಾತ್ರ ಎಲೆಕ್ಟ್ರಿಕ್‌ ವಾಹನ. ಈಗಾಗಲೇ ಕ್ಲಾಸಿಕ್ ಡಿಸೈನ್‌ ಮತ್ತು ಉತ್ತಮ ಪರ್ಫಾಮೆನ್ಸ್‌ನಿಂದ ಹೆಸರು ಗಳಿಸಿರುವ ಈ ಸ್ಕೂಟರ್‌ನ ಮತ್ತೊಂದು ಮಾದರಿಯನ್ನು ಬಜಾಜ್‌ ಸದ್ಯದಲ್ಲೇ ಮಾರುಕಟ್ಟೆಗೆ ತರಲಿದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.

2024ರ ಮೇ ತಿಂಗಳಲ್ಲಿ ಬಜಾಜ್‌ ಈಗಿರುವ ಚೇತಕ್‌ (Bajaj Chetak Electric) ಸ್ಕೂಟರ್‌ನ ಕಡಿಮೆ ಬಜೆಟ್‌ನ ಚೇತಕ್‌ ಅನ್ನು ಈ ತಿಂಗಳಲ್ಲಿ ಮಾರುಕಟ್ಟೆಗೆ ತರಲಿದೆ. ಈಗಾಗಲೇ ಈ ಚೇತಕ್‌ ಸ್ಕೂಟರ್‌ನ ಪೋಟೋಗಳು ಹರಿದಾಡುತ್ತಿದ್ದು, ಗ್ರಾಹಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮಾಹಿತಿಗಳ ಪ್ರಕಾರ ಈ ಚೇತಕ್‌ನಲ್ಲಿ ಸದ್ಯಕ್ಕೆ ಮಾರಾಟವಾಗುತ್ತಿರುವ ಚೇತಕ್‌ಗಿಂತ ಕಡಿಮೆ ಫೀಚರ್‌ಗಳು ಕಂಡು ಬರಲಿದೆ.

Affordable Bajaj Chetak Electric Scooter Image Surfaces In Internet Before Its Launch

ಅಲಾಯ್‌ ವ್ಹೀಲ್‌ಗಳ ಬದಲಾಗಿ ಸ್ಟೀಲ್‌ ವ್ಹೀಲ್‌ಗಳು, ಮೋನೋ ಕ್ರೋಮ್ ಟಿಎಫ್‌ಟಿ ಡಿಸ್ಪ್ಲೇಯೂ ಸಹ ಈ ಸ್ಕೂಟರ್‌ನಲ್ಲಿ ಸಿಗುವುದಿಲ್ಲ. ಅದೆ ರೀತಿ ಈ ಸ್ಕೂಟರ್‌ನಲ್ಲಿ ಲಾಕ್‌ ಮಾಡಬಹುದಾದ ಸ್ಟೋರೇಜ್‌ ಸಹ ಸಿಗುವುದಿಲ್ಲ ಎಂಬುದು ಸೋರಿಕೆಯಾಗಿರುವ ಚಿತ್ರಗಳಿಂದ ತಿಳಿದು ಬಂದಿದೆ. ಹೀಗೆ ಹಲವಾರು ಕಡೆ ಬದಲಾವಣೆಗಳನ್ನು ಮಾಡಿ ಕಡಿಮೆ ಬೆಲೆಗೆ ಬಜಾಜ್‌ ಈ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ತರಲಿದೆ. ಈ ಸ್ಕೂಟರ್‌ ಒಂದು ಲಕ್ಷ ರೂಪಾಯಿಯೊಳಗೆ ಲಾಂಚ್ ಆಗಲಿದೆ ಎಂದು ತಿಳಿದು ಬಂದಿದೆ

ಇನ್ನು ಹೊಸ ಈ ಚೇತಕ್‌ನಲ್ಲಿ ಈಗಿರುವ ಮಾದರಿಯ ಬ್ಯಾಟರಿಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿಯನ್ನು ಬಳಸಲಾಗುತ್ತದೆ ಮತ್ತು ಹಬ್‌ ಮೌಂಟೆಡ್‌ ಮೋಟಾರ್‌ ಸಹ ಇರಬಹುದು ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿಯೇ ಇದರ ಬೆಲೆ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್‌ ಇದೇ ತಿಂಗಳಲ್ಲಿ ಲಾಂಚ್‌ ಆಗಲಿದ್ದು ಎಲ್ಲರೂ ಸಹ ಎದುರು ನೋಡುತ್ತಿದ್ದಾರೆ.

Affordable Bajaj Chetak Electric Scooter Image Surfaces In Internet Before Its Launch

ದ್ಯಕ್ಕೆ ಮಾರುಕಟ್ಟೆಯಲ್ಲಿರುವ ಬಜಾಜ್‌ ಚೇತಕ್‌ ಇವಿ ಬಗ್ಗೆ ಹೇಳುವುದಾದರೆ, ಹೊಸ 2024ರ ಬಜಾಜ್ ಚೇತಕ್ ಪ್ರೀಮಿಯಂ ದೊಡ್ಡದಾದ 3.2kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಇದು ಸಿಂಗಲ್ ಚಾರ್ಜ್‌ನಲ್ಲಿ 126 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಇದರ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು 5.63bhp ಅನ್ನು 22.7Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 73 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಚೇತಕ್ ಸ್ಪೋರ್ಟ್ಸ್ ಮೋಡ್, ಹಿಲ್-ಹೋಲ್ಡ್, ಸೀಕ್ವೆನ್ಷಿಯಲ್ ಬ್ಲಿಂಕರ್‌ಗಳು, ರಿವರ್ಸ್ ಮೋಡ್, ಜಿಯೋಫೆನ್ಸಿಂಗ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದುವರೆಸಿದೆ. ಈ ಕೆಲವು ವೈಶಿಷ್ಟ್ಯಗಳನ್ನು ಆಯ್ಕೆಗೆ ಹೆಚ್ಚುವರಿ ಹಣ ಪಾವತಿಸಬೇಕಾಕಿದೆ.

Affordable Bajaj Chetak Electric Scooter Image Surfaces In Internet Before Its Launch

2024ರ ಬಜಾಜ್ ಚೇತಕ್ ಪ್ರೀಮಿಯಂ ರೆಟ್ರೊ ಲುಕ್, ಮೆಟಲ್ ಬಾಡಿ ಮತ್ತು ಓಹ್-ಸೋ-ಕಾಂಫರ್ಟೆಬಲ್ ಸೀಟ್ ಅನ್ನು ಉಳಿಸಿಕೊಂಡು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ. ನವೀಕರಣಗಳೊಂದಿಗೆ ಅಗ್ಗದ ಬೆಲೆಗೆ ಬಜಾಜ್ ಚೇತಕ್ ಇ-ಸ್ಕೂಟರ್ ಬಿಡುಗಡೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಅತ್ಯಾಧುನಿಕ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚಿನ ಬೇಡಿಕೆ ಬಂದರೂ ಅಚ್ಚರಿಯಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 8, 2024, 17:23 [IST]
English summary
Affordable bajaj chetak electric scooter image surfaces in internet before its launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+