ಬಡವರ ಬಂಡಿಗಳು: ಡ್ಯುಯಲ್-ಚಾನೆಲ್ ABS ಹೊಂದಿರುವ ಅಗ್ಗದ ಸುರಕ್ಷಿತ ಬೈಕ್‌ಗಳು!

ಅಮೆರಿಕಾ, ಜರ್ಮನಿ, ಬ್ರಿಟನ್‌ನಂತಹ ಮುಂದುವರಿದ ದೇಶಗಳಲ್ಲಿ ತಮ್ಮ ನಿತ್ಯ ಓಡಾಟಗಳಿಗೆ ಕಾರುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಈ ದೇಶಗಳಲ್ಲಿ ಮೋಟಾರ್‌ಸೈಕಲ್‌ಗಳ ಬಳಕೆ ತೀರಾ ಕಡಿಮೆ. ಆದ್ರೆ ಭಾರತದಂತಹ ದೇಶದಲ್ಲಿ ಸಾಮಾನ್ಯ ಜನರಿಗೆ ದ್ವಿಚಕ್ರ ವಾಹನಗಳೇ ಮೂಲಾಧಾರವಾಗಿವೆ. ಬೈಕ್ - ಸ್ಕೂಟರ್‌ಗಳನ್ನು ನಂಬಿಕೊಂಡು ಜೀವನ ನಡೆಸುವ ಹಲವು ಕುಟುಂಬಗಳಿವೆ. ಹಾಗಾಗಿಯೇ ದೇಶದಲ್ಲಿ ನಿತ್ಯ ಸಾವಿರಾರು ಬೈಕ್, ಸ್ಕೂಟರ್‌ಗಳು ಮಾರಾಟವಾಗುತ್ತವೆ. ವರ್ಷಗಳು ಕಳೆದಂತೆ ಆಧುನಿಕ ಫೀಚರ್ಸ್ ಹಾಗೂ ಸೇಫ್ಟಿಯನ್ನು ದ್ವಿಚಕ್ರ ವಾಹನಗಳಲ್ಲಿ ಪರಿಚಯಿಸುತ್ತಾ ಬರಲಾಗಿದೆ. ಇದರಲ್ಲಿ ಮುಖ್ಯವಾಗಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಬಗ್ಗೆ ಹೇಳಲೇಬೇಕು.

ದ್ವಿಚಕ್ರ ವಾಹನಗಳಲ್ಲಿ ABS ಎಂಬುದು ಅತಿದೊಡ್ಡ ಸುರಕ್ಷತಾ ವೈಶಿಷ್ಟ್ಯವಾಗಿದೆ. ಮೂಲತಃ ಇದೊಂದು ಎಲೆಕ್ಟ್ರಾನಿಕ್ ವ್ಯವಸ್ಥೆಯಾಗಿದ್ದು, ಪ್ಯಾನಿಕ್ ಬ್ರೇಕಿಂಗ್ ಸಂದರ್ಭದಲ್ಲಿ ಚಕ್ರಗಳನ್ನು ಸಂಪೂರ್ಣವಾಗಿ ಲಾಕ್ ಮಾಡುವುದನ್ನು ತಡೆಯುತ್ತದೆ, ಇಲ್ಲದಿದ್ದರೆ ವಾಹನವು ನಿಯಂತ್ರ ಕಳೆದುಕೊಳ್ಳುತ್ತದೆ. ಸ್ಕೂಟರ್‌ಗಳಲ್ಲಿ ಇದು ಅಪರೂಪವಾದರೂ, ಎಬಿಎಸ್ ಈಗ ಮೋಟಾರ್ ಸೈಕಲ್‌ಗಳಲ್ಲಿ ಹೆಚ್ಚಾಗಿ ನೀಡಲಾಗುತ್ತಿದೆ.

affordable-safest-bikes-with-dual-channel-abs

ಎಬಿಎಸ್ ಅನ್ನು ಸಿಂಗಲ್-ಚಾನೆಲ್ ಮತ್ತು ಡ್ಯುಯಲ್-ಚಾನೆಲ್ ಎಂಬ ಎರಡು ರೂಪಗಳಲ್ಲಿ ನೀಡಲಾಗುತ್ತದೆ. ಮೊದಲನೆಯದು ಮುಂಭಾಗದ ಚಕ್ರಕ್ಕೆ ಮಾತ್ರ ಸುರಕ್ಷತೆಯನ್ನು ಒದಗಿಸುತ್ತದೆ. ಎರಡನೆಯದು ಹಿಂಭಾಗದ ಚಕ್ರಗಳಿಗೂ ಸುರಕ್ಷತೆ ನೀಡುತ್ತದೆ. ಭಾರತದಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ನೀಡುವ ಟಾಪ್-5 ಅತ್ಯಂತ ಕೈಗೆಟುಕುವ ಮೋಟಾರ್ ಸೈಕಲ್‌ಗಳನ್ನು ಇಲ್ಲಿ ನೋಡೋಣ.

ಬಜಾಜ್ ಪಲ್ಸರ್ NS160: ಬಜಾಜ್ ಪಲ್ಸರ್ NS160 ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಅತ್ಯಂತ ಕೈಗೆಟುಕುವ ಬೈಕ್, ಇದರ ಬೆಲೆಯು ರೂ.1.37 (ಎಕ್ಸ್‌ ಶೂರೂಂ) ಲಕ್ಷಗಳಾಗಿದೆ. ಇದು 160 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 17.03 ಬಿಹೆಚ್‌ಪಿ ಪವರ್ ಮತ್ತು 14.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

affordable-safest-bikes-with-dual-channel-abs

ಬಜಾಜ್ ಪಲ್ಸರ್ N160: ಬಜಾಜ್ ಪಲ್ಸರ್ N160 ಕೂಡ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಇದರ ಬೆಲೆಯು ರೂ.1.32 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಪಲ್ಸರ್ N160 ಬೈಕ್ 164.82 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 15.7 ಬಿಹೆಚ್‌ಪಿ ಪವರ್ ಮತ್ತು 14.65 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಕೂಡ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಟಿವಿಎಸ್ ಅಪಾಚೆ RTR 200 4v: ಟಿವಿಎಸ್ ಅಪಾಚೆ RTR 200 4v ಬೈಕಿನ ಡ್ಯುಯಲ್ ಚಾನೆಲ್ ಎಬಿಎಸ್ ವೇರಿಯೆಂಟ್ ಬೆಲೆಯು ರೂ.1.49 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಈ ಬೈಕ್ 197.75 ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 20.2 ಬಿಹೆಚ್‌ಪಿ ಪವರ್ ಮತ್ತು 16.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

affordable-safest-bikes-with-dual-channel-abs

ಬಜಾಜ್ ಪಲ್ಸರ್ N250/F250: ಪಲ್ಸರ್ N250 ಮತ್ತು F250 ಬೈಕುಗಳನ್ನು ರೂ.1.51 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ನೀಡಲಾಗುತ್ತದೆ. ಈ ಬೈಕ್‌ಗಳು 249 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 24.1 ಬಿಹೆಚ್‌ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. 5 ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ.

ಬಜಾಜ್ ಪಲ್ಸರ್ NS200: ಬಜಾಜ್ ಪಲ್ಸರ್ NS200 ಬೆಲೆಯು ರೂ.150 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಪಲ್ಸರ್ NS200 ಬೈಕಿನಲ್ಲಿ 199 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 24.13 ಬಿಹೆಚ್‌ಪಿ ಪವರ್ ಮತ್ತು 18.74 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್‌ಗೇರ್ ಬಾಕ್ಸ್‌ನೊಂದಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡಲಾಗಿದೆ.

Article Published On: Saturday, June 29, 2024, 16:58 [IST]
English summary
Affordable safest bikes with dual channel abs
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+