Aprilia: ಒಂದೇ ದಿನ 51 ಎಪ್ರಿಲಿಯಾ ಆರ್‌ಎಸ್457 ಬೈಕ್ ವಿತರಣೆ.. ಇದರ ಬೆಲೆಗೆ ಆಲ್ಟೊ ಕಾರು ಬರುತ್ತೆ!

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಲಕ್ಷಗಟ್ಟಲೆ ಹಣವನ್ನು ಕೊಟ್ಟು ಐಷಾರಾಮಿ ಬೈಕ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅದರಲ್ಲೂ ಇಟಲಿ ಮೂಲದ ಎಪ್ರಿಲಿಯಾ (Aprilia) ಮಾರಾಟಗೊಳಿಸುವ ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ದೇಶೀಯ ಗ್ರಾಹಕರು ಮನಸೋತಿದ್ದು, ತಾಮುಂದು - ನಾಮುಂದು ಎಂಬಂತೆ ಕೊಂಡುಕೊಳುತ್ತಿದ್ದಾರೆ. ಕಂಪನಿಯು ಸಹ ದೊಡ್ಡಸಂಖ್ಯೆಯಲ್ಲಿ 'ಆರ್‌ಎಸ್457' ಬೈಕ್‌ಗಳನ್ನು ವಿತರಣೆ ಮಾಡುತ್ತಿದ್ದು, ಮತ್ತಷ್ಟು ಯುವ ಜನರನ್ನು ಸೆಳೆಯಲು ಬಾಲಿವುಡ್‌ ಜನಪ್ರಿಯ ನಟ ಜಾನ್ ಅಬ್ರಹಾಂ (John Abraham) ಅವರನ್ನು 'ಎಪ್ರಿಲಿಯಾ'ದ ಭಾರತದ ರಾಯಭಾರಿಯಾಗಿಯೂ ನೇಮಕ ಮಾಡಿಕೊಳ್ಳಲಾಗಿದೆ.

ನವದೆಹಲಿಯಲ್ಲಿ ಆರಂಭಿಸಲಾಗಿರುವ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಹೊಸ ಮೋಟೋಪ್ಲೆಕ್ಸ್ ಡೀಲರ್‌ಶಿಪ್‌ನಲ್ಲಿ, ಒಂದೇ ದಿನ 51 ಯುನಿಟ್ ಎಪ್ರಿಲಿಯಾ ಆರ್‌ಎಸ್457 (Aprilia RS457) ಮೋಟಾರ್‌ಸೈಕಲ್‌ಗಳನ್ನು ಡೆಲಿವರಿ ಮಾಡಲಾಗಿದೆ. ಇದು ದೆಹಲಿಯ ಮೊಟ್ಟ ಮೊದಲ ಮೋಟೋಪ್ಲೆಕ್ಸ್ ಡೀಲರ್‌ಶಿಪ್ ಆಗಿದ್ದು, ಇಲ್ಲಿ ಎಪ್ರಿಲಿಯಾ ಪೋರ್ಟ್‌ಫೋಲಿಯೊದ ಪ್ರತಿಯೊಂದು ಬೈಕ್‌ಗಳನ್ನು ಮಾರಾಟ ಮಾಡಲಾಗುತ್ತದೆ.

Aprilia Delivers 51 RS457 Bikes Single Day Rs 4 10 Lakh Price 30 Km Mileage

ಸದ್ಯ ದೇಶೀಯವಾಗಿ ಲಭ್ಯವಿರುವ ಎಪ್ರಿಲಿಯಾ ಆರ್‌ಎಸ್457 ಬೈಕ್, ರೂ.4.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 457 ಸಿಸಿ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 46.9 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 43.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಈ ಎಪ್ರಿಲಿಯಾ ಆರ್‌ಎಸ್457 ಮೋಟಾರ್‌ಸೈಕಲ್‌ 30 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 5-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಎಲ್ಇಡಿ ಲೈಟಿಂಗ್ ಸೆಟಪ್, ರೈಡ್-ಬೈ-ವೈರ್ ಸಿಸ್ಟಮ್‌ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸ್ಪೋರ್ಟ್, ರೋಡ್ ಮತ್ತು ರೈನ್ ಎಂಬ ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ.

ನೂತನ ಆರ್‌ಎಸ್457 ಬೈಕ್, ಮುಂಭಾಗ (ಫ್ರಂಟ್) 320 ಎಂಎಂ ಹಾಗೂ ಹಿಂಭಾಗ (ರೇರ್) 220 ಎಂಎಂ ಡಿಸ್ಕ್ ಬ್ರೇಕ್‌ನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕೂಡ ಒಳಗೊಂಡಿದೆ. 17-ಇಂಚಿನ ಅಲಾಯ್ ವೀಲ್ಸ್ ಹೊಂದಿರುವ ಈ ಮೋಟಾರ್‌ಸೈಕಲ್‌, ಟ್ಯೂಬ್ ಲೆಸ್ ಟೈಯರ್‌ಗಳನ್ನು ಪಡೆದಿದೆ. ಬರೋಬ್ಬರಿ 175 ಕೆಜಿ ತೂಕವಿದೆ.

ಎಪ್ರಿಲಿಯಾ ಆರ್‌ಎಸ್‌ವಿ4 (Aprilia RSV4) ಮೋಟಾರ್‌ಸೈಕಲ್‌ ಬಗ್ಗೆ ಹೇಳುವುದಾದರೆ, ಇದು 23.69 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 1099 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 217 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 125 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 15.4 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. 5-ಇಂಚಿನ ಟಿಎಫ್‌ಟಿ ಕನ್ಸೋಲ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ನಿಮಗೆ ಗೊತ್ತಿರಲಿ.. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಾರು ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 20, 2024, 18:11 [IST]
English summary
Aprilia delivers 51 rs457 bikes single day rs 4 lakh price 30 km mileage
Read more on aprilia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+